ICC Test Rankings: ಆಸೀಸ್‌ಗೆ ನಂ.1 ಸ್ಥಾನ, 2ನೇ ಸಾನಕ್ಕೆ ಕುಸಿದ ಭಾರತ..!

ಭಾರತ ಟಿ20 ಹಾಗೂ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದು ಕೊಂಡಿದೆ. ಭಾರತ 122 ಅಂಕ ಹೊಂದಿದ್ದರೆ, ಆಸ್ಟ್ರೇಲಿಯಾ 116 ಅಂಕಗ ಸಂಪಾದಿಸಿದೆ. ದ.ಆಫ್ರಿಕಾ(112), ಪಾಕಿಸ್ತಾನ(106) ಹಾಗೂ ನ್ಯೂಜಿಲೆಂಡ್ (101) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

India Slip to Second in ICC Test Rankings After Australia Claim top Position kvn

ದುಬೈ: ಐಸಿಸಿ ವಿಶ್ವ ಟೆಸ್ಟ್‌ನ ವಾರ್ಷಿಕ  ರ್‍ಯಾಂಕಿಂಗ್‌‌ನಲ್ಲಿ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು, ಟೀಂ ಇಂಡಿಯಾ 2ನೇ ಸ್ಥಾನಕ್ಕೆ ಕುಸಿದಿದೆ. ಶುಕ್ರವಾರ ಐಸಿಸಿ ನೂತನ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಿಸಿತು. ಪ್ಯಾಟ್ ಕಮಿನ್ಸ್ ನೇತೃತ್ವದ ಹಾಲಿ ಚಾಂಪಿಯನ್ದ ಆಸ್ಟ್ರೇಲಿಯಾ 124 ಅಂಕ ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ 120 ಅಂಕ ಹೊಂದಿದೆ. ಇಂಗ್ಲೆಂಡ್ 105 ಅಂಕಗಳೊಂದಿಗೆ 3ನೇ, ದಕ್ಷಿಣ ಆಫ್ರಿಕಾ 103 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ.

ಆದರೆ ಭಾರತ ಟಿ20 ಹಾಗೂ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದು ಕೊಂಡಿದೆ. ಭಾರತ 122 ಅಂಕ ಹೊಂದಿದ್ದರೆ, ಆಸ್ಟ್ರೇಲಿಯಾ 116 ಅಂಕಗ ಸಂಪಾದಿಸಿದೆ. ದ.ಆಫ್ರಿಕಾ(112), ಪಾಕಿಸ್ತಾನ(106) ಹಾಗೂ ನ್ಯೂಜಿಲೆಂಡ್ (101) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಇನ್ನು ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ 264 ಅಂಕ, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 257 ಅಂಕ ಹೊಂದಿದೆ. ಇಂಗ್ಲೆಂಡ್ (252), ಆಫ್ರಿಕಾ (250), ನ್ಯೂಜಿಲೆಂಡ್ (250) ಕ್ರಮವಾಗಿ 3, 4, 5ನೇ ಸ್ಥಾನಗಳಲ್ಲಿವೆ. ಇನ್ನು ನೆರೆಯ ಪಾಕಿಸ್ತಾನ ತಂಡವು ಎರಡು ಸ್ಥಾನ ಕುಸಿತ ಕಂಡು ಟಿ20 ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಜಾರಿದೆ. ಇನ್ನು ಸ್ಕಾಟ್ಲೆಂಡ್ ತಂಡವು ಜಿಂಬಾಬ್ವೆ ತಂಡವನ್ನು ಹಿಂದಿಕ್ಕಿ 12ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ 86 ದೇಶಗಳು ಕನಿಷ್ಠ 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿವೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿ ಟಿ20 ವಿಶ್ವಕಪ್: ಕನ್ನಡಿಗ ಜಾವಗಲ್ ಶ್ರೀನಾಥ್ ಮ್ಯಾಚ್ ರೆಫ್ರಿ

ದುಬೈ: ಮುಂಬರುವ ಜೂನ್ 01ರಿಂದ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್ ಮೊದಲ ಸುತ್ತಿನ ಪಂದ್ಯಗಳಿಗೆ ಐಸಿಸಿಯು ಶುಕ್ರವಾರ ಅಂಪೈರ್‌ಗಳು ಹಾಗೂ ಮ್ಯಾಚ್ ರೆಫ್ರಿಗಳ ಹೆಸರುಗಳನ್ನು ಪ್ರಕಟಿಸಿದೆ.

ಕರ್ನಾಟಕದ ಜಾವಗಲ್ ಶ್ರೀನಾಥ್ ಸೇರಿದಂತೆ ಆರು ಮಂದಿ ಮ್ಯಾಚ್ ರೆಫ್ರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಭಾರತದ ನಿತಿನ್ ಮೆನನ್ ಹಾಗೂ ಜಯರಾಮನ್ ಮದನ್‌ಗೋಪಾಲ್ ಅಂಪೈರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 
 

Latest Videos
Follow Us:
Download App:
  • android
  • ios