WPL Auction: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ವೈರಲ್ ಆದ ಟಾಪ್ 10 ಮೀಮ್ಸ್‌ಗಳಿವು..!
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯ
5 ಫ್ರಾಂಚೈಸಿಗಳಿಂದ 87 ಆಟಗಾರ್ತಿಯರ ಖರೀದಿ
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ಕುರಿತು ಹಲವು ಮೀಮ್ಸ್‌ಗಳು ವೈರಲ್
ಮುಂಬೈ(ಫೆ.14): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಅರ್ಥಾತ್ ಮಹಿಳಾ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಭಾರತದ ಉಪನಾಯಕಿ, ತಾರಾ ಬ್ಯಾಟರ್ ಸ್ಮೃತಿ ಮಂಧನಾ ಹೊರಹೊಮ್ಮಿದ್ದಾರೆ. ಸೋಮವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಮೃತಿ ಬರೋಬ್ಬರಿ 3.4 ಕೋಟಿ ರು.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪಾಲಾದರು.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ 1.8 ಕೋಟಿ ರು.ಗೆ ಮುಂಬೈ ತಂಡ ಸೇರಿ, ನಿರೀಕ್ಷೆಗೂ ಕಡಿಮೆ ಮೊತ್ತ ಪಡೆದರು. ಜೆಮಿಮಾ ರೋಡ್ರಿಗ್‌್ಸ(2.2 ಕೋಟಿ ರು), ಶಫಾಲಿ ವರ್ಮಾ(2 ಕೋಟಿ ರು.), ರಿಚಾ ಘೋಷ್(1.9 ಕೋಟಿ ರು.) ಸೇರಿ ಭಾರತದ 10 ಆಟಗಾರ್ತಿಯರ ಮೊತ್ತ ಒಂದು ಕೋಟಿ ರು. ದಾಟಿತು. 10 ವಿದೇಶಿ ಆಟಗಾರ್ತಿಯರೂ ಕೋಟಿ ರುಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತ ಪಡೆದರು.
ಒಟ್ಟು 448 ಆಟಗಾರ್ತಿಯರು ಹರಾಜಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಗರಿಷ್ಠ 90 ಆಟಗಾರ್ತಿಯರು ಬಿಕರಿಯಾಗಬಹುದಿತ್ತು. 5 ತಂಡಗಳು 30 ವಿದೇಶಿಗರು ಸೇರಿ ಒಟ್ಟು 87 ಆಟಗಾರ್ತಿಯರನ್ನು ಖರೀದಿಸಿದವು. ಪ್ರತಿ ತಂಡವು ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿ ಮಾಡಬಹುದಿತ್ತು. ಆರ್‌ಸಿಬಿ, ಡೆಲ್ಲಿ, ಗುಜರಾತ್ ತಲಾ 18 ಆಟಗಾರ್ತಿಯರನ್ನು ಖರೀದಿಸಿದರೆ, ಮುಂಬೈ 17, ಯುಪಿ ವಾರಿಯರ್ಸ್ 16 ಆಟಗಾರ್ತಿರನ್ನು ಖರೀದಿಸಿದವು.
ಪ್ರತಿ ತಂಡ ಗರಿಷ್ಠ 12 ಕೋಟಿ ರು. ಬಳಸಬಹುದಿತ್ತು. ಮುಂಬೈ ಹಾಗೂ ಯುಪಿ ಪೂರ್ತಿ ಹಣ ಖಾಲಿ ಮಾಡಿದರೆ, ಗುಜರಾತ್ 5 ಲಕ್ಷ ರು., ಆರ್‌ಸಿಬಿ 10 ಲಕ್ಷ ರು ಹಾಗೂ ಡೆಲ್ಲಿ 35 ಲಕ್ಷ ರು. ಉಳಿಸಿದವು. 5 ತಂಡಗಳು ಸೇರಿ ಒಟ್ಟು 59.5 ಕೋಟಿ ರು. ಖರ್ಚು ಮಾಡಿದವು.
WPL Auction ಆರ್‌ಸಿಬಿ ಪವರ್-ಪ್ಲೇ ಹರಾಜು ಸೂಪರ್..! 5 ಆಟಗಾರ್ತಿಯರಿಗೆ 9 ಕೋಟಿ ರುಪಾಯಿ ಖರ್ಚು
ಕ್ರಿಕೆಟ್ ಅಭಿಮಾನಿಗಳು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್‌ಗಳು ವೈರಲ್ ಆಗಿವೆ. ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ವೈರಲ್ ಆದ ಟಾಪ್ 10 ಮೀಮ್ಸ್‌ಗಳು ಇಲ್ಲಿವೆ ನೋಡಿ.
ಓರ್ವ ನೆಟ್ಟಿಗ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಾಬರ್ ಅಜಂ ಪಡೆಯುವ ಸಂಭಾವನೆಗಿಂತ ಸ್ಮೃತಿ ಮಂಧನಾ ಸಂಭಾವನೆ ಹೆಚ್ಚಿದೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನೊಂದೆಡೆ ದೊಡ್ಡ ಆಟಗಾರ್ತಿಯರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೈಪೋಟಿ ನಡೆಸುತ್ತಿರುವುದನ್ನು ಕದ್ದು ನೋಡುವಂತೆ 'ಲಗಾನ್' ಚಿತ್ರದ ಪೋಟೋ ಬಳಸಿ ಟ್ರೋಲ್ ಮಾಡಲಾಗಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡ ಬೆನ್ನಲ್ಲೇ ಸ್ಮೃತಿ ಮಂಧನಾ, 'ಕನ್ನಡದಲ್ಲೇ ನಮಸ್ಕಾರ' ಬೆಂಗಳೂರು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಚಾರಿ' ಚಿತ್ರದ ವಿಡಿಯೋ ಬಳಸಿ ಸ್ವಾಗತಿಸಿದ್ದಾರೆ.