ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ. ನಾಯಕಿ ಮಿಥಾಲಿ ರಾಜ್, ಪೂನಮ್‌ ರಾವತ್‌ ಆಕರ್ಷಕ ಅರ್ಧಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ವಡೋ​ದರ(ಅ.12): ನಾಯಕಿ ಮಿಥಾಲಿ ರಾಜ್‌ ಹಾಗೂ ಪೂನಮ್‌ ರಾವತ್‌ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಯಿಂದ ಸರಣಿ ಜಯ ಪಡೆದಿದೆ. ಅ.14 ರಂದು 3ನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

Scroll to load tweet…

ಮಹಿಳಾ ಏಕದಿನ: ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಭರ್ಜರಿ ಜಯ

ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ದ.ಆಫ್ರಿಕಾ ನೀಡಿದ 248 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ಕಳಪೆ ಆರಂಭ ಪಡೆಯಿತು. 34 ರನ್‌ಗಳಿಸುವಷ್ಟರಲ್ಲಿ ಜೆಮಿಮಾ (18) ವಿಕೆಟ್‌ ಕಳೆದುಕೊಂಡಿತು. ಪ್ರಿಯಾ ಪೂನಿಯಾ (20) ಕೂಡ ಬೇಗನೆ ನಿರ್ಗಮಿಸಿದರು. 3ನೇ ವಿಕೆಟ್‌ಗೆ ಪೂನಮ್‌ ಹಾಗೂ ನಾಯಕಿ ಮಿಥಾಲಿ ರಾಜ್‌ 129 ರನ್‌ಗಳ ಜೊತೆಯಾಟ ನಿರ್ವಹಿಸಿದರು. ಇದು ತಂಡದ ಗೆಲುವನ್ನು ಸಮೀಪವಾಗಿಸಿತು. ಮಿಥಾಲಿ (66), ಪೂನಮ್‌ (65) ರನ್‌ಗಳಿಸಿದರು. ಇವರಿಬ್ಬರು 1 ರನ್‌ ಅಂತರದಲ್ಲಿ ವಿಕೆಟ್‌ ಒಪ್ಪಿಸಿ ಹೊರನಡೆದರು. ಕೊನೆಯಲ್ಲಿ ಹರ್ಮನ್‌ಪ್ರೀತ್‌ (ಅಜೇಯ 39)ರನ್‌ಗಳಿಸಿದರು. ಭಾರತ ಇನ್ನೂ 12 ಎಸೆತಗಳು ಬಾಕಿ ಇರುವಂತೆ ಜಯದ ನಗೆ ಬೀರಿತು.

Scroll to load tweet…

ಇದಕ್ಕೂ ಮೊದಲು ಬ್ಯಾಟ್‌ ಮಾಡಿ ದ.ಆಫ್ರಿಕಾ ಲೌರಾ ವೊಲ್ವಾರ್(69), ಮಿಗ್ನೊನ್‌ ಡು ಪ್ರೀಜ್‌ (44), ಲಿಜೆಲ್ಲೆ ಲೀ (40) ಹಾಗೂ ಲಾರಾ ಗೊಡಾಲ್‌ (38) ರನ್‌ನಿಂದಾಗಿ 50 ಓವರಲ್ಲಿ 6 ವಿಕೆಟ್‌ಗೆ 247 ರನ್‌ಗಳಿಸಿತು. ಭಾರತದ ಪರ ಶಿಖಾ ಪಾಂಡೆ, ಏಕ್ತಾ ಬಿಶ್ತ್ ತಲಾ 2 ವಿಕೆಟ್‌ ಪಡೆದರು.

ಸ್ಕೋರ್‌:

ದ.ಆ​ಫ್ರಿಕಾ 247/6, 
ಭಾರತ 248/5