ಬಾಂಗ್ಲಾದೇಶದ 18 ವರ್ಷದ ಯುವ ಕ್ರಿಕೆಟಿಗ ಮೆಹಿದಿ ಹಸನ್ ಹೃದೋಯ್ ಲ್ಯುಕೇಮಿಯಾದಿಂದಾಗಿ ನಿಧನರಾಗಿದ್ದಾರೆ. ಎಡಗೈ ವೇಗದ ಬೌಲರ್ ಆಗಿದ್ದ ಇವರ ಅಕಾಲಿಕ ಮರಣಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತೀವ್ರ ಸಂತಾಪ ಸೂಚಿಸಿದೆ. ಈ ಆಘಾತಕಾರಿ ಸುದ್ದಿಯಿಂದ ಇಡೀ ಕ್ರಿಕೆಟ್ ಜಗತ್ತು ಶೋಕ ಸಾಗರದಲ್ಲಿ ಮುಳುಗಿದೆ.

ಬಾಂಗ್ಲಾದೇಶದ ಯುವ ಕ್ರಿಕೆಟರ್ ಒಬ್ಬರು ತಮ್ಮ 18ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಆಘಾತದ ಸುದ್ದಿ ತಿಳಿದು ಇಡೀ ಕ್ರಿಕೆಟ್ ಜಗತ್ತು ಶೋಕ ಸಾಗರದಲ್ಲಿ ಮುಳುಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ಶೋಕದ ವಿಚಾರವನ್ನು ಕ್ರಿಕೆಟ್ ಜಗತ್ತಿಗೆ ತಿಳಿಸಿದೆ. ದೇಶದ ಪ್ರತಿಭಾವಂತ ಯುವ ಕ್ರಿಕೆಟಿಗ ಮೆಹಿದಿ ಹಸನ್ ಹೃದೋಯ್ ತಮ್ಮ 18ನೇ ವರ್ಷಕ್ಕೆ ಕೊನೆಯುಸಿರು ಎಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದೆ. ವಿಚಾರ ತಿಳಿಯುತ್ತದ್ದಂತೆಯೇ ಇಡೀ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೇಳಿದ್ದೇನು?

ಹಸನ್ ಅವರು 18 ವರ್ಷದೊಳಗಿನವರ ಬಾಂಗ್ಲಾದೇಶ ತಂಡವನ್ನು ಪ್ರತಿನಿಧಿಸಿದ್ದರು. ಅವರು ವೇಗದ ಬೌಲಿಂಗ್‌ಗೆ ಹೆಸರುವಾಸಿ ಆಗಿದ್ದರು. ಅವರ ನಿಧನದಿಂದ ತುಂಬಾ ದುಃಖದಲ್ಲಿದ್ದೇವೆ. ಯುವ ಕ್ರಿಕೆಟಿಗ ಮೆಹಿದಿ ಹಸನ್ ಹೃದಯೋಯ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಲ್ಯುಕೇಮಿಯಾದಿಂದ ಬಳಲುತ್ತಿದ್ದ ಅವರು ಇಂದು ಢಾಕಾದಲ್ಲಿ ನಿಧನರಾದರು ಎಂದು ಸೋಶಿಯಲ್ ಮಿಡಿಯಾದಲ್ಲಿ ಬಾಂಗ್ಲಾ ಕ್ರಿಕೆಟ್ ಹಂಚಿಕೊಂಡಿದೆ.

ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿದ್ದರು ಹಸನ್, ಎಡಗೈ ವೇಗದ ಬೌಲಿಂಗ್‌ನಲ್ಲಿ ಹೆಸರು ಮಾಡಿದ್ದರು. ಹಸನ್ ಅವರನ್ನು ಕಳೆದುಕೊಂಡು ಕಷ್ಟದಲ್ಲಿರುವ ಅವರ ಕುಟುಂಬಕ್ಕೆ ಬಿಸಿಪಿ ಸಂತಾಪ ವ್ಯಕ್ತಪಡಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ದುಃಖದಲ್ಲಿ ಹಸನ್ ಕುಟುಂಬದ ಜೊತೆ ನಿಲ್ಲುವುದಾಗಿ ಭರವಸೆ ನೀಡಿದೆ.

ನಿನ್ನೆ ಹಸನ್ ಅವರನ್ನ ಚಿಕಿತ್ಸೆಗಾಗ ಢಾಕಾಗೆ ಕೊಂಡೊಯ್ಯುವಾಗ ಆಂಬ್ಯುಲೆನ್ಸ್‌ನಲ್ಲಿ ನಿಧನರಾದರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅವರಿಗೆ ಚಿಕಿತ್ಸೆ ಕೊಡಿಸಲು ಸತತವಾಗಿ ಪ್ರಯತ್ನಿಸಿತ್ತು. ಬಾಂಗ್ಲಾ ಸರ್ಕಾರದಿಂದಲೂ ಅವರಿಗೆ ಸಹಾಯ ಸಿಕ್ಕಿತ್ತು ಎಂದು ಬಾಂಗ್ಲಾದೇಶದ ಯುವಜನ ಮತ್ತು ಕ್ರೀಡಾ ರಾಜ್ಯ ಸಚಿವ ಅಮೀನುಲ್ ಹಕ್ ತಿಳಿಸಿದ್ದಾರೆ. ಒಟ್ಟಾರೆ ಯುವ ಕ್ರಿಕೆಟಿಗನ ಕಳೆದುಕೊಂಡು ಬಾಂಗ್ಲಾ ಕ್ರಿಕೆಟ್ ಶೋಕ ಸಾಗರದಲ್ಲಿ ಮುಳುಗಿದಿದೆ.

ಇತ್ತೀಚೆಗೆ ದೆಹಲಿಯಲ್ಲಿ ಅಫ್ಘಾನ್ ಕ್ರಿಕೆಟಿಗರೊಬ್ಬರು ನಿಧನರಾಗಿದ್ದರು. ಶಾಪೂರ್ ಝದ್ರಾನ್ ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್' (HLH) ಎಂಬ ಅತ್ಯಂತ ಗಂಭೀರ ರೋಗದಿಂದ ಬಳಲುತ್ತಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕರೆದುಕೊಂಡು ಬರಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ಈ ಆಘಾತದ ಸುದ್ದಿ ಬೆನ್ನಲ್ಲೇ ಮತ್ತೊಬ್ಬ ವಿದೇಶಿ ಕ್ರಿಕೆಟಿಗನೊಬ್ಬ ಪ್ರಾಣ ಕಳೆದುಕೊಂಡಿರೋದು ನೋವಿನ ಸಂಗತಿಯಾಗಿದೆ. ಹಸನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕೇವಲ ಬಾಂಗ್ಲಾದೇಶ ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.

Scroll to load tweet…