ಬೆಂಗಳೂರು[ಅ.12] ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿ ಯಲ್ಲಿ ಶನಿವಾರ ಕರ್ನಾಟಕ ತಂಡ, ತನ್ನ 7ನೇ ಪಂದ್ಯದಲ್ಲಿ ಸೌರಾಷ್ಟ್ರ ಸವಾಲನ್ನು ಎದುರಿಸಲಿದೆ. ಆಡಿರುವ 6 ಪಂದ್ಯಗಳಲ್ಲಿ 5 ಗೆಲುವು, 1 ಸೋಲು ಅನುಭವಿಸಿರುವ ಕರ್ನಾಟಕ 20 ಅಂಕಗಳೊಂದಿಗೆ ಎಲೈಟ್ ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅದ್ಭುತ ಲಯದಲ್ಲಿರುವ ಕರ್ನಾಟಕ ತಂಡ, ಟೂರ್ನಿಯ ನಾಕೌಟ್ ಹಂತದ ಸನಿಹದಲ್ಲಿದೆ. 

ಹಾಲಿ ಚಾಂಪಿಯನ್ ಮುಂಬೈ ವಿರುದ್ದ ಕರ್ನಾಟಕಕ್ಕೆ ರೋಚಕ ಗೆಲುವು!

ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಮನೀಶ್ ಪಡೆ ರೋಚಕ 9 ರನ್‌ಗಳ ಗೆಲುವು ಸಾಧಿಸಿದ್ದು, ಸೌರಾಷ್ಟ್ರ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಇನ್ನೂ ಸೌರಾಷ್ಟ್ರ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದ್ದು, 8 ಅಂಕಗಳಿಂದ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದೆ. 

ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

ಬಲಿಷ್ಠ ಬ್ಯಾಟಿಂಗ್ ಬಳಗ: ಕರ್ನಾಟಕ ತಂಡ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಕೆ.ಎಲ್. ರಾಹುಲ್, ಯುವ ಕ್ರಿಕೆಟಿಗ ದೇವದತ್ತ್ ಪಡಿಕ್ಕಲ್, ಮನೀಶ್ ಪಾಂಡೆ ಲಯದಲ್ಲಿದ್ದು, ಎದುರಾಳಿ ಬೌಲರ್‌ಗಳನ್ನು ಕಾಡುವ ವಿಶ್ವಾಸದಲ್ಲಿದ್ದಾರೆ. 

ಸೌರಾಷ್ಟ್ರಕ್ಕೆ ಉನಾದ್ಕತ್ ಬಲ: ಎಡಗೈ ವೇಗಿ ಜೈದೇವ್ ಉನಾದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸೌರಾಷ್ಟ್ರ ಸದೃಢವಾಗಿದ್ದು, ಪ್ರಬಲ ತಂಡಗಳಿಗೆ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ

ಕರ್ನಾಟಕ ಸೌರಾಷ್ಟ್ರ ನಡುವಿನ ಪಂದ್ಯ ಬೆಳಗ್ಗೆ 09 ಗಂಟೆಗೆ ಆರಂಭವಾಗಲಿದ್ದು, ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ.