ನವದೆಹಲಿ(ಮಾ.28): ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಹಲ್ ಸದ್ಯ ಬಿಡುವಿನಲ್ಲಿದ್ದು ಟಿಕ್ ಟಾಕ್‌ ಮೂಲಕ ಸದಾ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ಧಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಂ.1 ಭಾರತದ ಸ್ಪಿನ್ನರ್ ಎನಿಸಿರುವ ಚಹಲ್ ಇದೀಗ ತಮ್ಮ ತಂದೆಯ ಜತೆ ಟಿಕ್ ಟಾಕ್ ಮಾಡಲು ಹೋಗಿ ಸಕತ್ ಟ್ರೋಲ್ ಆಗಿದ್ದಾರೆ.

ತಮ್ಮನ್ನ ತಾವೇ ಟ್ರೋಲ್‌ ಮಾಡಿಕೊಂಡ ಯುಜುವೇಂದ್ರ ಚಹಲ್‌

ಇಷ್ಟರಲ್ಲಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭ್ಯಾಸ ಶಿಬಿರದಲ್ಲಿ ಚಹಲ್ ಬ್ಯುಸಿ ಇರಬೇಕಿತ್ತು. ಆದರೆ ಕೊರೋನಾ ವೈರಸ್ ಹಾವಳಿಯಿಂದಾಗಿ ಸದ್ಯ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಇರಲಾರದವ ಇರುವೆ ಬಿಟ್ಟುಕೊಂಡ ಎಂಬಂತೆ ಚಹಲ್ ಇದೀಗ ತಂದೆಯ ಜತೆ ಟಿಕ್ ಟಾಕ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಬಿಡುವಿನ ಸಮಯವನ್ನು ಮಸ್ತ್ ಎಂಜಾಯ್ ಮಾಡುತ್ತಿರುವ ಚಹಲ್, ತಂದೆಯ ಜತೆ ಮೊದಲ ಬಾರಿಗೆ ಟಿಕ್ ಟಾಕ್ ಮಾಡಿದ್ದಾರೆ. 

ಹೀಗಿದೆ ನೋಡಿ ಚಹಲ್ ಹಾಗೂ ಅವರ ತಂದೆ ಮಾಡಿದ ಟಿಕ್ ಟಾಕ್ ವಿಡಿಯೋ

ಚಹಲ್ ತಂದೆ ಜತೆ ಟಿಕ್ ಟಾಕ್ ಮಾಡುತ್ತಿರುವ ವಿಡಿಯೋ ವೈರಲ್ ಆಗುವುದರ ಜತೆಗೆ ಹಲವು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಈ ಏನೆಲ್ಲಾ ಟ್ರೋಲ್ ಮಾಡಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ ಬಿಡಿ.