ಕ್ರಿಕೆಟ್ ವಿಶ್ಲೇಷಕರಿಗೆ ತಿರುಗೇಟು ನೀಡಿದ ರಿಯಾನ್ ಪರಾಗ್‌2023ರ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಪರಾಗ್

ನವದೆಹಲಿ(ಜು.07): ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ರಿಯಾನ್ ಪರಾಗ್ ತಮ್ಮ ಬಗ್ಗೆ ಟ್ವೀಟ್‌ ಮಾಡುವವರ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಕಳೆದ 2023ರ ಐಪಿಎಲ್ ಟೂರ್ನಿಯಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್‌ ಮಾಡಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟರ್ ರಿಯಾನ್‌ ಪರಾಗ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. 21 ವರ್ಷದ ಅಸ್ಸಾಂ ಮೂಲದ ಯುವ ಕ್ರಿಕೆಟಿಗ ರಿಯಾಗ್‌ ಪರಾಗ್‌, ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಅಭಿಮಾನಿಗಳಿಂದ ಹಾಗೂ ಹಿರಿಯ ಕ್ರಿಕೆಟಿಗರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. 

2019ರಲ್ಲಿ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ರಿಯಾನ್‌ ಪರಾಗ್‌, 7 ಪಂದ್ಯಗಳನ್ನಾಡಿ 118.18ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 78 ರನ್‌ ಗಳಿಸಲಷ್ಟೇ ಗಳಿಸಲು ಶಕ್ತರಾಗಿದ್ದರು. ಯಾವುದೇ ವಿಚಾರವನ್ನಾಗಲಿ ಮುಕ್ತವಾಗಿ ಮಾತನಾಡುವ ಸ್ವಭಾವ ಹೊಂದಿರುವ ರಿಯಾನ್ ಪರಾಗ್, ಇತ್ತೀಚೆಗಷ್ಟೇ ರಾಜಸ್ಥಾನ ರಾಯಲ್ಸ್, ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Scroll to load tweet…

ರಾಜಸ್ಥಾನ ರಾಯಲ್ಸ್‌, ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕ್ರಿಕೆಟ್ ವಿಶ್ಲೇಷಕ ಜೋ ಬಟ್ಟಾಚಾರ್ಯ ಅವರು "ರಾಜಸ್ಥಾನ ರಾಯಲ್ಸ್ 5 ಬೌಲರ್, 5 ಬ್ಯಾಟರ್ ಹಾಗೂ ಒಂದು ಪರಾಗ್ ಜತೆ ಆಡಿತು ಆಡಿತು ಎನ್ನುವ ವಿಡಿಯೋ ಕುರಿತಂತೆ ಪರಾಗ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಜನರು ಕಷ್ಟಪಟ್ಟು ದುಡಿದ ಹಣವನ್ನು ಖರ್ಚುಮಾಡಿಕೊಂಡು ಪಂದ್ಯ ನೋಡಲು ಬರುತ್ತಾರೆಯೇ ಹೊರತು ಆಡಲು ಬರುವುದಿಲ್ಲ. ನಾವು ಚೆನ್ನಾಗಿ ಆಡಿಲ್ಲವೆಂದರೆ ಅವರು ನಮ್ಮನ್ನು ದ್ವೇಷಿಸುವುದು, ನನಗೆ ಅರ್ಥವಾಗುತ್ತದೆ.

"ಆದರೆ ವೆರಿಫೈಡ್ ಅಕೌಂಟ್ ಹೊಂದಿದವರು, ಮಾಜಿ ಕ್ರಿಕೆಟಿಗರು, ವೀಕ್ಷಕವಿವರಣೆಗಾರರು, ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ, ಹಾಗೆ ಮಾಡುವ ಬದಲು ನೇರವಾಗಿ ನನಗೆ ಟೆಕ್ಸ್ಟ್ ಮಾಡಿ. ಪ್ರಾಮಾಣಿಕವಾಗಿ ಹೇಳುತ್ತೇನೆ ಆ ರೀತಿ ಮಾಡಿದರೆ ನಾನು ಇಷ್ಟ ಪಡುತ್ತೇನೆ. ಯಾರೇ ಆಗಲಿ, ಹೇ ನೀನು ಈ ರೀತಿ ಆಡುತ್ತಿದ್ದೀಯ, ಆದರೆ ಆ ರೀತಿ ಆಡುವ ಬದಲು ಈ ರೀತಿ ಆಡು, ಆಗ ನಿನ್ನ ಪ್ರದರ್ಶನ ಮತ್ತಷ್ಟು ಸುಧಾರಿಸಲಿದೆ ಎಂದು ಹೇಳಿದರೆ ನಾನದನ್ನು ಕೇಳುತ್ತೇನೆ ಎಂದು ಪರಾಗ್ ಹೇಳಿದ್ದಾರೆ.