ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಆರಂಭಿಕ ಸೋಲುಗಳ ನಂತರ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಕಂಬ್ಯಾಕ್ ಮಾಡಿದೆ. ಈ ಅದ್ಭುತ ಗೆಲುವಿನ ಹಿಂದೆ ಉಪನಾಯಕ ತಿಲಕ್ ವರ್ಮಾ, ನಮನ್ ಧೀರ್ ಹಾಗೂ ಬೌಲರ್ ಅರ್ಷದೀಪ್ ಸಿಂಗ್ ಅವರ ಅತ್ಯುತ್ತಮ ಪ್ರದರ್ಶನ ಅಡಗಿದೆ.

ಟೀಂ ಇಂಡಿಯಾದಲ್ಲಿ ಮೂವರು ಸ್ಟಾರ್‍‌ಗಳ ದರ್ಬಾರ್ ಜೋರಾಗಿದೆ. ಪ್ರಸ್ತುತ ಅವರ ಪ್ರದರ್ಶನ ನೋಡುತ್ತಿದ್ದರೆ, ವಿಶ್ವ ಕ್ರಿಕೆಟ್‌ ದಿಗ್ಗಜರು ಮಂಕಾಗುವಂತೆ ಮರೆದಾಡುತ್ತಿದ್ದು, ಅದಕ್ಕೆ ನ್ಯೂಜಿಲೆಂಡ್ ವಿರುದ್ಧದ ಟಿ-ಸರಣಿ ಸಾಕ್ಷಿಯಾಗಿದೆ. ಇಲ್ಲಿ ಅಚ್ಚರಿಯ ವಿಚಾರ ಏನೆಂದರೆ ಭಾರತ ಟಿ-20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾದ ಬಳಿಕ ಸತತ 7 ಪಂದ್ಯಗಳನ್ನ ಸೋತರು. ಅವರ ಕ್ಯಾಪ್ಟನ್ಸಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲು ಆಗಿಲಿಲ್ಲ ಎಂಬ ಕೂಗು ಜೋರಾಗಿತ್ತು.

ಬೆನ್ನಲ್ಲೇ ಅಯ್ಯರ್ ಅವರ ಕ್ಯಾಪ್ಟನ್ಸಿ ತುಂಬಾ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಿತ್ತು. ಅದಕ್ಕೆ ತಾಜಾ ಉದಾಹರಣೆ ಅಂದರೆ.. ಇತ್ತೀಚೆಗೆ ನಡೆದ ವೆಸ್ಟ್ ವಿಂಡೀಸ್‌ ಸಿರೀಸ್ ಹಾಗೂ ಈಗ ಪ್ರಸ್ತುತ ನಡೆಯುತ್ತಿರುವ ನ್ಯೂಜಿಲೆಂಡ್ ಸಿರೀಸ್. ಟೀಂ ಇಂಡಿಯಾ ಅದ್ಭುತ ಪ್ರದರ್ಶನ ಹಾಗೂ ಗೆಲುವಿನ ಹಿಂದೆ ಮೂರು ಶಕ್ತಿಗಳು ತುಂಬಾನೇ ಕೆಲಸ ಮಾಡುತ್ತಿದೆ. ಅದರು ಬೇರೆ ಯಾರೂ ಅಲ್ಲ. ಉಪನಾಯಕ ತಿಲಕ್ ವರ್ಮಾ, ನಮನ್ ಧೀರ್ ಹಾಗೂ ಬೌಲರ್ ಅರ್ಷದೀಪ್ ಸಿಂಗ್.

ನಮನ್ ಧೀರ್!

ವೈಭವ್ ಸೂರ್ಯವಂಶಿ ಬಳಿಕ ಟೀಂ ಇಂಡಿಯಾದ ಅದ್ಭುತ ಪ್ರತಿಭೆ ಇದು. ಇವತ್ತು ಇಡೀ ಕ್ರಿಕೆಟ್ ಜಗತ್ತು ನಮನ್ ಧೀರ್ ಯಾರು ಎಂದು ಗೂಗಲ್ ಹಿಡಿದು ಸರ್ಚ್ ಮಾಡ್ತಿದೆ. ಅದಕ್ಕೆ ಕಾರಣ ಅವರ ಇತ್ತೀಚೆಗಿನ ಪ್ರದರ್ಶನಗಳು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 15 ಬಾಲ್‌ನಲ್ಲಿ 42 ರನ್‌ಗಳಿಸಿದರು. ಎರಡನೇ ಪಂದ್ಯದಲ್ಲಿ 31 ರನ್‌ ಚಚ್ಚಿ ತಂಡದ ಗೆಲುವಿಗೆ ಕಾರಣರಾದರು. ತಮ್ಮ 7 ಟಿ-20 ಪಂದ್ಯಗಳ ಕರಿಯರ್‍‌‌ನಲ್ಲಿ 246.66 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿ ಒಟ್ಟು 111 ರನ್‌ಗಳಿಸಿದ್ದಾರೆ. ಜೊತೆಗೆ ಐದು ವಿಕೆಟ್‌ಗಳನ್ನ ಪಡೆದುಕೊಂಡಿದ್ದಾರೆ.

ಉಪನಾಯಕ ತಿಲಕ್ ವರ್ಮಾ

ತಿಲಕ್ ವರ್ಮಾ ಟೀಂ ಇಂಡಿಯಾ ಟಿ-ತಂಡದ ಹಿರಿಯ ಆಟಗಾರ. ಅವರು ತುಂಬಾ ಸಮಯಗಳಿಂದ ಭಾರತ ತಂಡವನ್ನು ಪ್ರಿನಿಧಿಸುತ್ತಿದ್ದು, ಮೂರನೇ ಬ್ಯಾಟಿಂಗ್ ಆರ್ಡರ್‍‌ನಲ್ಲಿ ಬಂದು ಮೈದಾನದಲ್ಲಿ ಮೆರದಾಡುತ್ತಿದ್ದಾರೆ. ಅವರು ಐದನೇ ಸ್ಥಾನದಲ್ಲೂ ಆಡಬಲ್ಲ ಆಟಗಾರ. ಸದ್ಯದ ಟ್ರೆಂಡ್ ನೋಡಿದ್ರೆ ತಿಲಕ್ ವರ್ಮಾ ಡೆತ್ ಓವರ್‍‌ಗಳಲ್ಲಿ ಫಿನಿಶರ್ ರೋಲ್ ನಿಭಾಯಿಸಲು ಸಿದ್ಧ ಅನ್ನೋದನ್ನೂ ಸಾಬೀತು ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20ನಲ್ಲಿ ಅಜೇಯ 51 ರನ್ ಗಳಿಸುವ ಮೂಲಕ ತಂಡಕ್ಕೆ ಹೊಸ ಭರವಸೆ ನೀಡಿದ್ದಾರೆ.

ಅರ್ಷದೀಪ್ ಸಿಂಗ್

ಇತ್ತೀಚೆಗಿನ ದಿನಗಳಲ್ಲಿ ಹೊಡಿಬಡಿ ಆಟಕ್ಕೆ ಅಂದ್ರೆ ಬ್ಯಾಟಿಂಗ್ ಸ್ನೇಹಿಯಾಗಿ ಪಿಚ್‌ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಯಾವುದೇ ಮೈದಾನದಲ್ಲಿ 200 ರನ್‌ಗಳು ಸುಲಭವಾಗಿ ಸಿಗುತ್ತಿದೆ. ಇದರಿಂದಾಗಿ ಎಷ್ಟೇ ಅದ್ಭುತ ಬೌಲರ್‍‌ ಎನಿಸಿದರೂ ಬ್ಯಾಟರ್‍‌ಗಳ ಆರ್ಭಟದ ಮುಂದು ಬೌಲರ್‍‌ಗಳು ಮಂಕಾಗಿ ಕಾಣಿಸಿತ್ತಾರೆ. ಆದರೆ ನಮ್ಮ ಅರ್ಷದೀಪ್ ಸಿಂಗ್ ಹಾಗೆ ಅಲ್ಲ. ಅವರು ತಮ್ಮ ವಿಕೆಟ್ ಬೇಟೆಯನ್ನ ಎಂದಿನಂತೆ ಮುಂದುವರಿಸಿದ್ದಾರೆ. ವಿಕೆಟ್‌ಗಳೇ ಬರಗಾಲ ಎನ್ನುವಂತಹ ಸ್ಥಿತಿಯಲ್ಲಿ ತಮ್ಮ ವಿಶ್ವದರ್ಜೆ ಕೌಶಲ್ಯದ ಮೂಲಕ ವಿಕೆಟ್ ಎತ್ತುತ್ತಾರೆ. ಇನ್ನು ನ್ಯೂಜಿಲೆಂಡ್ ಸಿರೀಸ್‌ನಲ್ಲಿ ಮೂರು ವಿಕೆಟ್ ಪಡೆದು ತಂಡದ ಅತ್ಯಂತ ಯಶಸ್ವಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.