Asianet Suvarna News Asianet Suvarna News

WPL Auction ಆರ್‌ಸಿಬಿ ಪವರ್‌-ಪ್ಲೇ ಹರಾಜು ಸೂಪರ್..! 5 ಆಟಗಾರ್ತಿಯರಿಗೆ 9 ಕೋಟಿ ರುಪಾಯಿ ಖರ್ಚು

ಸಾಕಷ್ಟು ಅಳೆದು-ತೂಗಿ ಆಟಗಾರ್ತಿಯರನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ
5 ಆಟಗಾರ್ತಿಯರ ಖರೀದಿಗೆ ಮುಕ್ಕಾಲು ಬಜೆಟ್ ಮೀಸಲಿಟ್ಟ ಬೆಂಗಳೂರು ಫ್ರಾಂಚೈಸಿ
ಬೆಂಗಳೂರು ತಂಡ ಕೂಡಿಕೊಂಡ ಟಿ20 ಸ್ಪೆಷಲಿಸ್ಟ್‌ಗಳು

WPL Auction Royal Challengers Bangalore franchise Strategy stuns everyone kvn
Author
First Published Feb 14, 2023, 8:48 AM IST

ಬೆಂಗಳೂರು(ಫೆ.14): ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಆರ್‌ಸಿಬಿಯ ತಂತ್ರಗಾರಿಕೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಮೊದಲು ಮುಂಬೈ ಜೊತೆ ಪೈಪೋಟಿ ನಡೆಸಿ ಸ್ಮೃತಿ ಮಂಧನಾರನ್ನು ಖರೀದಿಸಿದ ಆರ್‌ಸಿಬಿ, ಬಳಿಕ ನ್ಯೂಜಿಲೆಂಡ್‌ ನಾಯಕಿ ಸೋಫಿ ಡಿವೈನ್‌ರನ್ನು ಮೂಲಬೆಲೆ 50 ಲಕ್ಷ ರು.ಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದಾದ ಮೇಲೆ ಆಸ್ಪ್ರೇಲಿಯಾದ ದಿಗ್ಗಜೆ ಎಲೈಸಿ ಪೆರ್ರಿಯನ್ನು 1.7 ಕೋಟಿ ರು. ನೀಡಿ ಖರೀದಿಸಿದ ಆರ್‌ಸಿಬಿ, 3 ಆಟಗಾರ್ತಿಯರ ಮೇಲೆ ಅಂದಾಜು 6 ಕೋಟಿ ರು. ಖರ್ಚು ಮಾಡಿತು. 

ಇಷ್ಟಕ್ಕೆ ನಿಲ್ಲಿಸದ ಆರ್‌ಸಿಬಿ ಆಕ್ರಮಣಕಾರಿ ಬಿಡ್ಡಿಂಗ್‌ ಮುಂದುವರಿಸಿ, ಭಾರತದ ತಾರಾ ವೇಗಿ, ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ರೇಣುಕಾ ಸಿಂಗ್‌ರನ್ನು 1.5 ಕೋಟಿ ರು.ಗೆ ಖರೀದಿಸಿದ ತಂಡ, ಆ ನಂತರ ಯುವ ವಿಕೆಟ್‌ ಕೀಪರ್‌, ಸ್ಫೋಟಕ ಬ್ಯಾಟರ್‌ ರಿಚಾ ಘೋಷ್‌ಗೆ 1.9 ಕೋಟಿ ರು. ನೀಡಿತು. ಐವರು ಆಟಗಾರ್ತಿಯರ ಖರೀದಿಗೇ 9 ಕೋಟಿ ರು. ಖರ್ಚಾಯಿತು. ಉಳಿದ 3 ಕೋಟಿ ರು.ಗಳಲ್ಲಿ 10 ಆಟಗಾರ್ತಿಯರನ್ನು ಖರೀದಿಸಿತು.

ಸ್ಮೃತಿಗೆ ಭಾರೀ ಡಿಮ್ಯಾಂಡ್‌!

ಹರಾಜು ಆರಂಭವಾಗಿದ್ದೇ ಸ್ಮೃತಿ ಮಂಧನಾ ಹೆಸರಿನಿಂದ. ಮುಂಬೈ ಹಾಗೂ ಆರ್‌ಸಿಬಿ ಫ್ರಾಂಚೈಸಿಗಳು ಸ್ಮೃತಿಯನ್ನು ಖರೀದಿಸಲು ಪೈಪೋಟಿಗೆ ಬಿದ್ದವು. ನೋಡನೋಡುತ್ತಿದ್ದಂತೆ ಬಿಡ್‌ 3 ಕೋಟಿ ರು. ತಲುಪಿತು. 3.20 ಕೋಟಿ ರು.ಗೆ ಮುಂಬೈ ಬಿಡ್‌ ನಿಲ್ಲಿಸಿದರೆ, ಆರ್‌ಸಿಬಿ 3.4 ಕೋಟಿ ರು.ಗೆ ಖರೀದಿ ಮಾಡಿತು.

ಜೆರ್ಸಿ ನಂ.18 ಬಗ್ಗೆ ಆರ್‌ಸಿಬಿ ಒಲವು!

ಆರ್‌​ಸಿಬಿ ಫ್ರಾಂಚೈ​ಸಿಯು 18 ಸಂಖ್ಯೆಯ ಜೆರ್ಸಿ ಬಗ್ಗೆ ತುಂಬಾ ಒಲವು ಹೊಂದಿ​ದಂತಿದ್ದು, ವಿರಾಟ್‌ ಕೊಹ್ಲಿ ಬಳಿಕ ಸ್ಮೃತಿ ಮಂಧನಾ ಅವ​ರನ್ನೂ ತಂಡಕ್ಕೆ ಸೇರಿ​ಸಿ​ಕೊಂಡಿದೆ. ಇವ​ರಿ​ಬ್ಬರ ಜೆರ್ಸಿ ನಂ.18 ಎನ್ನು​ವುದು ವಿಶೇಷ. ಮಂಧ​ನಾ​ರನ್ನು ಆರ್‌​ಸಿಬಿ ಖರೀ​ದಿ​ಸಿದ ಬೆನ್ನಲ್ಲೇ ಸಾಮಾ​ಜಿಕ ತಾಣ​ಗ​ಳಲ್ಲಿ ಕಿಂಗ್‌ ಮತ್ತು ಕ್ವೀನ್‌, ನಂ.18 ಜೆರ್ಸಿ ಹಾಗೂ ಇವ​ರಿ​ಬ್ಬ​ರನ್ನು ಹೋಲಿಕೆ ಮಾಡುವ ಹಲವು ಫೋಟೋ​ಗಳು ಟ್ರೆಂಡ್‌ ಆಗಿ​ವೆ.

WPL Auction: ಸ್ಮೃತಿ ಮಂಧನಾ, ರಿಚಾ ಘೋಷ್ ಸೇರಿದಂತೆ ಬಲಿಷ್ಠ ಮಹಿಳಾ ತಂಡವನ್ನು ಕಟ್ಟಿದ RCB..!

ಆರ್‌​ಸಿಬಿ ಸೇರಿದವರಿವರು: 

ಸ್ಮೃತಿ ಮಂಧ​​ನಾ .3.4 ಕೋಟಿ ರುಪಾಯಿ, ರಿಚಾ ಘೋಷ್‌ 1.9 ಕೋಟಿ ರುಪಾಯಿ, ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ, ರೇಣುಕಾ ಸಿಂಗ್‌ 1.5 ಕೋಟಿ ರುಪಾಯಿ, ಸೋಫಿ ಡಿವೈ​ನ್‌ 50 ಲಕ್ಷ ರುಪಾಯಿ, ಹೀಥರ್‌ ನೈಟ್‌ 40 ಲಕ್ಷ ರುಪಾಯಿ, ಮೇಗನ್‌ ಶುಟ್‌ 40 ಲಕ್ಷ ರುಪಾಯಿ, ಕನಿಕಾ ಅಹುಜಾ 35 ಲಕ್ಷ ರುಪಾಯಿ, ವಾನ್‌ ನೀಕಕ್‌ 30 ಲಕ್ಷ ರುಪಾಯಿ, ಎರಿನ್‌ ಬರ್ನ್ಸ್‌ 30 ಲಕ್ಷ ರುಪಾಯಿ, ಪ್ರೀತಿ ಬೋಸ್‌ 30 ಲಕ್ಷ ರುಪಾಯಿ, ಕೋಮಲ್‌ ಜಂಜದ್‌ 25 ಲಕ್ಷ ರುಪಾಯಿ, ಆಶಾ ಶೋಭ​ನಾ 10 ಲಕ್ಷ ರುಪಾಯಿ, ದಿಶಾ ಕಸಟ್‌ 10 ಲಕ್ಷ ರುಪಾಯಿ, ಇಂದ್ರಾನಿ ರಾಯ್‌ 10 ಲಕ್ಷ ರುಪಾಯಿ, ಪೂನಂ ಕೆಮ್ನ​ರ್‌ 10 ಲಕ್ಷ ರುಪಾಯಿ, ಸಹನಾ ಪವಾ​ರ್‌ 10 ಲಕ್ಷ ರುಪಾಯಿ, ಶ್ರೇಯಾಂಕಾ ಪಾಟೀ​ಲ್‌ 10 ಲಕ್ಷ ರುಪಾಯಿ.

ಹೋಟೆ​ಲಲ್ಲೇ ಹರಾಜು ವೀಕ್ಷಿ​ಸಿದ ಮಹಿಳಾ ತಂಡ

ಟಿ20 ವಿಶ್ವ​ಕಪ್‌ ಆಡಲು ದಕ್ಷಿಣ ಆ​ಫ್ರಿ​ಕಾ​ದ​ಲ್ಲಿ​ರುವ ಭಾರತ ಮಹಿಳಾ ತಂಡದ ಆಟ​ಗಾ​ರ್ತಿ​ಯರು ಅಲ್ಲಿನ ಹೋಟೆ​ಲ್‌​ನಲ್ಲಿ ಕುಳಿತು ಹರಾಜು ಪ್ರಕ್ರಿ​ಯೆ​ಯನ್ನು ವೀಕ್ಷಿ​ಸಿ​ದ​ರು. ಆಟ​ಗಾ​ರ್ತಿ​ಯರು ವಿವಿಧ ತಂಡ​ಗ​ಳಿಗೆ ಬಿಕ​ರಿ​ಯಾ​ದಾಗ ಒಟ್ಟಾಗಿ ಸಂಭ್ರ​ಮಿ​ಸು​ತ್ತಿ​ರುವ ವಿಡಿ​ಯೋ​ಗಳು ವೈರಲ್‌ ಆಗಿ​ವೆ. ಅದರಲ್ಲೂ ಆರಂಭದಲ್ಲೇ ಸ್ಮೃತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿದ್ದಂತೆ ಆಟಗಾರ್ತಿಯರು ಕುಣಿದು ಸಂಭ್ರಮಿಸಿದರು.

Follow Us:
Download App:
  • android
  • ios