ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ಕೊಹ್ಲಿಯ ಬ್ಯಾಟಿಂಗ್ ಗ್ರಾಫ್ ಏರಿಕೆ..! ಎದುರಾಳಿ ತಂಡಗಳಿಗೆ ವಾರ್ನಿಂಗ್..!
2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ರನ್ ಮಷೀನ್ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ
ವಿಶ್ವಕಪ್‌ನಿಂದ ವಿಶ್ವಕಪ್‌ಗೆ ಹೆಚ್ಚುತ್ತಲೇ ಇದೆ ಕೊಹ್ಲಿ ಟ್ರ್ಯಾಕ್ ರೆಕಾರ್ಡ್
ಬೆಂಗಳೂರು(ಜು.07) ಏಕದಿನ ವಿಶ್ವಕಪ್‌ಗೆ ಟೂರ್ನಿ ಮಹಾಯುದ್ಧ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ಬಾರಿ ಭಾರತದಲ್ಲೇ ವರ್ಲ್ಡ್ಕಪ್ ಟೂರ್ನಿ ನಡೆಯುತ್ತಿದೆ. ಇದರಿಂದ ಶತಾಯ ಗತಾಯ ವಿಶ್ವಕಪ್ ಗೆಲ್ಲಲೇಬೇಕು ಅಂತ ಟೀಂ ಇಂಡಿಯಾ ಪಣ ತೊಟ್ಟಿದೆ. ಆದ್ರೆ, ಇದು ಸಾಧ್ಯವಾಗವಾಗಬೇಕಾದ್ರೆ, ರೋಹಿತ್ ಶರ್ಮಾ ಪಡೆಯ ಈ ಸ್ಟಾರ್ ಬ್ಯಾಟ್ಸ್ಮನ್ ಅಬ್ಬರಿಸಲೇಬೇಕು. ಈ ಹಿಂದಿನ ವಿಶ್ವಕಪ್ ಟೂರ್ನಿಗಳಂತೆ ಈ ಸಲನೂ ಜಬರ್ದಸ್ತ್ ಪ್ರದರ್ಶನ ನೀಡಲೇಬೇಕು.
ಹೌದು, ಆ ಸ್ಟಾರ್ ಬ್ಯಾಟರ್ ಬೇರ್ಯಾರು ಅಲ್ಲ, ಒನ್ ಆ್ಯಂಡ್ ಓನ್ಲಿ ರನ್ಮಷಿನ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಅಬ್ಬರಿಸಿದ್ರೆ ಭಾರತಕ್ಕೆ 3ನೇ ಏಕದಿನ ವಿಶ್ವಕಪ್ ಒಲಿಯೋದು ಕಷ್ಟವೇನಲ್ಲ. ಯಾಕಂದ್ರೆ ಈ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ಸೂಪರ್ಬ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅಲ್ಲದೇ, ಪ್ರತಿ ವಿಶ್ವಕಪ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗ್ರಾಫ್ ಏರಿಕೆಯಾಗಿದೆ. ಇದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ..!
2008ರಲ್ಲಿ ಏಕದಿನ ಕ್ರಿಕೆಟ್ಗೆ ಎಂಟ್ರಿ ನೀಡಿದ ಕೊಹ್ಲಿ, 2011ರಲ್ಲಿ ಮೊದಲ ವಿಶ್ವಕಪ್ ಟೂರ್ನಿ ಆಡಿದ್ರು. ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಕೊಹ್ಲಿ, 35.25 ಸರಾಸರಿಯಲ್ಲಿ 282 ರನ್ ಕಲೆಹಾಕಿದ್ರು. ಇದ್ರಲ್ಲಿ 1 ಶತಕ, 1 ಅರ್ಧಶತಕ ಸೇರಿದೆ. ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಗೌತಮ್ ಗಂಭೀರ್ ಜೊತೆ ಸೇರಿ 83 ರನ್ಗಳ ಜೊತೆಯಾಟವಾಡಿದ್ರು.
ಇನ್ನು 2015ರ ಏಕದಿನ ವಿಶ್ವಕಪ್ ವೇಳೆಗೆ ಕೊಹ್ಲಿ ಲೆವೆಲ್ ಕಂಪ್ಲೀಟ್ ಚೇಂಜ್ ಆಗಿತ್ತು. ಅಷ್ಟೊತ್ತಿಗೆ ರನ್ಮಷಿನ್ ಪಟ್ಟ ವಿರಾಟ್ ಕೊಹ್ಲಿ ಹೆಗಲೇರಿತ್ತು. ಇದರಿಂದ ಕೊಹ್ಲಿ ಮೇಲಿನ ನಿರೀಕ್ಷೆಯು ಹೆಚ್ಚಾಗಿತ್ತು. ಅದರಂತೆ ಕೊಹ್ಲಿ ತಮ್ಮ 2ನೇ ವಿಶ್ವಕಪ್ನಲ್ಲೂ ಮಿಂಚಿದ್ರು. ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್ನಲ್ಲಿ ಕೊಹ್ಲಿ 8 ಪಂದ್ಯಗಳಲ್ಲಿ ಬ್ಯಾಟ್ ಝಳಪಿಸಿದ್ರು. 50.83ರ ಸರಾಸರಿಯಲ್ಲಿ 1 ಶತಕ ಸೇರಿದಂತೆ 305 ರನ್ ದಾಖಲಿಸಿದ್ರು. ಅದ್ರೆ, ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮಾತ್ರ ಕೊಹ್ಲಿ ನಿರಾಸೆ ಮೂಡಿಸಿದ್ರು. ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ 107 ರನ್ ಟೂರ್ನಿಯಲ್ಲಿ ಕೊಹ್ಲಿಯ ಗರಿಷ್ಠ ಸ್ಕೋರ್ ಆಗಿತ್ತು.
MS Dhoni @42: Captain. Leader. Legend!ಗೆ ಜನ್ಮ ದಿನದ ಸಂಭ್ರಮ; ಧೋನಿ ಸರಿಸಾಟಿಯುಂಟೆ?
2019ರಲ್ಲಿ ವಿಶ್ವಕಪ್ನಲ್ಲು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿದ್ರು. ನಾಯಕತ್ವದ ಜೊತೆಗೆ ಜವಬ್ದಾರಿಯುತ ಬ್ಯಾಟಿಂಗ್ ಮೂಲಕವೂ ಕೊಹ್ಲಿ ತಂಡವನ್ನ ಮುಂದೆ ನಿಂತು ಮುನ್ನಡೆಸಿದ್ರು. ಆಂಗ್ಲರ ನಾಡು ಇಂಗ್ಲೆಂಡ್ನಲ್ಲಿ ನಡೆದ 2019ರ ವಿಶ್ವಕಪ್ನಲ್ಲಿ ಕೊಹ್ಲಿ 9 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ರು. 55.37ರ ಸರಾಸರಿಯಲ್ಲಿ 5 ಅರ್ಧಶತಕ ಸೇರಿದಂತೆ 443 ರನ್ಗಳಿಸಿದ್ರು. 82 ಕೊಹ್ಲಿ ಹೈಯೆಸ್ಟ್ ಸ್ಕೋರ್ ಆಗಿತ್ತು.
ಒಟ್ಟಿನಲ್ಲಿ ಈ ಹಿಂದಿನ ಮೂರು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸರಾಸರಿ ಏರಿಕೆಯಾಗಿದೆ ಹೊರತು ಕಡಿಮೆಯಾಗಿಲ್ಲ. ಇದರಿಂದ ಈ ಬಾರಿ ವಿಶ್ವಕಪ್ನಲ್ಲಿ ಕೊಹ್ಲಿ ಆಟದ ಮೇಲೆ ಎಕ್ಸ್ಪೆಕ್ಟೇಷನ್ ಡಬಲ್ ಆಗಿದೆ. ಒಂದು ವೇಳೆ ವಿರಾಟ್ ಕೊಹ್ಲಿ ತಮ್ಮ ಖ್ಯಾತಿಗೆ ತಕ್ಕಂತೆ ಆಡಿದ್ರೆ, ಭಾರತಕ್ಕೆ ವಿಶ್ವಕಪ್ ಮಿಸ್ಸೇ ಇಲ್ಲ
ದಶಕದ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುವ ಕನಸು ನನಸಾಗುತ್ತಾ..?
ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿಯನ್ನು ಜಯಿಸಿತ್ತು. ಇದಾಗಿ ಒಂದು ದಶಕದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಫಲವಾಗಿಲ್ಲ. 2013ರಲ್ಲಿ ಇಂಗ್ಲೆಂಡ್‌ನಲ್ಲಿಯೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಏಕದಿನ ವಿಶ್ವಕ್, ಟಿ20 ವಿಶ್ವಕಪ್ ಸೇರಿದಂತೆ ಐಸಿಸಿ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡರೂ ಸಹಾ ಟೀಂ ಇಂಡಿಯಾ ನಾಕೌಟ್ ಹಂತದಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ.
ಇನ್ನು ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್‌ನಲ್ಲಿಯೂ ಭಾರತ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ ಎರಡನೇ ಬಾರಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಭಾರತ, ಏಕದಿನ ವಿಶ್ವಕಪ್‌ನಲ್ಲಾದರೂ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.