ಪುಣೆ(ಅ.10): ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹರಿಗಣಗಳ ವಿರುದ್ದದ ಈ ಪಂದ್ಯ ಕೊಹ್ಲಿ ನಾಯಕನಾಗಿ 50ನೇ ಟೆಸ್ಟ್ ಪಂದ್ಯ. ಇಷ್ಟೇ ಅಲ್ಲ ಟೆಸ್ಟ್ ನಾಯಕನಾಗಿ 50ನೇ ಪಂದ್ಯ ಆಡೋ ಮೂಲಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ಪುಣೆ ಟೆಸ್ಟ್: ಮಯಾಂಕ್ ಶತಕ, ಟೀಂ ಇಂಡಿಯಾಗೆ ಮೊದಲ ದಿನದ ಗೌರವ

2000ದಿಂದ 2005ರ ವರಗೆ 49 ಟೆಸ್ಟ್ ಪಂದ್ಯದಲ್ಲಿ ಸೌರವ್ ಗಂಗೂಲಿ ಟೀಂ ಇಂಡಿಯವನ್ನು ಮುನ್ನಡೆಸಿದ್ದಾರೆ. ಇದೀಗ ಕೊಹ್ಲಿ 50 ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸೋ ಮೂಲಕ ದಾದಾ ದಾಖಲೆ ಮುರಿದಿದ್ದಾರೆ. ಈ ಮೂಲಕ ಕೊಹ್ಲಿ 50ಕ್ಕೂ ಹೆಚ್ಚು ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ 2ನೇ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಅರ್ಧಶತಕ ಪೂರೈಸಿದ ನಾಯಕ ವಿರಾಟ್ ಕೊಹ್ಲಿ

ಗರಿಷ್ಠ ಪಂದ್ಯಗಳಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಹೆಗ್ಗಳಿಕೆಗೆ ಎಂ.ಎಸ್.ಧೋನಿ ಪಾತ್ರರಾಗಿದ್ದಾರೆ. 2008 ರಿಂದ 2014ರ ವರೆಗೆ ಧೋನಿ 60 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದರು. ಕೊಹ್ಲಿ ನಾಯಕನಾಗಿ 50ನೇ ಪಂದ್ಯಕ್ಕೆ ಬಿಸಿಸಿಐ ಶುಭಕೋರಿದೆ.

 

ಇದನ್ನೂ ಓದಿ: INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

ಟೆಸ್ಟ್ ಗೆಲುವಿನ ಸರಾಸರಿಯಲ್ಲಿ ವಿರಾಟ್ ಕೊಹ್ಲಿ ಭಾರತದ ಶ್ರೇಷ್ಠ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಕೊಹ್ಲಿ ಗೆಲುವಿನ ಸರಾಸರಿ 58. ವಿರಾಟ್ ಕೊಹ್ಲಿ ನಾಯಕತ್ವದ ಪುಣೆ ಪಂದ್ಯವನ್ನು ಹೊರತುಪಡಿಸಿದರೆ 49 ಟೆಸ್ಟ್ ಪಂದ್ಯಗಳಲ್ಲಿ 29 ಗೆಲುವು ಸಾಧಿಸಿದ್ದಾರೆ. ಧೋನಿ 60 ಪಂದ್ಯಗಳಲ್ಲಿ 27 ಗೆಲುವು ಸಾಧಿಸಿದ್ದರೆ, ಸೌರವ್ ಗಂಗೂಲಿ 21 ಗೆಲುವು ಕಂಡಿದ್ದಾರೆ.

ಗರಿಷ್ಠ ಗೆಲುವು ದಾಖಲಿಸಿದ ವಿಶ್ವನಾಯಕರ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ 53 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 48 ಗೆಲುವಿನ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಮನವಿ; ಭಾರತೀಯರಿಂದ ಸಕಾರಾತ್ಮಕ ಸ್ಪಂದನೆ!

ಸೌತ್ ಆಫ್ರಿಕಾ ವಿರುದ್ಧದ ಪುಣೆ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಉತ್ತಮ ಹೋರಾಟ ನೀಡಿದೆ. 3 ವಿಕೆಟ್ ನಷ್ಟಕ್ಕೆ 273 ರನ್ ಸಿಡಿಸಿದೆ. ಪುಣೆ ಪಂದ್ಯದ ಬಳಿಕ ಅಕ್ಟೋಬರ್ 19 ರಂದು ರಾಂಚಿಯಲ್ಲಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.