ಪ್ರಜ್ವಲ್ ರೇವಣ್ಣ ಕೇಸ್: ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ, ಕೃಷ್ಣಭೈರೇಗೌಡ
ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಆಗಿದೆ. ನಾನು ಕಂಡ ಹಾಗೇ ಪ್ರಪಂಚದಲ್ಲಿ ಎಲ್ಲಿಯೂ ಇಷ್ಟು ದೊಡ್ಡ ಪ್ರಕರಣ ನಡೆದಿಲ್ಲ. ಇಲ್ಲಿಯವರೆಗೆ ಎಷ್ಟು ಮಹಿಳೆಯರು ಅಂತ ಲೆಕ್ಕಕ್ಕೂ ಸಿಕ್ಕಿಲ್ಲ. ಹಾಸನದ ಸ್ಥಳೀಯರು ಹೇಳುವ ಪ್ರಕಾರ ನೂರಾರು ಮಹಿಳೆಯರು ಎನ್ನುತ್ತಿದ್ದಾರೆ. ಹೀಗೆ ಇರುವಾಗ ಇದು ಸತ್ಯನಾ ಇಲ್ವಾ?. ಸತ್ಯ ಆಗಿದ್ರೆ ಇದು ಮಾಡಿದವರಿಗೆ ಯಾವ ಶಿಕ್ಷೆ ಆಗಬೇಕು. ಇದರ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದ ಸಚಿವ ಕೃಷ್ಣಭೈರೇಗೌಡ
ರಾಯಚೂರು(ಮೇ.04): ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಭೈರೇಗೌಡ ಅವರು, ಇಡೀ ಪ್ರಪಂಚದಲ್ಲಿನ ಅತೀ ದೊಡ್ಡ ಲೈಂಗಿಕ ಪ್ರಕರಣ ಇದು. ಮಾಜಿ ಪ್ರಧಾನಿಯ ಮೊಮ್ಮಗ, ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ, ಒಬ್ಬ ಮಂತ್ರಿಯ ಮಗ, ಸಂಸದರಾಗಿದವರು ತಮ್ಮ ಕೈಯಲ್ಲಿ ಇರುವ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಅಮಾಯಕರ ಮೇಲೆ ಪ್ರಯೋಗ ಮಾಡಿ, ಅಮಾಯಕರ ಅಸಹಾಯಕತೆಯನ್ನ ಲಾಭ ಪಡೆದುಕೊಂಡು ಅಮಾಯಕ ಅಸಹಾಯಕತೆಯಿಂದ ಮಾಡಿದ ದೌರ್ಜನ್ಯ ಇದು ಎಂದು ಕಿಡಿ ಕಾರಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣೆಭೈರೇಗೌಡ ಅವರು, ಇದು ಪ್ರಪಂಚದ ಅತೀ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಆಗಿದೆ. ನಾನು ಕಂಡ ಹಾಗೇ ಪ್ರಪಂಚದಲ್ಲಿ ಎಲ್ಲಿಯೂ ಇಷ್ಟು ದೊಡ್ಡ ಪ್ರಕರಣ ನಡೆದಿಲ್ಲ. ಇಲ್ಲಿಯವರೆಗೆ ಎಷ್ಟು ಮಹಿಳೆಯರು ಅಂತ ಲೆಕ್ಕಕ್ಕೂ ಸಿಕ್ಕಿಲ್ಲ. ಹಾಸನದ ಸ್ಥಳೀಯರು ಹೇಳುವ ಪ್ರಕಾರ ನೂರಾರು ಮಹಿಳೆಯರು ಎನ್ನುತ್ತಿದ್ದಾರೆ. ಹೀಗೆ ಇರುವಾಗ ಇದು ಸತ್ಯನಾ ಇಲ್ವಾ?. ಸತ್ಯ ಆಗಿದ್ರೆ ಇದು ಮಾಡಿದವರಿಗೆ ಯಾವ ಶಿಕ್ಷೆ ಆಗಬೇಕು. ಇದರ ಬಗ್ಗೆ ಚರ್ಚೆ ಆಗಬೇಕು ಎಂದು ಸಚಿವ ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ.
ಏನಿದು ಬ್ಲ್ಯೂ ಕಾರ್ನರ್ ನೋಟಿಸ್, ಇಂಟರ್‌ಪೋಲ್‌ನ ಕಲರ್ ಕೋಡ್ ನೋಟಿಸ್‌ನ ಅರ್ಥವೇನು?
ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್‌ನಲ್ಲಿ ಕಾಂಗ್ರೆಸ್ ಪಾತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೃಷ್ಣೇಭೈರೇಗೌಡ ಅವರು, ದೇವೇಗೌಡರ ಕುಟುಂಬಕ್ಕೆ ಟಾರ್ಗೆಟ್ ಮಾಡಿದ್ದು ಬಿಜೆಪಿ. ಬಿಜೆಪಿ, ಜೆಡಿಎಸ್ ಅನ್ನ ಟ್ರಾಪ್ ಮಾಡಿ, ಓಟಿಗಾಗಿ ಬಳಿಸಿಕೊಂಡಿದೆ. ಜನತಾದಳ ಓಟು ಬೇಕಾದಾಗ ಪ್ರಜ್ವಲ್ ರೇವಣ್ಣಗೆ ಹಾಕೋ ಓಟು ಮೋದಿಗೆ ಅಂತ ಬಿಜೆಪಿ ಅವ್ರು ಮತ ಹಾಕಿಸಿಕೊಂಡ್ರು. ಅವರಿಗೆ ಪ್ರಜ್ವಲ್ ರೇವಣ್ಣರನ್ನ ಸೋಲಿಸಬೇಕಿತ್ತು. ಹಾಗಾಗಿ ಎರಡು ದಿನ ಮೊದಲು ಇದನ್ನ ರಿಲೀಸ್ ಮಾಡಿಸಿದ್ದಾರೆ. ದೇವರಾಜ್ ಗೌಡ ಬಿಜೆಪಿ ಅಭ್ಯರ್ಥಿ ಅವರೇ ವಿಡಿಯೋ ರಿಲೀಸ್ ಮಾಡಿದ್ದಾರೆ. ಬಿಜೆಪಿ ನಾಯಕರೇ ಸೂತ್ರದಾರರು. ಓಟು ಹಾಕಿಸಿಕೊಂಡು ದೇದೇಗೌಡರು ಎಲ್ಲರನ್ನ ಹೊಗಳಿ ಈಗ ರಿಲೀಸ್ ಮಾಡಿದ್ದಾರೆ.
ಇವರ(ಬಿಜೆಪಿ) ಪಾರ್ಟಿ ಕ್ಯಾಂಡಿಡೇಟ್ ಇವರಿಗೆ ಈ ಹಿಂದೆಯೇ ಪತ್ರ ಬರೆದಿದ್ರು. ಕುಮಾರಸ್ವಾಮಿ ಅವರನ್ನು ಹೆಂಗೆ ಬೇಕು ಹಂಗೆ ಹೊಗಳಿಸಿಕೊಂಡ್ರು. ಅವರ ಕೈಗೆ ಚೊಂಬು ಕೊಟ್ರು, ಓಟು ಹಾಕಿದ ತಕ್ಷಣ ನಿಮಗೂ ನಮಗೂ ಸಂಬಂಧವಿಲ್ಲ ಅಂತ ಬಿಜೆಪಿ ಡಿವೋರ್ಸ್ ಪ್ರಕ್ರಿಯೆ ಶುರು ಮಾಡಿದ್ದಾರೆ. ಇದು ಬಿಜೆಪಿಯ ಯುಸ್ ಆಂಡ್ ಥ್ರೋ ಪಾಲಿಸಿ. ಬಿಜೆಪಿ ಅವ್ರು ಜೆಡಿಎಸ್ ಅವ್ರನ್ನ ಟ್ರಾಪ್ ಮಾಡಿ ಬಳಸಿಕೊಂಡಿದ್ದಾರೆ ಎಂದ ಸಚಿವ ಕೃಷ್ಣಭೈರೇಗೌಡ ದೂರಿದ್ದಾರೆ.