ಬಿಸಿಸಿಐ ನೂತನ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ಆಯ್ಕೆಚೀಫ್ ಸೆಲೆಕ್ಟರ್ ಆಗಲು ಸಂಬಳ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ಅಜಿತ್‌ ಅಗರ್ಕರ್ ಮುಂದಿದೆ ಐದು ದೊಡ್ಡ ಸವಾಲು

ಬೆಂಗಳೂರು(ಜು.08): ಅಜಿತ್ ಅಗರ್ಕರ್​, ಟೀಂ ಇಂಡಿಯಾದ ಮಾಜಿ ಆಲ್​ರೌಂಡರ್​. ಈಗ ಬಿಸಿಸಿಐ ಚೀಫ್ ಸೆಲೆಕ್ಟರ್​. ಹೌದು, ಮುಂದಿನ ಎರಡು ವರ್ಷಕ್ಕೆ ಮುಂಬೈಕರ್ ಆಯ್ಕೆ ಸಮಿತಿ ಮುಖ್ಯಸ್ಥ. ಇಲ್ಲಿಯವರೆಗೂ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದವರು ಕೆಲವೇ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುತ್ತಿದ್ದರು. ಅದಕ್ಕೆ ಕಾರಣ ಚೀಫ್ ಸೆಲೆಕ್ಟರ್​​​​ಗೆ ಇದ್ದ ಕಡಿಮೆ ಸಂಬಳ. ಆದ್ರೆ ನಾನು ಚೀಫ್ ಸೆಲೆಕ್ಟರ್​​ ಆಗ್ಬೇಕು ಅಂದ್ರೆ ಮೊದಲು ಸಂಬಳ ಹೆಚ್ಚಿಸಿ ಅಂತ ಬೇಡಿಕೆಯಿಟ್ಟಿದ್ದ ಅಗರ್ಕರ್, ವಾರ್ಷಿಕ ಒಂದು ಕೋಟಿಯಿಂದ 3 ಕೋಟಿಗೆ ಸಂಬಳ ಹೆಚ್ಚಿಸಿಕೊಂಡು ಚೀಫ್ ಸೆಲೆಕ್ಟರ್​ ಆಗಿದ್ದಾರೆ.

ಭಾರತದ ಪರ 222 ಪಂದ್ಯಗಳನ್ನಾಡಿರುವ ಅಜಿತ್​ ಅಗರ್ಕರ್​​, 26 ಟೆಸ್ಟ್​ನಿಂದ 58, 191 ಒನ್​ಡೇಯಲ್ಲಿ 288 ಮತ್ತು 4 ಟಿ20ಯಿಂದ 3 ವಿಕೆಟ್ ಪಡೆದಿದ್ದಾರೆ. ಇದರ ಜತೆಗೆ ಬ್ಯಾಟಿಂಗ್‌ನಲ್ಲಿ ರನ್ನೂ ಹೊಡೆದಿದ್ದಾರೆ. ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ವೇಗದ ಅರ್ಧಶತಕ, ವೇಗದ 50 ವಿಕೆಟ್ ಪಡೆದಿರುವ ಸಾಧನೆ ಅಜಿತ್ ಅಗರ್ಕರ್‌ ಹೆಸರಿನಲ್ಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ಈಗ ಇದೇ ಚೀಫ್ ಸೆಲೆಕ್ಟರ್​ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಆ ಸವಾಲುಗಳನ್ನ ಗೆಲ್ಲೋದು ಸುಲಭವಲ್ಲ.

ಟೆಸ್ಟ್​​-ಟಿ20 ತಂಡವನ್ನು ಹೊಸದಾಗಿ ಕಟ್ಟಬೇಕು..!

ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಗೆಲ್ಲೋದ್ರಿಂದ ವಂಚಿತವಾಗಿರುವ ಟೀಂ ಇಂಡಿಯಾ, 2023-25ರ ವರ್ಲ್ಡ್ ಟೆಸ್ಟ್​ ಚಾಂಪಿಯನ್​ಶಿಪ್​ಗೆ ರೆಡಿಯಾಗ್ತಿದೆ. ಸದ್ಯ ಟೆಸ್ಟ್​ ತಂಡದಲ್ಲಿ ಸೀನಿಯರ್ಸ್​ ಹೆಚ್ಚಾಗಿದ್ದಾರೆ. ಅವರನ್ನೆಲ್ಲಾ ಕೈಬಿಟ್ಟು ಹೊಸ ಟೆಸ್ಟ್ ತಂಡ ಕಟ್ಟುವ ಜವಾಬ್ದಾರಿ ಅಗರ್ಕರ್ ಮೇಲಿದೆ. ಅಷ್ಟೇಕೆ ಟಿ20 ಟೀಂ​ನಿಂದ ಸೀನಿಯರ್ಸ್​​ ರೆಸ್ಟ್ ರೂಪದಲ್ಲಿ ಡ್ರಾಪ್ ಮಾಡಲಾಗಿದೆ. ಮುಂದಿನ ವರ್ಷ ಟಿ20 ವರ್ಲ್ಡ್​ಕಪ್ ನಡೆಯುತ್ತಿದೆ. ಆ ಮೆಗಾ ಟೂರ್ನಿಗೆ ತಂಡ ಕಟ್ಟುವ ಜವಾಬ್ದಾರಿಯೂ ಮುಂಬೈಕರ್ ಮೇಲಿದೆ.

ಹಾರ್ದಿಕ್ ಪಾಂಡ್ಯರನ್ನ ಖಾಯಂ ನಾಯಕನನ್ನಾಗಿ ಮಾಡ್ತಾರಾ..?

ಸದ್ಯ ಹಾರ್ದಿಕ್ ಪಾಂಡ್ಯ ಟಿ20 ನಾಯಕ. ಏಕದಿನ ತಂಡದ ಉಪನಾಯಕ. ಪಾಂಡ್ಯರನ್ನ ಪರ್ಮನೆಂಟ್ ಟಿ20 ಕ್ಯಾಪ್ಟನ್ ಮಾಡಬೇಕಾದ ಜವಾಬ್ದಾರಿಯೂ ಅಜಿತ್ ಅಗರ್ಕರ್ ಮೇಲಿದೆ. ಹಾಗೆ ಒನ್​ಡೇ ಕ್ಯಾಪ್ಟನ್ ಸಹ ಮಾಡ್ತಾರಾ ಅನ್ನೋ ಕುತೂಹಲವೂ ಇದೆ.

'ನೀವು ನನಗೆ ಟೆಕ್ಸ್ಟ್ ಮಾಡಿ ಸಾಕು': ತನ್ನ ಬಗ್ಗೆ ಟ್ವೀಟ್ ಮಾಡೋರಿಗೆ ರಿಯಾನ್‌ ಪರಾಗ್ ತಿರುಗೇಟು..!

ದ್ರಾವಿಡ್ ಕೋಚ್ ಆಗಿ ಮುಂದುವರೆಯುತ್ತಾರಾ..?

ಅಕ್ಟೋಬರ್​-ನವೆಂಬರ್​ನಲ್ಲಿ ಏಕದಿನ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಕೋಚ್ ಅವಧಿ ಮುಗಿಯಲಿದೆ. ಆನಂತರವೂ ದ್ರಾವಿಡ್ ಅವರನ್ನ ಕೋಚ್ ಆಗಿ ಮುಂದುವರೆಸಲು ಅಗರ್ಕರ್ ಆಸಕ್ತಿ ತೋರಿಸುತ್ತಾರಾ ಅನ್ನೋ ಪ್ರಶ್ನೆಯೂ ಎದ್ದಿದೆ. ದ್ರಾವಿಡ್ ಹೆಡ್‌ಕೋಚ್ ಆದ್ಮೇಲೆ ಭಾರತ, ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ಟೆಸ್ಟ್ ವರ್ಲ್ಡ್​ಕಪ್​​​​​​​​​​​​​​​​​​​​​​​​​​​​​​​​​​​​​​​​​​​​​ ಗೆಲ್ಲಲು ವಿಫಲವಾಗಿದೆ.

ಸೀನಿಯರ್​​ ಪ್ಲೇಯರ್​ಗಳನ್ನ ಹೇಗೆ ನಿಭಾಯಿಸುತ್ತಾರೆ..?

ಟೀಂ ಇಂಡಿಯಾದಲ್ಲಿ ಸದ್ಯ ಸಾಕಷ್ಟು ಮಂದಿ ಸೀನಿಯರ್ ಪ್ಲೇಯರ್ಸ್ ಇದ್ದಾರೆ. ಅವರನ್ನೆಲ್ಲಾ ಹೇಗೆ ಮೈಂಟೇನ್ ಮಾಡ್ತಾರೆ ಅನ್ನೋದೇ ಅಗರ್ಕರ್ ಮುಂದಿರುವ ಸವಾಲು. ಕೆಲವರು ನಿವೃತ್ತಿ ಅಂಚಿನಲ್ಲಿದ್ದರೆ, ಸ್ವಲ್ಪ ಮಂದಿ ಇನ್ನೊಂದಿಷ್ಟು ವರ್ಷ ಆಡಿ ರಿಟೈರ್ಡ್ ಆಗೋ ಪ್ಲಾನ್​ನಲ್ಲಿದ್ದಾರೆ. ಇವರನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ಪ್ರತಿ ವಿಶ್ವಕಪ್​ ಟೂರ್ನಿಯಲ್ಲೂ ಕೊಹ್ಲಿಯ ಬ್ಯಾಟಿಂಗ್ ಗ್ರಾಫ್​ ಏರಿಕೆ..! ಎದುರಾಳಿ ತಂಡಗಳಿಗೆ ವಾರ್ನಿಂಗ್..!

ಮೂರು ವಿಶ್ವಕಪ್​​ಗೆ ಟೀಂ ಇಂಡಿಯಾ ಆಯ್ಕೆ ಮಾಡಬೇಕು..!

ಮುಂದಿನ ಎರಡು ವರ್ಷದಲ್ಲಿ ಭಾರತ ಮೂರು ವಿಶ್ವಕಪ್ ಟೂರ್ನಿಗಳನ್ನಾಡಲಿದೆ. ಈ ವರ್ಷ ಏಕದಿನ ವಿಶ್ವಕಪ್, ಮುಂದಿನ ವರ್ಷ ಟಿ20 ವರ್ಲ್ಡ್​ಕಪ್, 2025ರಲ್ಲಿ ಟೆಸ್ಟ್ ವಿಶ್ವಕಪ್. ಹೀಗೆ ಮೂರು ಮೂರು ವಿಶ್ವಕಪ್ ಟೂರ್ನಿಗಳಿಗೆ ಟೀಂ ಇಂಡಿಯಾವನ್ನ ಆಯ್ಕೆ ಮಾಡುವ ಜವಾಬ್ದಾರಿ ಅಗರ್ಕರ್ ಮೇಲಿದೆ. ಈ ಮೂರರಲ್ಲಿ ಭಾರತ ಒಂದನ್ನಾದ್ರೂ ಗೆದ್ರೆ ಅಜಿತ್​ ಚೀಫ್ ಸೆಲೆಕ್ಟರ್ ಆಗಿದಕ್ಕೂ ಸಾರ್ಥಕ. ಆಕಸ್ಮಾತ್ ವಿಫಲವಾದ್ರೆ ಅಗರ್ಕರ್​ ಕೆರಿಯರ್ ಸಹ ಖೇಲ್ ಖತಂ ನಾಟಕ್ ಬಂದ್.