ಕ್ರಿಕೆಟ್ ಲೆಜೆಂಡ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ಅಂಜಲಿ ಮೆಹತಾ ನಡುವಿನ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ ಇಲ್ಲಿದೆ ನೋಡಿ

ಬೆಂಗಳೂರು: ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಆನ್‌ಫೀಲ್ಡ್ ರಿಕಾರ್ಡ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಒಂದು ದಶಕವೇ ಕಳೆದರೂ ಒಂದಿಲ್ಲೊಂದು ವಿಚಾರಕ್ಕೆ ಮಾಸ್ಟರ್ ಬ್ಲಾಸ್ಟರ್ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಸಚಿನ್ ತೆಂಡುಲ್ಕರ್ ಅವರ ಆನ್‌ಫೀಲ್ಡ್‌ಗಿಂತ ಆಫ್ ಫೀಲ್ಡ್‌ ಲವ್ ಸ್ಟೋರಿ ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ.

ಸಚಿನ್ ತೆಂಡುಲ್ಕರ್ ಕೇವಲ 17 ವರ್ಷದವರಿದ್ದಾಗಲೇ ಅವರಿಗೆ ತಮಗಿಂತ 6 ವರ್ಷ ದೊಡ್ಡವರಾದ ಅಂಜಲಿ ಮೆಹತಾ ಮೇಲೆ ಲವ್ ಆಗುತ್ತದೆ. ಏರ್‌ಪೋರ್ಟ್‌ನಲ್ಲಿ ಅಂಜಲಿಯನ್ನು ನೋಡುತ್ತಿದ್ದಂತೆಯೇ ಮೊದಲ ನೋಟದಲ್ಲೇ ಸಚಿನ್‌ಗೆ ಲವ್ ಆಗುತ್ತದೆ. ತಡ ಮಾಡದ ಸಚಿನ್ ತೆಂಡುಲ್ಕರ್ ಅವರ ಹಿಂದೆಯೇ ಓಡುತ್ತಾರೆ. ಅವರ ಲವ್‌ ಸ್ಟೋರಿ ಕೇಳಿದ್ರೆ ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯೇನಿಲ್ಲ.

ತಂದೆಯಂತೆ ಮಗ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿದ ಸಮಿತ್ ದ್ರಾವಿಡ್‌..! ವಿಡಿಯೋ ವೈರಲ್

ಹೌದು, ಸಚಿನ್ ತೆಂಡುಲ್ಕರ್ ಹಾಗೂ ಅಂಜಲಿ ಮೆಹತಾ 1990ರಲ್ಲಿ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಾರೆ. ಆಗ ತೆಂಡುಲ್ಕರ್ ವಯಸ್ಸು ಕೇವಲ 17 ವರ್ಷ. ಆಗ ಸಚಿನ್ ಇಂಗ್ಲೆಂಡ್ ಎದುರಿನ ಕ್ರಿಕೆಟ್ ಸರಣಿ ಮುಗಿಸಿ ತವರಿಗೆ ವಾಪಾಸಾಗುತ್ತಿದ್ದರು. ಆ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಯಾರು? ಅವರೇನು ಮಾಡುತ್ತಾರೆ ಎನ್ನುವುದೇ ಗೊತ್ತಿರಲಿಲ್ಲ. ಆಗ ನನ್ನ ಜತೆಗಿದ್ದ ಒಬ್ಬ ಸ್ನೇಹಿತ ಇವರು ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಈಗಾಗಲೇ ಇವರು ಶತಕ ಬಾರಿಸಿದ್ದಾರೆ ಎಂದು ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ಈ ಘಟನೆಯ ಕುರಿತಂತೆ ಅಂಜಲಿ ಹೇಳಿದ್ದರು.

ಇದಾದ ಬಳಿಕ ಸಾಕಷ್ಟು ಕಸರತ್ತು ನಡೆಸಿದ ಅಂಜಲಿ ಅಂಜಲಿಯವರ ಹೇಗೋ ಮಾಡಿ ತೆಂಡುಲ್ಕರ್ ಫೋನ್ ನಂಬರ್ ಕಲೆಕ್ಟ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ತಡ ಮಾಡದೇ ಸಚಿನ್‌ಗೆ ಫೋನ್ ಮಾಡಿದರು. ಅದೃಷ್ಟಕ್ಕೆ ಸಚಿನ್ ಫೋನ್ ರಿಸೀವ್ ಮಾಡಿದರು. ಆಗ, "ನಾನು ಅಂಜಲಿ ಮಾತನಾಡುತ್ತಿದ್ದೇನೆ. ನಾನು ನಿಮ್ಮನ್ನು ಏರ್‌ಪೋರ್ಟ್‌ನಲ್ಲಿ ನೋಡಿದೆ ಎಂದು ಹೇಳಿದೆ. ಆಗ ಅವರು ಓಹ್ ನೆನಪಿದೆಯಲ್ವಾ ಅಂದರು. ಆಗ ನಾನು ಯಾವ ಬಣ್ಣದ ಶರ್ಟ್ ಹಾಕಿದ್ದೆ ಹೇಳು ಎಂದು ಕೇಳಿದರು. ನಾನು ಆಗ ಕಿತ್ತಳೆ ಬಣ್ಣದ ಟಿ ಶರ್ಟ್ ಹಾಕಿದ್ರಿ ಎಂದು ಹೇಳಿದೆ. ಇಲ್ಲಿಂದ ಇವರ ಲವ್ ಸ್ಟೋರಿ ಆರಂಭವಾಯಿತು. ಬಳಿಕ 24 ಮೇ 1995ರಲ್ಲಿ ಈ ಜೋಡಿ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ಏನ್ ದುರಂತ ಇದು..! ಪಾಕ್‌ನ 2 ಕ್ರೀಡಾಂಗಣದಲ್ಲಿ ಬಾಡಿಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಿರುವ ಪಿಸಿಬಿ!

ಇನ್ನೊಂದು ಸಂದರ್ಶನದಲ್ಲಿ ಅಂಜಲಿ, ನಾನು ಹಾಗೂ ಸಚಿನ್ ಅವರು ಭೇಟಿಯಾಗುವುದು ಮೊದಲೇ ಹಣೆಬರಹದಲ್ಲೇ ಬರೆದಿತ್ತೇನೋ ಎಂದು ಹೇಳಿದ್ದರು. ಯಾಕೆಂದರೆ ಇದಕ್ಕೂ ಮೊದಲೇ ಎರಡು ಬಾರಿ ತೆಂಡುಲ್ಕರ್ ಅವರನ್ನು ಭೇಟಿಯಾಗುವ ಅವಕಾಶವಿದ್ದರೂ ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇರಲಿಲ್ಲವಾದ್ದರಿಂದ ನಾನು ಭೇಟಿ ಮಾಡಿರಲಿಲ್ಲ ಎಂದು ಆ ದಿನಗಳನ್ನು ಅಂಜಲಿ ಮೆಲುಕು ಹಾಕಿದ್ದಾರೆ. ನಾನು ಇಂಗ್ಲೆಂಡ್‌ನಲ್ಲಿದ್ದಾಗ ಸಚಿನ್ ತೆಂಡುಲ್ಕರ್ ಸ್ಟಾರ್ ಕ್ರಿಕೆಟ್ ಕ್ಲಬ್ ಜತೆಗಿದ್ದರು. ಆಗ ನನ್ನ ತಂದೆ ಭಾರತ ಕ್ರಿಕೆಟ್ ತಂಡವು ಆಡುತ್ತಿದೆ. ನಾನು ಅಲ್ಲಿ ಒಬ್ಬ ಹುಡುಗನನ್ನು ಭೇಟಿಯಾಗುವುದಿದೆ, ಆತ ಈಗಾಗಲೇ ಶತಕ ಬಾರಿಸಿದ್ದಾನೆ ನೀನು ಬಾ ಎಂದು ಕರೆದರು. ಆದರೆ ನನಗೆ ಕ್ರಿಕೆಟ್ ಬಗ್ಗೆ ಆಸಕ್ತಿಯಿಲ್ಲವೆಂದು ನಿರಾಕರಿಸಿದ್ದೆ ಎಂದು ಅಂಜಲಿ ಹೇಳಿದ್ದರು.