ಪುಣೆ(ಅ.10): ಕನ್ನಡಿಗ ಮಯಾಂಕ್ ಅಗರ್ವಾಲ್ ಸತತ 2ನೇ ಸೆಂಚುರಿ ಸಿಡಿಸಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ ಆಕರ್ಷಕ ಸೆಂಚುರಿ ಬಾರಿಸಿದರು. ವಿಶಾಖಪಟ್ಟಣಂ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ಮಯಾಂಕ್, ಇದೀಗ ಪುಣೆ ಪಂದ್ಯದಲ್ಲೂ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ವಿರೇಂದ್ರ ಸೆಹ್ವಾಗ್ ದಾಖಲೆ ಸರಿಗಟ್ಟಿದ್ದಾರೆ.

 

ಇದನ್ನೂ ಓದಿ: ಚೊಚ್ಚಲ ಡಬಲ್ ಸೆಂಚುರಿ; ಕನ್ನಡಿಗ ಮಯಾಂಕ್ ಸಾಧನೆ ಸಲಾಂ!

ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಕಟ್ಟಿದ ಮಯಾಂಕ್ ಅಗರ್ವಾಲ್ ಸೆಂಚುರಿ ಪೂರೈಸಿದ್ದಾರೆ. ಸೌತ್ ಆಫ್ರಿಕಾ ವಿರುದ್ದ ಸತತ 2 ಸೆಂಚುರಿ ಸಿಡಿಸಿದ ಭಾರತದ 2ನೇ ಆರಂಭಿಕ ಅನ್ನೋ ದಾಖಲೆಗೆ ಮಯಾಂಕ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2009-10ರಲ್ಲಿ ಸೌತ್ ಆಫ್ರಿಕಾ ವಿರುದ್ಧ ವಿರೇಂದ್ರ ಸೆಹ್ವಾಗ್ ಸತತ 2 ಸೆಂಚುರಿ ಸಿಡಿಸಿದ್ದರು.

ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ರೋಹಿತ್‌, ಮಯಾಂಕ್ಗೆ ಬಂಪರ್..!

ಮಯಾಂಕ್ ಅಗರ್ವಾಲ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದರೆ, ಕಳೆದ ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ 14 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದಾರೆ. ಚೇತೇಶ್ವರ್ ಪೂಜಾರಾ 58 ರನ್ ಕಾಣಿಕೆ ನೀಡಿದ್ದಾರೆ.  ಸೆಂಚುರಿ ಸಿಡಿಸಿದ ಬೆನ್ನಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಪತನಗೊಂಡಿತು. ಮಯಾಂಕ್ 108 ರನ್ ಸಿಡಿಸಿ ನಿರ್ಗಮಿಸಿದರು. 

ಮಯಾಂಕ್ ಸೆಂಚುರಿ ಮೂಲಕ ಒಂದು ಸರಣಿಯಲ್ಲಿ ಆರಂಭಿಕರಿಂದ 4 ಶತಕಗಳು ಮೂಡಿಬಂದಿದೆ. ಕಳೆದ ಪಂದ್ಯದಲ್ಲಿ ಮಯಾಂಕ್ 1 ಹಾಗೂ ರೋಹಿತ್ 2 ಸೆಂಚುರಿ ಸಿಡಿಸಿದ್ದರು. ಇದೀಗ ಮಯಾಂಕ್ ಮತ್ತೊಂದು ಶತಕ ಸಿಡಿಸೋ ಮೂಲಕ ಒಟ್ಟು 4 ಶತಕ ದಾಖಲಾಗಿವೆ. 

ಒಂದೇ ಸರಣಿಯಲ್ಲಿ ಗರಿಷ್ಠ ಶತಕ(ಆರಂಭಿಕರಿಂದ)
vs WI 1970/71 (ವಿದೇಶ)
vs WI 1978/79 (ಭಾರತ )
vs SL 2009/10 (ಭಾರತ)
vs SA 2019/20 (ಭಾರತ)