Asianet Suvarna News Asianet Suvarna News

Vijay Hazare Trophy ದೇವದತ್ ಪಡಿಕ್ಕಲ್ ಮತ್ತೊಂದು ಶತಕ, ರಾಜ್ಯಕ್ಕೆ ಸತತ 5ನೇ ಗೆಲುವು

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 6 ವಿಕೆಟ್‌ಗೆ 299 ರನ್‌ ಕಲೆಹಾಕಿತು. ಆರಂಭಿಕರು ಬೇಗನೇ ನಿರ್ಗಮಿಸಿದ ಬಳಿಕ ಪಡಿಕ್ಕಲ್‌-ನಿಕಿನ್‌ ಜೋಸ್‌(96) 3ನೇ ವಿಕೆಟ್‌ಗೆ 171 ರನ್‌ ಜೊತೆಯಾಟವಾಡಿದರು. ಪಡಿಕ್ಕಲ್‌ 103 ಎಸೆತಗಳಲ್ಲಿ 114 ರನ್‌ ಸಿಡಿಸಿದರು. ಇದು ಟೂರ್ನಿಯಲ್ಲಿ ಅವರ ಸತತ 5ನೇ 70+ ಸ್ಕೋರ್‌. ಮನೀಶ್ ಪಾಂಡೆ 53 ರನ್ ಗಳಿಸಿದರು.

Vijay Hazare Trophy Devdutt Padikkal Century helps Karnataka register 5th Consecutive win kvn
Author
First Published Dec 2, 2023, 8:46 AM IST

ಅಹಮದಾಬಾದ್‌(ಡಿ.02): ದೇವದತ್‌ ಪಡಿಕ್ಕಲ್‌ 2ನೇ ಶತಕ, ಬೌಲರ್‌ಗಳ ಸಂಘಟಿತ ದಾಳಿ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕಕ್ಕೆ ಸತತ 5ನೇ ಗೆಲುವು ತಂದುಕೊಟ್ಟಿದೆ. ರಾಜ್ಯ ತಂಡಕ್ಕೆ ಶುಕ್ರವಾರ ಚಂಡೀಗಢ ವಿರುದ್ಧ 22 ರನ್‌ ರೋಚಕ ಗೆಲುವು ಲಭಿಸಿತು. ಜಯದ ಹೊರತಾಗಿಯೂ ಕರ್ನಾಟಕ 20 ಅಂಕದೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಬಾಕಿಯಾಗಿದ್ದು, ಉತ್ತಮ ನೆಟ್‌ರನ್‌ರೇಟ್‌ನಿಂದಾಗಿ ಹರ್ಯಾಣ(20 ಅಂಕ) ಅಗ್ರಸ್ಥಾನದಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 6 ವಿಕೆಟ್‌ಗೆ 299 ರನ್‌ ಕಲೆಹಾಕಿತು. ಆರಂಭಿಕರು ಬೇಗನೇ ನಿರ್ಗಮಿಸಿದ ಬಳಿಕ ಪಡಿಕ್ಕಲ್‌-ನಿಕಿನ್‌ ಜೋಸ್‌(96) 3ನೇ ವಿಕೆಟ್‌ಗೆ 171 ರನ್‌ ಜೊತೆಯಾಟವಾಡಿದರು. ಪಡಿಕ್ಕಲ್‌ 103 ಎಸೆತಗಳಲ್ಲಿ 114 ರನ್‌ ಸಿಡಿಸಿದರು. ಇದು ಟೂರ್ನಿಯಲ್ಲಿ ಅವರ ಸತತ 5ನೇ 70+ ಸ್ಕೋರ್‌. ಮನೀಶ್ ಪಾಂಡೆ 53 ರನ್ ಗಳಿಸಿದರು.

ಟಿ20 ಕ್ರಿಕೆಟ್: ನೂರಕ್ಕೂ ಹೆಚ್ಚು ರನ್‌ ಸಿಡಿಸಿದ ಓಪನರ್ಸ್‌ ರೋಹಿತ್‌ ಶರ್ಮಾ, ಕೊಹ್ಲಿ ಮಾತ್ರವಲ್ಲ!

ದೊಡ್ಡ ಗುರಿ ಬೆನ್ನತ್ತಿದ ಚಂಡೀಗಢ ಅರ್ಸ್‌ಲನ್‌ ಖಾನ್‌(102) ಶತಕದ ಹೊರತಾಗಿಯೂ 7 ವಿಕೆಟ್‌ಗೆ 277 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕೌಶಿಕ್‌ 2 ವಿಕೆಟ್‌ ಕಿತ್ತರು. ಕರ್ನಾಟಕ 6ನೇ ಪಂದ್ಯದಲ್ಲಿ ಭಾನುವಾರ ಹರ್ಯಾಣ ವಿರುದ್ಧ ಆಡಲಿದ್ದು, ಗೆದ್ದು ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದೆ.

ಸ್ಕೋರ್‌: 
ಕರ್ನಾಟಕ 50 ಓವರಲ್ಲಿ 299/6 (ಪಡಿಕ್ಕಲ್‌ 114, ನಿಕಿನ್‌ 96, ಮಂದೀಪ್‌ 2-31)
ಚಂಡೀಗಢ 50 ಓವರಲ್ಲಿ 277/7 (ಅರ್ಸ್‌ಲನ್‌ 102, ಕೌಶಿಕ್‌ 2-44)

ಪುತ್ರನ ಆಟ ವೀಕ್ಷಿಸಿದ ದ್ರಾವಿಡ್‌

ಮೈಸೂರಿನಲ್ಲಿ ನಡೆಯುತ್ತಿರುವ ಕೂಚ್‌ ಬಿಹಾರ್‌ ಅಂಡರ್‌-16 ಟ್ರೋಫಿ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಆಡುತ್ತಿರುವ ಕರ್ನಾಟಕ ತಂಡದಲ್ಲಿರುವ ತಮ್ಮ ಪುತ್ರ ಸಮಿತ್‌ರ ಆಟವನ್ನು ಭಾರತದ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ತಮ್ಮ ಪತ್ನಿಯೊಂದಿಗೆ ವೀಕ್ಷಿಸಿದರು. ಮೆಟ್ಟಿಲುಗಳ ಮೇಲೆ ಕುಳಿತು ದ್ರಾವಿಡ್‌ ಪಂದ್ಯ ವೀಕ್ಷಿಸುತ್ತಿರುವ ಫೋಟೋ ವೈರಲ್‌ ಆಗಿದೆ.

ಇಂಡೋ-ಆಸೀಸ್ ಬೆಂಗಳೂರು ಟಿ20 ಪಂದ್ಯದ ಟಿಕೆಟ್ ಮಾರಾಟ ಗೊಂದಲ..!

ಬಾಂಗ್ಲಾ ವಿರುದ್ಧ ಸೋಲಿನ ಸುಳಿಯಲ್ಲಿ ನ್ಯೂಜಿಲೆಂಡ್‌

ಸೈಲೆಟ್‌: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮಾಜಿ ವಿಶ್ವ ಟೆಸ್ಟ್‌ ಚಾಂಪಿಯನ್‌ ನ್ಯೂಜಿಲೆಂಡ್‌ ಸೋಲಿನ ಸುಳಿಗೆ ಸಿಲುಕಿದೆ. ಗೆಲುವಿಗೆ 332 ರನ್‌ಗಳ ಕಠಿಣ ಗುರಿ ಪಡೆದ ಕಿವೀಸ್‌, 4ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 113 ರನ್‌ ಕಲೆಹಾಕಿದೆ. ತಂಡಕ್ಕೆ ಇನ್ನೂ 219 ರನ್‌ ಬೇಕು. ಗುರುವಾರ 3 ವಿಕೆಟ್‌ಗೆ 212 ರನ್‌ ಗಳಿಸಿದ್ದ ಬಾಂಗ್ಲಾ, ಶುಕ್ರವಾರ 338ಕ್ಕೆ ಆಲೌಟಾಯಿತು.

Follow Us:
Download App:
  • android
  • ios