ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿ ಪಂದ್ಯದ ಸೂಪರ್ ಓವರ್ ಸೋಲಿನ ನಂತರ, ಶ್ರೀಲಂಕಾ ಆಟಗಾರರು ವೈಭವ್ ಸೂರ್ಯವಂಶಿಯನ್ನು ಸ್ಲೆಡ್ಜ್ ಮಾಡಿದರು. 'ಇದು ನಿನ್ನ ಐಪಿಎಲ್ ಅಲ್ಲ' ಎಂಬ ಗೇಲಿಗೆ ಕೋಪಗೊಂಡ ವೈಭವ್, ಲಂಕಾ ಆಟಗಾರನನ್ನು ತಳ್ಳಿದ್ದರಿಂದ ಮೈದಾನದಲ್ಲಿ ಗಲಾಟೆ ನಡೆಯಿತು.

Vaibhav Sooryavanshi fight: ತ್ರಿಕೋನ ಸರಣಿಯ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯದ ಬಳಿಕ, ಟೀಂ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ನಡೆದ ಗಲಾಟೆಯ ಬಗ್ಗೆ ಹೆಚ್ಚಿನ ವಿವರಗಳು ಹೊರಬಿದ್ದಿವೆ. ಇಲ್ಲಿನ ರಂಗಿರಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಸೂಪರ್ ಓವರ್ ಮುಗಿದ ತಕ್ಷಣ ಮೈದಾನದಲ್ಲಿ ತಳ್ಳಾಟ, ನೂಕಾಟ ನಡೆದಿತ್ತು. ಸೂಪರ್ ಓವರ್‌ನಲ್ಲಿ ಗೆದ್ದ ನಂತರ ಲಂಕಾ ಆಟಗಾರರು ಅತಿಯಾಗಿ ಸ್ಲೆಡ್ಜಿಂಗ್ ಮಾಡಿದ್ದೇ ಶಾಂತ ಸ್ವಭಾವದ ವೈಭವ್ ಕೋಪಗೊಳ್ಳಲು ಕಾರಣ ಎಂದು ಇದೀಗ ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ನಿಗದಿತ ಓವರ್‌ಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಕೊನೆಯ ಎಸೆತದಲ್ಲಿ ಗೆಲ್ಲಲು ಎರಡು ರನ್ ಬೇಕಿದ್ದಾಗ, ಶ್ರೀಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯ್ತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 18 ರನ್ ಗಳಿಸಿತು. 19 ರನ್‌ಗಳ ಗುರಿ ಬೆನ್ನತ್ತಿದ ಭಾರತದ ಪರವಾಗಿ ಸೂರ್ಯಾಂಶ್ ಶೆಡ್ಗೆ ಮೊದಲ ಮೂರು ಎಸೆತಗಳನ್ನು ಎದುರಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು 14 ರನ್ ಬೇಕಿದ್ದಾಗ ವೈಭವ್ ಸೂರ್ಯವಂಶಿ ಸ್ಟ್ರೈಕ್‌ಗೆ ಬಂದರು.

ಲಂಕಾ ವೇಗಿ ಕುಗದಾಸ್ ಮತುಲನ್ ಅವರ ನಾಲ್ಕನೇ ಎಸೆತ ಯಾರ್ಕರ್ ಆಗಿತ್ತು, ವೈಭವ್‌ಗೆ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು. ಐದನೇ ಎಸೆತದಲ್ಲಿ ವೈಭವ್ ಬೌಂಡರಿ ಬಾರಿಸಿದರು. ಇದರಿಂದ ಕೊನೆಯ ಎಸೆತದಲ್ಲಿ ಗೆಲುವಿಗೆ ಎಂಟು ರನ್ ಬೇಕಿತ್ತು. ಮತುಲನ್ ಎಸೆದ ವೈಡ್ ಯಾರ್ಕರ್ ಎಸೆತದಲ್ಲಿ ವೈಭವ್‌ಗೆ ರನ್ ಗಳಿಸಲು ಆಗಲಿಲ್ಲ. ಇದರ ಬೆನ್ನಲ್ಲೇ ಶ್ರೀಲಂಕಾ ತಂಡದ ಆಟಗಾರರು ಭಾರತೀಯ ಆಟಗಾರರ ಬಳಿ ಬಂದು ವಿಜಯೋತ್ಸವ ಆಚರಿಸಿದರು.

ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡಿದ್ದೇಕೆ?

ಈ ವೇಳೆ, ಲಂಕಾ ಆಟಗಾರರು ವೈಭವ್ ಮತ್ತು ಶೆಡ್ಗೆ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಸ್ಲೆಡ್ಜ್ ಮಾಡಲು ಶುರುಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಪಂದ್ಯ ಮುಗಿಸಿ ವಾಪಸ್ ಹೋಗುತ್ತಿದ್ದ ಭಾರತೀಯ ಬ್ಯಾಟರ್‌ಗಳನ್ನು ಲಂಕಾ ಆಟಗಾರರು ಹಿಂಬಾಲಿಸಿ ಕೆಣಕುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತೆ.

Scroll to load tweet…

ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ, ರಾಜಸ್ಥಾನ ರಾಯಲ್ಸ್ ಆಟಗಾರನಾದ ವೈಭವ್‌ಗೆ ಲಂಕಾ ಆಟಗಾರರು 'ಇದು ನಿನ್ನ ಐಪಿಎಲ್ ಅಲ್ಲ' ಎಂದು ಗೇಲಿ ಮಾಡಿದ್ದೇ ಜಗಳಕ್ಕೆ ಕಾರಣವಾಯ್ತು. ಕಳೆದ ವರ್ಷದ ಅಂಡರ್-19 ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಆಟಗಾರರು ಕೂಡ ವೈಭವ್ ವಿರುದ್ಧ ಇದೇ ಮಾತುಗಳನ್ನು ಬಳಸಿದ್ದರು. ಮೊದಲಿಗೆ ಏನೂ ಪ್ರತಿಕ್ರಿಯಿಸದೆ ಮುಂದೆ ನಡೆದ ವೈಭವ್, ಲಂಕಾ ಆಟಗಾರರ ಸ್ಲೆಡ್ಜಿಂಗ್‌ ಮಿತಿಮೀರಿದಾಗ ನಿಯಂತ್ರಣ ಕಳೆದುಕೊಂಡು ಶ್ರೀಲಂಕಾದ ಆಟಗಾರನೊಬ್ಬನನ್ನು ತಳ್ಳಿದ್ದಾರೆ. ತಕ್ಷಣವೇ ಇತರ ಆಟಗಾರರು ಮತ್ತು ಅಂಪೈರ್‌ಗಳು ಮಧ್ಯಪ್ರವೇಶಿಸಿ ವೈಭವ್ ಅವರನ್ನು ಅಲ್ಲಿಂದ ಸಮಾಧಾನಪಡಿಸಿ ಕರೆದೊಯ್ದರು.

ಸೂಪರ್‌ ಓವರ್‌ ಸೋತ ಭಾರತ ‘ಎ’

ಡಾಂಬುಲಾ: ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡ ಸತತ 2ನೇ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪರಾಭವಗೊಂಡಿದ್ದ ತಿಲಕ್‌ ವರ್ಮಾ ನಾಯಕತ್ವದ ಭಾರತ ‘ಎ’, ಸೋಮವಾರ ಆತಿಥೇಯ ಶ್ರೀಲಂಕಾ ವಿರುದ್ಧ ಸೂಪರ್‌ ಓವರ್‌ನಲ್ಲಿ ಸೋಲು ಕಂಡಿತು. ಇದರೊಂದಿಗೆ ತಂಡದ ಫೈನಲ್‌ ಹಾದಿ ಕಠಿಣಗೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಭಭಾರತ 49.2 ಓವರ್‌ಗಳಲ್ಲಿ 265 ರನ್‌ಗೆ ಆಲೌಟಾಯಿತು. ವೈಭವ್‌(21) ಮತ್ತೆ ವಿಫಲರಾದರು. 143ಕ್ಕೆ 7 ವಿಕೆಟ್‌ ಕಳೆದುಕೊಂಡ ಬಳಿಕ ಸೂರ್ಯಾನ್ಶ್‌ ಶೆಡ್ಗೆ(72), ವಿಪ್ರಾಜ್‌ ನಿಗಂ(51) ತಂಡಕ್ಕೆ ಆಸರೆಯಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ 50 ಓವರಲ್ಲಿ 9 ವಿಕೆಟ್‌ ನಷ್ಟದಲ್ಲಿ 265 ರನ್‌ ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ಕೊನೆ ಓವರ್‌ನಲ್ಲಿ 5 ರನ್‌ ಬೇಕಿದ್ದಾಗ ಅರ್ಶದ್‌ ಖಾನ್‌ ಕೇವಲ 4 ರನ್‌ ನೀಡಿದರು.

ಸೂಪರ್ ಓವರ್‌:

ತಿಲಕ್‌ ವರ್ಮಾ ಒತ್ತಾಯದ ಬಳಿಕ ಅಂಪೈರ್‌ಗಳು ಸೂಪರ್‌ ಓವರ್‌ ಆಡಿಸಲು ನಿರ್ಧರಿಸಿದರು. ಮೊದಲು ಬ್ಯಾಟ್‌ ಮಾಡಿದ ಲಂಕಾ, ಅರ್ಶದ್‌ ಓವರ್‌ನಲ್ಲಿ 16 ರನ್‌ ಗಳಿಸಿತು. 17 ರನ್‌ ಗುರಿ ಪಡೆದ ಭಾರತ 9 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮೊದಲ 3 ಎಸೆತವನ್ನು ಸೂರ್ಯಾನ್ಶ್‌ ಎದುರಿಸಿ 3 ರನ್‌ ಗಳಿಸಿದರೆ, ಕೊನೆ 3 ಎಸೆತದಲ್ಲಿ ವೈಭವ್‌ 6 ರನ್ ಗಳಿಸಿದರು.