ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳು ಆರಂಭಗೊಂಡಿದ್ದು, ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಬೆಂಗಳೂರು: ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ನಾಕೌಟ್‌ ಪಂದ್ಯಗಳು ಸೋಮವಾರ ಆರಂಭಗೊಂಡಿದ್ದು,. 4 ಕ್ವಾರ್ಟರ್‌ ಫೈನಲ್‌ ಪೈಕಿ 2 ಪಂದ್ಯಗಳು ಸೋಮವಾರ ನಡೆಯಲವೆ. ಮೊದಲ ಕ್ವಾರ್ಟರ್‌ನಲ್ಲಿ ಕರ್ನಾಟಕ-ಮುಂಬೈ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ

'ಎ' ಗುಂಪಿನಲ್ಲಿ ಅಗ್ರಸ್ಥಾನಿ ಕರ್ನಾಟಕ

‘ಎ’ ಗುಂಪಿನಲ್ಲಿದ್ದ ರಾಜ್ಯ ತಂಡ ಆಡಿರುವ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್‌ಗೇರಿದೆ. ಮಧ್ಯಪ್ರದೇಶ ವಿರುದ್ಧ ಅನಿರೀಕ್ಷಿತ ಸೋಲಿನ ಹೊರತಾಗಿಯೂ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ದೇವದತ್‌ ಪಡಿಕ್ಕಲ್‌ ಅಮೋಘ ಆಟವಾಡುತ್ತಿದ್ದು, 7 ಇನ್ನಿಂಗ್ಸ್‌ಗಳಲ್ಲಿ 4 ಶತಕ, 1 ಅರ್ಧಶತಕ ಸೇರಿದಂತೆ 640 ರನ್‌ ಗಳಿಸಿದ್ದಾರೆ.

ಅತ್ತ ಮುಂಬೈ ತಂಡದಲ್ಲಿ ಸರ್ಫರಾಜ್‌ ಖಾನ್‌ ಉತ್ತಮ ಲಯದಲ್ಲಿದ್ದು, 5 ಇನ್ನಿಂಗ್ಸ್‌ಗಳಲ್ಲಿ 303 ರನ್‌ ಗಳಿಸಿದ್ದಾರೆ. ಮುಂಬೈ ತಂಡ ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದೆ.

ಉಭಯ ತಂಡಗಳು ಹೀಗಿವೆ ನೋಡಿ

ಮುಂಬೈ: ಅಂಗ್‌ಕೃಷ್ ರಘುವಂಶಿ, ಮುಶೀರ್ ಖಾನ್, ಸಿದ್ದೇಶ್ ಲಾಡ್(ನಾಯಕ), ಹಾರ್ದಿಕ್ ತೋಮೊರೆ(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಸಾಯಿರಾಜ್ ಪಾಟೀಲ್, ಸೂರ್ಯಾನ್ಶ್‌ ಶೆಡ್ಗೆ, ತನುಶ್ ಕೋಟ್ಯಾನ್, ಇಶಾನ್ ಮೂಲ್‌ಚಂದಾನಿ, ಮೋಹಿತ್ ಅವಸ್ಥಿ, ಓಂಕಾರ್ ತುಕರಾಮ್ ತಾರ್ಮಾಲೆ.

ಕರ್ನಾಟಕ: ಮಯಾಂಕ್ ಅಗರ್‌ವಾಲ್(ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್(ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ವಿಜಯ್‌ಕುಮಾರ್ ವೈಶಾಕ್, ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ವಿದ್ವತ್ ಕಾವೇರಪ್ಪ.

2ನೇ ಕ್ವಾರ್ಟರ್‌ನಲ್ಲಿ ಉತ್ತರ ಪ್ರದೇಶ-ಸೌರಾಷ್ಟ್ರ ಮುಖಾಮುಖಿಯಾಗಿದ್ದು. ಇನ್ನೆರಡು ಪಂದ್ಯಗಳು ಮಂಗಳವಾರ ನಿಗದಿಯಾಗಿವೆ. ಕ್ವಾರ್ಟರ್ ಜೊತೆ ಸೆಮಿಫೈನಲ್‌, ಫೈನಲ್‌ ಪಂದ್ಯಗಳೆಲ್ಲವೂ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್‌ ಎಕ್ಸಲೆನ್ಸ್‌ನಲ್ಲಿ ಆಯೋಜನೆಗೊಂಡಿವೆ

ಪಂದ್ಯಗಳು ಆರಂಭ: ಬೆಳಗ್ಗೆ 9 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌