ಲಾಹೋರ್(ಅ.09); ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇದಕ್ಕೆ ಪಾಕಿಸ್ತಾನ ಕೂಡ ಹೊರತಾಗಿಲ್ಲ. ಪಾಕಿಸ್ತಾನದ್ದಿ ಕೊಹ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದಾರೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಪಾಕ್ ಅಭಿಮಾನಿಯೋರ್ವ ವಿರಾಟ್ ಕೊಹ್ಲಿಗೆ ವಿಶೇಷ ಮನವಿ ಮಾಡಿದ್ದಾನೆ. ಪೋಸ್ಟ್ ಹಿಡಿದು ಮನವಿ ಮಾಡಿದ ಅಭಿಮಾನಿಗೆ ಭಾರತೀಯರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. 

ಇದನ್ನೂ ಓದಿ: ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ ಹಿಂದಿಕ್ಕಿ ಕ್ಷಮೆ ಕೇಳಿದ ನೆದರ್ಲೆಂಡ್ ಕ್ರಿಕೆಟಿಗ!

ಪಾಕ್ ಹಾಗೂ ಲಂಕಾ ಪಂದ್ಯದ ನಡುವೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಯೋರ್ವ ಕೊಹ್ಲಿಗೆ ಮನವಿ ಮಾಡಿದ್ದಾನೆ. ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಬಂದು ಕ್ರಿಕೆಟ್ ಆಡುವುದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ನಾನು ಕೊಹ್ಲಿಯ ಅತಿ ದೊಡ್ಡ ಅಭಿಮಾನಿ. ಪ್ರೀತಿಯಿಂದ ಪಾಕ್ ಅಭಿಮಾನಿ ಎಂದು ಪೋಸ್ಟರ್ ಹಿಡಿದು ವಿಶ್ವದ ಗಮನಸೆಳೆದಿದ್ದಾನೆ.

 

ಇದನ್ನೂ ಓದಿ: ಟ್ಯಾಟೂ ಅಭಿ​ಮಾ​ನಿಯ ಮೆಚ್ಚಿ ಅಪ್ಪಿದ ಕೊಹ್ಲಿ!

ಕೊಹ್ಲಿಯ ಪಾಕಿಸ್ತಾನ ಅಭಿಮಾನಿಗೆ ಭಾರತೀಯರು ಸ್ಪಂದಿಸಿದ್ದಾರೆ. ಉಭಯ ದೇಶದ ಸಂಬಂಧ ಉತ್ತಮವಾದರೆ ಶೀಘ್ರದಲ್ಲೇ ನಿಮ್ಮ ಕನಸು ನನಸಾಗಲಿದೆ. ಮುಂದೊಂದು ದಿನ ನಿಮ್ಮ ಕನಸು ನನಸಾಗಲಿದೆ ಎಂದು ಭಾರತೀಯರು ಪ್ರತಿಕ್ರಿಯಿಸಿದ್ದಾರೆ.