ನವದೆಹಲಿ(ಏ.27): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯರಾಗಿರುವ ಭಾರತದ ಸ್ಪಿನ್ನರ್‌ ಯುಜುವೇಂದ್ರ ಚಹಲ್‌ ಅವರ ಕಾಟದಿಂದ ಬೇಸತ್ತಿರುವುದಾಗಿ ವಿಂಡೀಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೇಳಿದ್ದಾರೆ. 

ಕೆಲದಿನಗಳ ಹಿಂದೆ ಚಹಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಉಪನಾಯಕ ರೋಹಿತ್ ಶರ್ಮಾ ಮಣಿಕಟ್ಟು ಸ್ಪಿನ್ನರ್ ಚಹಲ್ ಅವರನ್ನು ಟಿಕ್‌ಟಾಕ್ ವಿಚಾರದಲ್ಲಿ ಸರಿಯಾಗಿ ರೋಸ್ಟ್ ಮಾಡಿದ್ದರು. ಇದೀಗ ಕ್ರಿಸ್ ಗೇಲ್, ಚಹಲ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.

ಟಿಕ್‌ಟಾಕ್‌ನಲ್ಲಿ ಚಹಲ್‌ ವಿಡಿಯೋಗಳಿಂದ ತುಂಬಾ ಕಿರಿಕಿರಿ ಅನುಭವಿಸಿದ್ದೇನೆ. ಹೀಗಾಗಿ ಚಹಲ್‌ರನ್ನು ಬ್ಲಾಕ್‌ ಮಾಡುವುದಾಗಿ ಗೇಲ್‌ ಹೇಳಿದ್ದಾರೆ. ಜಾಲತಾಣಗಳಲ್ಲಿ ಚಹಲ್‌ ಮಾಡಿರುವ ತಮಾಷೆಯ ಟಿಕ್‌ಟಾಕ್‌ ವಿಡಿಯೋಗಳನ್ನು ನೋಡಿದ ಬಳಿಕ ಯೂನಿವರ್ಸೆಲ್ ಬಾಸ್ ಖ್ಯಾತಿಯ ಗೇಲ್ ಈ ರೀತಿ ತಿಳಿಸಿದ್ದಾರೆ.

IPL ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ, ಮೊದಲ ಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ!

ನಾನು ಗಂಭೀರವಾಗಿ ಈ ಮಾತನ್ನು ಹೇಳುತ್ತಿದ್ದೇನೆ. ನೀನು ಮಾಡುವ ಟಿಕ್‌ಟಾಕ್ ವಿಡಿಯೋಗಳು ನೋಡಲು ನನಗೆ ಕಿರಿಕಿರಿಯಾಗುತ್ತಿದೆ. ಹೀಗಾಗಿ ನಿನ್ನನ್ನು ಟಿಕ್‌ಟಾಕ್‌ನಲ್ಲಿ ಬ್ಲಾಕ್ ಮಾಡುತ್ತೇನೆ. ನೀನು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದು ಬೆಸ್ಟ್ ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ.

ಅಪ್ಪನ ಜತೆ ಟಿಕ್‌ ಟಾಕ್ ಮಾಡಿ ಟ್ರೋಲ್ ಆದ ಚಹಲ್..!

ಈ ಮೊದಲು ವಿರಾಟ್ ಕೊಹ್ಲಿ, ಲೆಗ್‌ಸ್ಪಿನ್ನರ್ ಚಹಲ್ ಅವರನ್ನು ಒಬ್ಬ ಜೋಕರ್ ಎಂದು ಕಾಲೆಳೆದಿದ್ದರು. ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಎಬಿ ಡಿವಿಲಿಯರ್ಸ್ ಜತೆ ಮಾತನಾಡುವಾಗ ವಿರಾಟ್ ಕೊಹ್ಲಿ, 29 ವರ್ಷದ ಈತ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾನೆ ಎಂದರೆ ನಂಬಲು ಸಾಧ್ಯವಾಗುವುದಿಲ್ಲ. ಆತ ಮಾಡುವ ವಿಡಿಯೋಗಳನ್ನೊಮ್ಮೆ ನೋಡಿ. ಅವನೊಬ್ಬ ಅಪ್ಪಟ ಜೋಕರ್ ಎಂದು ಚಹಲ್‌ರನ್ನು ಕಾಲೆಳೆದಿದ್ದರು. 

ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಾಗಿ ಸಮಯ ಕಳೆಯಲು ಬಹುತೇಕ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಲಕಳೆಯುತ್ತಿದ್ದಾರೆ. ಹಲವು ಆಟಗಾರರು ತಮ್ಮ ಸಹ ಆಟಗಾರರು ಹಾಗೂ ಸ್ನೇಹಿತರ ಜತೆ ಹರಟೆ ಹೊಡೆಯುತ್ತಿದ್ದಾರೆ.