ರಾಂಚಿ[ನ.02]: ಆರಂಭಿಕರಾದ ಮಯಾಂಕ್ ಅಗರ್‌ವಾಲ್ (120) ಹಾಗೂ ಶುಭ್‌ಮನ್ ಗಿಲ್ (143) ಅವರ ಶತಕದ ನೆರವಿನಿಂದ ಭಾರತ ‘ಸಿ’, ಭಾರತ ‘ಎ’ ವಿರುದ್ಧ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 232 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಫೈನಲ್ ಹಾದಿಯನ್ನು ಸುಗಮವಾಗಿಸಿಕೊಂಡಿದೆ.

"

ಬ್ಯಾಟ್ ಬಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ

ನ. 4 ರಂದು ನಡೆಯುವ ಫೈನಲ್‌ನಲ್ಲಿ ಭಾರತ ‘ಬಿ’ ಹಾಗೂ ‘ಸಿ’ ತಂಡಗಳು ಎದುರಾಗುವುದು ಖಚಿತವಾಗಿದೆ. ಈ ಎರಡೂ ತಂಡಗಳು ತಲಾ 1 ಪಂದ್ಯವನ್ನು ಗೆದ್ದಿದ್ದು, ಪಟ್ಟಿಯಲ್ಲಿ ತಲಾ 4 ಅಂಕಗಳಿಂದ ಮೊದಲ 2 ಸ್ಥಾನ ಪಡೆದಿವೆ. ಆಡಿದ ಎರಡೂ ಪಂದ್ಯಗಳನ್ನು ಸೋತ ಭಾರತ ‘ಎ’ ಟೂರ್ನಿಯಿಂದ ಹೊರಬಿತ್ತು.

"

ದೇವಧರ್‌ ಟೂರ್ನಿ: ಮಯಾಂಕ್ ಸೇರಿ 3 ಕನ್ನಡಿಗರಿಗೆ ಸ್ಥಾನ

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ‘ಸಿ’ 50 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 366 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನತ್ತಿದ ಭಾರತ ‘ಎ’ 29.5 ಓವರಲ್ಲಿ 134 ರನ್‌ಗೆ ಆಲೌಟ್ ಆಯಿತು. ಸ್ಪಿನ್ನರ್ ಜಲಜ್ ಸಕ್ಸೇನಾ 41 ರನ್‌ಗೆ 7 ವಿಕೆಟ್ ಕಬಳಿಸಿದರು.

ಸ್ಕೋರ್:

ಭಾರತ ‘ಸಿ’ 366/3
ಭಾರತ ‘ಎ’ 134/10