ವಿರಾಟ್ ಕೊಹ್ಲಿ, ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾಗಿರುವ ಕಾರಣ, ಇತ್ತೀಚೆಗೆ ಮಾಕ್ ಚಿಕನ್ ಟಿಕ್ಕಾ ಸವಿದಿದ್ದಾರೆ. ಆರೋಗ್ಯ ಸಮಸ್ಯೆಗಳಿಂದಾಗಿ ಕೆಲವು ವರ್ಷಗಳ ಹಿಂದೆ ಮಾಂಸಾಹಾರ ತ್ಯಜಿಸಿದ್ದರು. ಸೋಯಾದಿಂದ ತಯಾರಿಸಿದ ಈ ಮಾಕ್ ಚಿಕನ್ ಟಿಕ್ಕಾ, ಅಸಲಿ ಚಿಕನ್‌ನಂತೆಯೇ ರುಚಿಕರವಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಕೋಟ್ಯಂತರ ಅಭಿಮಾನಿಗಳಿಗೆ ಈಚೆಗಷ್ಟೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಶಾಕ್ ನೀಡಿದ್ದರು. ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳುವ ಮೂಲಕ ಎಲ್ಲರಿಗೂ ಆಘಾತ ನೀಡಿದ್ದರು ಕೊಹ್ಲಿ. ಕಳೆದ ವರ್ಷ ಟಿ-20 ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದ ಇವರು ಕೆಲವು ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಕೂಡ ವಿದಾಯ ಹೇಳಿದ್ದಾರೆ. ಇದರ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ, ಇದೀಗ ವಿರಾಟ್ ಕೊಹ್ಲಿ ಅವರ ಮಾಕ್ ಚಿಕನ್ ಟಿಕ್ಕಾ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೊಹ್ಲಿ ಅವರು ತಾವು ಮಾಕ್ ಚಿಕನ್ ಟಿಕ್ಕಾ ತಿಂದಿರುವುದಾಗಿ ಹೇಳಿದ್ದು, ಅದು ಸಕತ್ ಟೇಸ್ಟಿಯಾಗಿದೆ ಎಂದಿದ್ದಾರೆ ಕೊಹ್ಲಿ.
ಅಸಲಿಗೆ ವಿರಾಟ್ ಕೊಹ್ಲಿ ಅವರು ಕೂಡ ಮಾಂಸಾಹಾರಿಯೇ. ಆದರೆ, ಅವರುಕೆಲವು ವರ್ಷಗಳಿಂದ ಇದನ್ನು ತ್ಯಜಿಸಿದ್ದಾರೆ. ಗರ್ಭಕಂಠದ ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಮಾಂಸಾಹಾರ ತ್ಯಜಿಸಿದ್ದುದ್ದಾಗಿ ಹಿಂದೆ ಅವರೇ ಹ ಹೇಳಿದ್ದರು. 'ಇಂಗ್ಲೆಂಡ್ ಟೆಸ್ಟ್ ಸರಣಿಗೆ ಸ್ವಲ್ಪ ಮೊದಲು ಮಾಂಸ ತಿನ್ನುವಾಗ ಎಡಗೈಗೆ ಬಡಿತ ಶುರುವಾಯಿತು. 2018 ರಲ್ಲಿ, ನಾವು ದಕ್ಷಿಣ ಆಫ್ರಿಕಾಕ್ಕೆ ಹೋದಾಗ, ಟೆಸ್ಟ್ ಆಡುವಾಗ ನನಗೆ ಗರ್ಭಕಂಠದ ಬೆನ್ನುಮೂಳೆಯ ಸಮಸ್ಯೆ ಇತ್ತು. ಅದು ನನ್ನ ಬಲಗೈಯ ಕಿರುಬೆರಳಿಗೆ ನೇರವಾಗಿ ಚಲಿಸುತ್ತಿದ್ದ ನರವನ್ನು ಸಂಕುಚಿತಗೊಳಿಸಿತು. ಅದು ನನಗೆ ಜುಮ್ಮೆನಿಸುವಿಕೆ ಸಂವೇದನೆಯನ್ನು ನೀಡಿತು ಮತ್ತು ನನ್ನ ಕಿರುಬೆರಳನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ನನಗೆ ರಾತ್ರಿ ನಿದ್ರೆ ಬರಲಿಲ್ಲ ಮತ್ತು ಅದು ಹುಚ್ಚನಂತೆ ನೋವುಂಟು ಮಾಡುತ್ತಿತ್ತು. ಇದರ ಬಳಿಕ ವೈದ್ಯರ ಸಲಹೆ ಮೇರೆಗೆ ಮಾಂಸಾಹಾರ ತ್ಯಜಿಸಿದ್ದೆ' ಎಂದು ಮೂರು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಹೇಳಿದ್ದರು.
ಲೈಕ್ ಕೊಟ್ಟು ಲೈಫೇ ಚೇಂಜ್ ಮಾಡಿದ ಕೊಹ್ಲಿಗೆ ನಟಿ ಅವನೀತ್ ಸ್ವೀಟ್ ಕಿಸ್: ಅನುಷ್ಕಾ ಕೋಪ?
ಬಳಿಕ, ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ ದೇಹವು ಬಹಳಷ್ಟು ಯೂರಿಕ್ ಆಮ್ಲವನ್ನು ಉತ್ಪಾದಿಸುತ್ತಿದ್ದರಿಂದ, ಅವರು ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಯಿತು. ಆದ್ದರಿಂದ ಮಾಂಸಾಹಾರ ತ್ಯಜಿಸುವುದು ಅನಿವಾರ್ಯವಾಗಿತ್ತು ಎಂದೂ ತಿಳಿಸಿದ್ದರು. ಅದರ ಮಧ್ಯೆಯೇ ಇದೀಗ ಮಾಕ್ ಚಿಕನ್ ಅಂದ್ರೆ ನಕಲಿ ಚಿಕನ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದು ಮಾಂಸವಲ್ಲ, ಬದಲಿಗೆ, ಸಸ್ಯ ಆಧರಿತ ಅಣಕು ಚಿಕನ್ ಟಿಕ್ಕಾ. ಹೀಗಾಗಿ ನಕಲಿ ಚಿಕನ್ ಟಿಕ್ಕಾ ಸಸ್ಯಾಹಾರಿ ಖಾದ್ಯವಾಗಿ ಉಳಿದಿದೆ.
ಸಾಮಾನ್ಯ ಚಿಕನ್ ಟಿಕ್ಕಾದಂತೆ, ಇದನ್ನು ಕೋಳಿಯಿಂದ ತಯಾರಿಸಲಾಗಿಲ್ಲ. ಇದನ್ನು ಸೋಯಾದಿಂದ ತಯಾರಿಸಿದ ಟಿಕ್ಕಾ ಆಗಿದೆ. ಎರಡೂ ಒಂದೇ ರೀತಿಯ ಟೇಸ್ಟ್ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. ಮಾಂಸಾಹಾರವನ್ನು ತ್ಯಜಿಸಿದವರಿಗೆ ಅದರ ತುಡಿತ ಉಂಟಾಗುತ್ತಿದ್ದರೆ, ಅಥವಾ ಸಸ್ಯಾಹಾರಿ ಆಗಿದ್ದರೂ ಒಮ್ಮೆ ಚಿಕನ್ ರುಚಿ ನೋಡುವ ಆಸೆ ಇದ್ದರೆ ಇದು ಹೇಳಿ ಮಾಡಿಸಿದ ಟಿಕ್ಕಾ ಎನ್ನುತ್ತಿದ್ದಾರೆ ನೆಟ್ಟಿಗರು.
'ಬಂಟಿ ನಿನ್ನ ಸೋಪ್ ಸ್ಲೋನಾ?' ಎಂದ ಮಾದಕ ನಟಿ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದ್ಯಾಕೆ?


