ವೈಯಕ್ತಿಕ ಕಲಹದಿಂದ ಜೈಲು ಶಿಕ್ಷೆ ಅನುಭವಿಸಿ ಮರಳಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೆಲ್ ತಮ್ಮ ಕರಾಳ ದಿನಗಳ ಬಗ್ಗೆ ಮೌನ ಮುರಿದಿದ್ದಾರೆ. ಜೈಲಿನಲ್ಲಿ ಕಳೆದ ದಿನಗಳು ತಮಗೆ ತಾಳ್ಮೆ ಕಲಿಸಿದೆ ಎಂದಿರುವ ಅವರು, ರಿಷಬ್ ಪಂತ್ ಹಾಗೂ ಕೆಎಲ್ ರಾಹುಲ್ ಅವರನ್ನು ಪ್ರತಿಸ್ಪರ್ಧಿಗಳಾಗಿ ನೋಡಲ್ಲ ಎಂದಿದ್ದಾರೆ.

ದೇಸಿಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಅಭಿಷೇಕ್ ಪೊರೆಲ್ ಮತ್ತೆ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ವೈಯಕ್ತಿಕ ವಿಚಾರದಲ್ಲಿ ಉಂಟಾದ ಕಲಹದಿಂದಾಗಿ ಜೈಲುಗೆ ಹೋಗಿ ಬಂದರು. ಅದಾದ ನಂತರ ಪುನಃ ದೇಸಿಯ ಕ್ರಿಕೆಟ್‌ಗೆ ಮರಳಿರುವ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ.

ಈಗ ಏನಾಯ್ತು?

ಅಭಿಷೇಕ್ ಪೊರೆಲ್‌ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಬದಕಿನಲ್ಲಿ ಅನುಭವಿಸಿದ ಕಹಿ ಘಟನೆಗಳು ಮತ್ತು ಕಹಿ ನೆನಪುಗಳ ಬಗ್ಗೆ ಮಾತನ್ನಾಡಿದ್ದಾರೆ. ಅಂತೆಯೇ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆಯೂ ಅವರು ಮಾತನ್ನಾಡಿದ್ದಾರೆ. ರಾತ್ರಿ ಆದ ಮೇಲೆ ಬೆಳಕು ಬರಲೇಬೇಕು. ಅದು ಒಂದೆಲ್ಲ ಒಂದು ದಿನ ಬರಲೇಬೇಕು. ಸೂರ್ಯ ಖಂಡಿತವಾಗಿಯೂ ಉದಯಿಸುತ್ತಾನೆ ಎಂದು ನಂಬಿದ್ದೆ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇತ್ತು. ನಾನು ಜೈಲಿನಲ್ಲಿದ್ದಾಗ ಎಲ್ಲರೂ ನನ್ನನ್ನು ನೋಡಿಕೊಂಡರು. ನಾನು ತಪ್ಪಾಗಿ ಸಿಕ್ಕಿಬಿದ್ದಿದ್ದೇನೆ ಅನ್ನೋದು ಅವರಿಗೂ ತಿಳಿಯಿತು. ಜೈಲಿನಲ್ಲಿ ಎಲ್ಲರ ಜೊತೆ ನನ್ನನ್ನು ಬಿಟ್ಟಿರಲಿಲ್ಲ. ಪ್ರತ್ಯೇಕವಾಗಿ ನನ್ನನ್ನು ಇಡಲಾಗಿತ್ತು. ನನಗೆ ಜೈಲಿನಲ್ಲಿ ಏನೆಲ್ಲ ಬೇಕಿತ್ತೋ ಅಂದರೆ ಅಗತ್ಯ ವಸ್ತುಗಳು ಎಲ್ಲವನ್ನೂ ನೀಡಿದ್ದರು. ಆದರೆ ಅದು ನನ್ನ ಕಷ್ಟದ ದಿನಗಳು ಆಗಿದ್ದವು. ನಾನು ಆ ದಿನಗಳಿಂದ ತುಂಬಾ ಪಾಠ ಕಲಿತಿದ್ದೇನೆ. ನಾನು ಜೈಲಿಗೆ ಹೋದಾಗ ಅಳಲಿಲ್ಲ. ನಾನು ಕಣ್ಣೀರನ್ನು ಬಯಸಿರಲಿಲ್ಲ. ಯಾಕೆಂದರೆ ನನನಗೆ ಗೊತ್ತಿತ್ತು ನಾನು ಆಕಸ್ಮಿಕವಾಗಿ ಬಂದಿದ್ದೇನೆ ಎಂದು. ನಾನು 36 ದಿನ ಜೈಲಿನಲ್ಲಿ ಕಳೆದೆ ಎಂದಿದ್ದಾರೆ.

ಇದೇ ವೇಳೆ ಕ್ರಿಕೆಟ್ ಜೀವನದ ಬಗ್ಗೆ ಮಾತನ್ನಾಡಿ.. ನನಗೆ ಕ್ರಿಕೆಟ್ ಅಂದರೆ ಪಂಚಪ್ರಾಣ. ನಾನು ಕ್ರಿಕೆಟ್ ಅನ್ನು ನಂಬಿದ್ದೇನೆ. ನಾನು ಅದರಲ್ಲಿ ಹೆಚ್ಚು ಕೆಲಸ ಮಾಡಿದಷ್ಟು ನನ್ನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನಂಬಿದ್ದೇನೆ.

ಅಂದು ನನಗೆ ಪ್ರತಿ ದಿನ ಮತ್ತು ಪ್ರತಿ ನಿಮಿಷ ತಾಳ್ಮೆಯ ಅಗತ್ಯ ಇತ್ತು. ಆ ಅವಧಿಯು ನನ್ನನ್ನು ಅತ್ಯಂತ ಕಠಿಣಗೊಳಿಸಿತು. ನಾನು ಅದೆಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡೆ. ಇವತ್ತು ನಾನು ಆಟದಲ್ಲಿ ತುಂಬಾ ಸುಧಾರಿಸಿದ್ದೇನೆ. ನನ್ನ ಭವಿಷ್ಯ ಕೂಡ ಬದಲಾಗಿದೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಟೀಂ ಇಂಡಿಯಾದ ವಿಕೆಟ್ ಕೀಪರ್‍‌ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರ ಪೊರೆಲ್.. ನಾನು ಯಾವತ್ತೂ ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ನನ್ನ ಪ್ರತಿಸ್ಪರ್ಧಿ ಎಂದು ಭಾವಿಸುವುದಿಲ್ಲ. ಅವರೆಲ್ಲರೂ ನನಗೆ ಅಣ್ಣಂದಿರು. ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಸದಾ ಕಾಲ ಬೆನ್ನುತಟ್ಟುತ್ತಾರೆ. ಪಂತ್, ನನಗೆ ಸ್ಫೂರ್ತಿ. ಪ್ರತಿ ಪಂದ್ಯ ಆರಂಭವಾಗುವ ಮೊದಲು ನೀವು ಬಹಳಷ್ಟು ಸಾಧಿಸಿದ್ದೀರಿ. ಮತ್ತೆ ಹೋಗಿ ಮುಕ್ತವಾಗಿ ಆಡಿ ಎನ್ನುತ್ತ ಪ್ರೋತ್ಸಾಹಿಸುತ್ತಲೇ ಇರುತ್ತಾರೆ ಎಂದರು.

ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ಸೌರವ್ ಗಂಗೂಲಿ ಬಗ್ಗೆ ಮಾತನ್ನಾಡಿ.. ಗಂಗೂಲಿ ಸರ್ ನನಗೆ ದೇಸಿಯ ಟೂರ್ನಿ ಮತ್ತು ರಣಜಿ ಪಂದ್ಯಗಳ ಮೇಲೆ ಹೆಚ್ಚು ಗಮನ ನೀಡುವಂತೆ ಸೂಚಿಸಿದ್ದಾರೆ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ದೇಸಿಯ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ್ರೆ ಅದು ಐಪಿಎಲ್‌ಗೆ ಸಹಾಯ ಆಗಲಿದೆ. ಹಾಗಿದ್ದಾಗ ಮಾತ್ರ ಐಪಿಎಲ್‌ನಲ್ಲಿ ಗೆಲ್ಲಲು ಸಾಧ್ಯ ಎಂದು ಗಂಗೂಲಿ ಸರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಿದೆ. ಅದನ್ನು ಟಾರ್ಗೆಟ್ ಇಟ್ಕೊಂಡು ಕಠಿಣ ಪರಿಶ್ರಮ ಪಡುತ್ತೇನೆ ಎಂದು ಪೊರೇಲ್ ಹೇಳಿದ್ದಾರೆ.