ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ ಮತ್ತು ವಿದರ್ಭ ಮುಖಾಮುಖಿ. ವಡೋದರಾದಲ್ಲಿ ನಡೆಯುವ ಪಂದ್ಯದಲ್ಲಿ ಐದನೇ ಪ್ರಶಸ್ತಿ ಮೇಲೆ ಕರ್ನಾಟಕ ಕಣ್ಣಿಟ್ಟರೆ, ವಿದರ್ಭ ಮೊದಲ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ ವಿದರ್ಭ ತಂಡವನ್ನು ಮುನ್ನಡೆಸುತ್ತಿದ್ದು, ಹಾಲಿ ಮತ್ತು ಮಾಜಿ ಆಟಗಾರರ ನಡುವಿನ ಸೆಣಸಾಟ ಕುತೂಹಲ ಕೆರಳಿಸಿದೆ.
ವಡೋದರಾ: 2024-25ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಪ್ರಶಸ್ತಿಗಾಗಿ ಕರ್ನಾಟಕ ಮತ್ತು ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ ಮುನ್ನಡೆಸುವ ವಿದರ್ಭ ತಂಡಗಳು ಸೆಣಸಾಡಲಿವೆ. ಪಂದ್ಯಕ್ಕೆ ವಡೋದರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಕರ್ನಾಟಕ ತಂಡ 2013-14, 2014-25, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅತ್ತ ಹರ್ಯಾಣ ಇದೇ ಮೊದಲ ಬಾರಿ ಫೈನಲ್‌ಗೇರಿದ್ದು, ಮೊದಲ ಪ್ರಯತ್ನದಲ್ಲೇ ಕಪ್ ಗೆಲ್ಲುವ ಕಾತರದಲ್ಲಿದೆ.
ಅಸಾಧಾರಣ ಪ್ರದರ್ಶನ: ಈ ಬಾರಿ ರಣಜಿ ಹಾಗೂ ಮುಕ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ತೋರಿರುವ ಕರ್ನಾಟಕ, ವಿಜಯ್ ಹಜಾರೆಯಲ್ಲಿ ಅಬ್ಬರಿಸುತ್ತಿದೆ. ಸ್ವತಃ ನಾಯಕ ಮಯಾಂಕ್ ಅಗರ್‌ವಾಲ್ ಮುಂದೆ ನಿಂತು ತಂಡವನ್ನು ಗೆಲುವಿನತ್ತ ಕೊಂಡೊ ಯ್ಯುತ್ತಿದ್ದಾರೆ. ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ಗೇರಿದ್ದ ರಾಜ್ಯ, ಅಂತಿಮ 8ರ ಘಟ್ಟದಲ್ಲಿ ಬರೋಡಾ, ಸೆಮಿಫೈನಲ್‌ನಲ್ಲಿ ಹರ್ಯಾಣ ವಿರುದ್ಧ ಗೆದ್ದಿದೆ. ಮಯಾಂಕ್ ಜೊತೆ ದೇವದತ್ ಪಡಿಕ್ಕಲ್, ಸ್ಮರಣ್, ಅನೀಶ್ ಕೆ.ವಿ., ಆಲ್ರೌಂಡರ್ ಶ್ರೇಯಸ್ ಗೋಪಾಲ್, ವೇಗಿ ವಾಸುಕಿ ಕೌಶಿಕ್, ಪ್ರಸಿದ್ ಕೃಷ್ಣ, ಅಭಿಲಾಶ್ ಶೆಟ್ಟಿ ತಂಡದ ಆಧಾರಸ್ತಂಭ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಎರಡು ತಂಡಗಳು ಫೈನಲ್ ಆಡಲಿವೆ: ಭವಿಷ್ಯ ನುಡಿದ ನಾಸಿರ್ ಹುಸೇನ್
ಮತ್ತೊಂದೆಡೆ ವಿದರ್ಭ ಕೂಡಾ ಈ ಬಾರಿ ಸ್ಫೋಟಕ ಆಟವಾಡುತ್ತಿದೆ. ಕರುಣ್ ಅಭೂತಪೂರ್ವ ಲಯದಲ್ಲಿದ್ದು, ಇತರ ಬ್ಯಾಟರ್‌ಗಳಾದ ಯಶ್ ರಾಥೋಡ್, ಧ್ರುವ್ ಶೋರೆ, ಜಿತೇಶ್ ಶರ್ಮಾ ತಂಡಕ್ಕೆ ನೆರವಾಗುತ್ತಿದ್ದಾರೆ. ತಂಡದ ಬೌಲಿಂಗ್ ವಿಭಾಗ ಕೂಡಾ ಬಲಿಷ್ಠವಾಗಿದ್ದು, ರಾಜ್ಯಕ್ಕೆ ಸ್ಪರ್ಧೆ ನೀಡುವ ವಿಶ್ವಾಸದಲ್ಲಿದೆ.
21ನೇ ದೇಸಿ ಕಪ್ ಮೇಲೆ ರಾಜ್ಯದ ಕಣ್ಣು
ಕರ್ನಾಟಕ ದೇಸಿ ಕ್ರಿಕೆಟ್‌ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದು. ಈ ವರೆಗೂ 8 ಬಾರಿ ರಣಜಿ, 6 ಬಾರಿ ಇರಾನಿ ಕಪ್, 4 ಬಾರಿ ವಿಜಯ್ ಹಜಾರೆ ಹಾಗೂ 2 ಬಾರಿ ಮುಸ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಗೆದ್ದಿದೆ. ತಂಡ ಒಟ್ಟಾರೆ 21ನೇ ದೇಸಿ ಕಪ್ ಮೇಲೆ ಕಣ್ಣಿಟ್ಟಿದೆ. ಅತ್ತ ವಿದರ್ಭ ತಲಾ 2 ಬಾರಿ ರಣಜಿ ಹಾಗೂ ಇರಾನಿ ಕಪ್ ಗೆದ್ದಿದ್ದು, ಸೀಮಿತಓವರ್ ಟೂರ್ನಿಯಲ್ಲಿ ಮೊದಲ ಟ್ರೋಫಿ ಗೆಲ್ಲುವ ನಿರೀಕ್ಷೆ ಯಲ್ಲಿದೆ.
ಈ ಪಕ್ಷದ ಸಂಸದೆ ಜತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್! ಈಕೆ ಅತಿ ಕಿರಿಯ ಸಂಸದೆ!
ಕರುಣ್ ನಾಯರ್ vs ಕರ್ನಾಟಕ ಟೀಮ್!
ಫೈನಲ್ ಕರುಣ್ ನಾಯರ್ ಮತ್ತು ಕರ್ನಾಟಕ ಕ್ರಿಕೆಟ್ ಟೀಂ ಎಂಬಂತೆ ಬಿಂಬಿತವಾಗುತ್ತಿದೆ. ಕರುಣ್ ಕರ್ನಾಟಕದ ಮಾಜಿ ಆಟಗಾರ. ಕಳೆದೆರಡು ವರ್ಷಗಳಿಂದ ವಿದರ್ಭ ಪರ ಆಡುತ್ತಿದ್ದಾರೆ. ಅವರು ಈ ಬಾರಿ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 752 ರನ್ ಕಲೆಹಾಕಿದ್ದಾರೆ. ಕೇವಲ ಒಮ್ಮೆ ಮಾತ್ರ ಔಟಾಗಿರುವ ಅವರು, ರಾಜ್ಯ ತಂಡವನ್ನು ಫೈನಲ್‌ನಲ್ಲಿ ಕಾಡುವ ಸಾಧ್ಯತೆ ಹೆಚ್ಚು ಇತ್ತ ಮಯಾಂಕ್ 9 ಪಂದ್ಯಗಳಲ್ಲಿ 619 ರನ್ ಗಳಿಸಿದ್ದು, ದೇವದತ್ ಪಡಿಕ್ಕಲ್ ಕಳೆದೆರಡು ಪಂದ್ಯಗಳಲ್ಲೂ ಅಬ್ಬರಿಸಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಕರ್ನಾಟಕದ ಹಾಲಿ, ಮಾಜಿ ಬ್ಯಾಟರ್‌ಗಳೇ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋ ಸಿನಿಮಾ.
