ಪುಣೆ[ಅ.10]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 23ನೇ ಅರ್ಧಶತಕ ಪೂರೈಸಿದ್ದಾರೆ. ವೆರ್ನಾನ್ ಫಿಲಾಂಡರ್ ಎಸೆತದಲ್ಲಿ ಅದ್ಭುತ ಕವರ್ ಡ್ರೈವ್ ಮೂಲಕ ಕೊಹ್ಲಿ 50+ ರನ್ ಬಾರಿಸಿದರು.

ಸೆಹ್ವಾಗ್ ಹಾದಿಯಲ್ಲಿ ಮಯಾಂಕ್; ಕನ್ನಡಿಗನನ್ನು ಕೊಂಡಾಡಿದ ಟ್ವಿಟರಿಗರು..!

INDvSA:ಸತತ 2ನೇ ಶತಕ; ಸೆಹ್ವಾಗ್ ದಾಖಲೆ ಸರಿಗಟ್ಟಿದ ಮಯಾಂಕ್!

ಚೇತೇಶ್ವರ್ ಪೂಜಾರ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ಕೊಹ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದರು. ವೈಜಾಗ್’ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಲು ವಿಫಲರಾಗಿದ್ದರು. ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಕೊಹ್ಲಿ ಎರಡನೇ ಇನಿಂಗ್ಸ್’ನಲ್ಲಿ ಅಜೇಯ 31 ರನ್ ಬಾರಿಸಿ ಅಜೇಯರಾಗುಳಿದಿದ್ದರು. ಹೀಗಾಗಿ 2018ರ ಬಳಿಕ ಮೊದಲ ಬಾರಿಗೆ ಕೊಹ್ಲಿ 900ಕ್ಕಿಂತ ಕಡಿಮೆ ರೇಟಿಂಗ್ ಅಂಕಕ್ಕೆ ಕುಸಿದಿದ್ದರು. ಇದೀಗ ಅರ್ಧಶತಕ ಸಿಡಿಸುವುದರೊಂದಿಗೆ ಕೊಹ್ಲಿ ಮತ್ತೆ ಫಾರ್ಮ್’ಗೆ ಮರಳಿದ್ದಾರೆ.

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌ಗೆ ಬಂಪರ್..

ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಸಹಿತ 53 ರನ್ ಬಾರಿಸಿದ್ದಾರೆ. ನಾಯಕ ಕೊಹ್ಲಿಗೆ ಉಪನಾಯಕ ಅಜಿಂಕ್ಯ ರಹಾನೆ 14 ರನ್ ಬಾರಿಸಿ ಸಾಥ್ ನೀಡಿದ್ದಾರೆ. ಇದೀಗ ಟೀಂ ಇಂಡಿಯಾ 83 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 264 ರನ್ ಬಾರಿಸಿದೆ.