ನವದೆಹಲಿ[ಡಿ.07]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ವಿಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಕೆರಿಬಿಯನ್ನರು ನೀಡಿದ್ದ 208 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ, ವಿರಾಟ್ ಅಜೇಯ 94 ರನ್’ಗಳ ನೆರವಿನಿಂದ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಅದರಲ್ಲೂ ವಿಲಿಯಮ್ಸ್ ನೋಟ್ ಬುಕ್ ಸೆಲಿಬ್ರೇಷನ್’ಗೆ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಮನ ಗೆದ್ದಿದ್ದು, ಹಿಂದಿ ಬ್ಲಾಕ್’ಬಸ್ಟರ್ ಚಿತ್ರ ಅಮರ್ ಅಕ್ಬರ್ ಅಂಥೋಣಿ ಚಿತ್ರದ ಫೇಮಸ್ ಡೈಲಾಗ್ ಟ್ವೀಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಕಾಲೆಳೆದಿದ್ದಾರೆ.

ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ವಿರಾಟ್ ಕೊಹ್ಲಿಯನ್ನು ಕೆಣಕಬೇಡ, ಕೆಣಕಬೇಡ ಎಂದು ನಾನು ಎಷ್ಟು ಸಲ ಹೇಳಿದ್ದೇನೆ, ಈಗಷ್ಟೇ ಕೈಗೆ ಸ್ಲಿಪ್ ಬರೆದು ಕೊಟ್ಟೆನಲ್ವಾ. ಆದ್ರೆ ನನ್ನ ಮಾತೇ ಕೇಳಲ್ವಲ್ಲ ನೀನು. ಈಗ ನೋಡು, ವೆಸ್ಟ್ ಇಂಡೀಸ್’ನವರ ಮುಖ ನೋಡು. ಹೆಂಗೆಲ್ಲಾ ಬಾರಿಸಿದ್ದಾನೆಂದು ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬಾಲಿವುಡ್ ಆ್ಯಂಗ್ರಿ ಯಂಗ್’ಮ್ಯಾನ್ ಅಮಿತಾಬ್ ಬಚ್ಚನ್ ಟ್ವೀಟ್’ಗೆ ಪ್ರತಿಕ್ರಿಯಿಸಿದ್ದು, ಡೈಲಾಗ್ ಇಷ್ಟ ಆಯ್ತು. ನೀವು ಎಂದಿಗೂ ಸ್ಫೂರ್ತಿಯ ಚಿಲುಮೆ ಎಂದು ಟ್ವೀಟ್ ಮಾಡಿದ್ದಾರೆ. 

ಈ ಮೊದಲು ವಿಂಡೀಸ್ ದಿಗ್ಗಜ ಕ್ರಿಕೆಟಿಗ ಸರ್. ವೀವ್ ರಿಚರ್ಡ್ಸ್ ಸಹ ವಿರಾಟ್ ಟ್ವೀಟ್ ಕೊಂಡಾಡಿದ್ದು, ಅಮೇಜಿಂಗ್, ಜಸ್ಟ್ ಅಮೇಜಿಂಗ್ ಎಂದು ಉದ್ಘರಿಸಿದ್ದರು.

ಥ್ಯಾಂಕ್ಯೂ ಬಿಗ್ ಬಾಸ್ ಎಂದ ವಿರಾಟ್ ಕೊಹ್ಲಿ..!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ[ಡಿ.08] ತಿರುವನಂತಪುರಂನಲ್ಲಿ ನಡೆಯಲಿದ್ದು, ಮತ್ತೊಂದು ಜಿದ್ದಾಜಿದ್ದಿನ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.