MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ದುರ್ಬಲ ಜಿಂಬಾಬ್ವೆ ಎದುರು ಫೇಲ್; ಟೀಂ ಇಂಡಿಯಾದ ಈ ಐವರಿಗೆ ತಂಡದಿಂದ ಗೇಟ್‌ಪಾಸ್? ಮುಗಿಯಿತಾ ಇವರ ಕ್ರಿಕೆಟ್ ಬದುಕು

ದುರ್ಬಲ ಜಿಂಬಾಬ್ವೆ ಎದುರು ಫೇಲ್; ಟೀಂ ಇಂಡಿಯಾದ ಈ ಐವರಿಗೆ ತಂಡದಿಂದ ಗೇಟ್‌ಪಾಸ್? ಮುಗಿಯಿತಾ ಇವರ ಕ್ರಿಕೆಟ್ ಬದುಕು

ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಐದು ಆಟಗಾರರು ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಯಾರವರು? ನೋಡೋಣ ಬನ್ನಿ.

2 Min read
Author : Naveen Kodase
Published : Jul 27 2026, 01:18 PM IST
Share this Photo Gallery
  • FB
  • TW
  • Linkdin
  • Whatsapp
16
ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಯಲ್ಲಿ ಐವರು ಕ್ರಿಕೆಟಿಗರು
Image Credit : Instagram

ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಯಲ್ಲಿ ಐವರು ಕ್ರಿಕೆಟಿಗರು

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಟಿ20 ಸರಣಿ ಸೋತು ಮುಖಭಂಗಕ್ಕೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಇದೀಗ ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿದೆ. ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಯಶ್ ಠಾಕೂರ್ ಹಾಗೂ ಮಯಾಂಕ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ಅದ್ಭುತ ಪ್ರದರ್ಶನ ತೋರಿದ್ದಾರೆ. ಅದೇ ರೀತಿ ಕೆಲವು ಆಟಗಾರರು ನೀರಸ ವೈಫಲ್ಯ ಅನುಭವಿಸಿದ್ದಾರೆ. ಇದೀಗ ಆ ಐದು ಆಟಗಾರರು ಟೀಂ ಇಂಡಿಯಾದಿಂದಲೇ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ರಿಂಕು ಸಿಂಗ್:
Image Credit : Getty

1. ರಿಂಕು ಸಿಂಗ್:

ರಿಂಕು ಸಿಂಗ್‌ಗೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಜಿಂಬಾಬ್ವೆ ಎದುರಿನ ಕಮ್‌ಬ್ಯಾಕ್ ಸರಣಿಯಲ್ಲಿ ರಿಂಕು ಕೇವಲ 37 ರನ್ ಗಳಿಸಲಷ್ಟೇ ಶಕ್ತರಾದರು. ಈ ಪ್ರದರ್ಶನದ ಬಳಿಕ ರಿಂಕು ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವುದು ಅನುಮಾನ ಎನಿಸಿದೆ.

Related Articles

Related image1
"ಅವನನ್ನ ಏನೂ ಇಲ್ಲದವನನ್ನಾಗಿ ಮಾಡಿಬಿಟ್ರು!": ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ನಾಯಕ ಶ್ರೀಕಾಂತ್ ಗರಂ!
Related image2
ಜಿಂಬಾಬ್ವೆ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಮತ್ತೆ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ, ನಿಟ್ಟುಸಿರು ಬಿಟ್ಟ ಅಯ್ಯರ್
36
2. ಶಿವಂ ದುಬೆ:
Image Credit : Getty

2. ಶಿವಂ ದುಬೆ:

ಶಿವಂ ದುಬೆ ಅವರ ಫಾರ್ಮ್‌ ದಿನದಿಂದ ದಿನಕ್ಕೆ ಇಳಿಕೆಯತ್ತ ಮುಖ ಮಾಡಿದೆ. ದುಬೆ ಇಂಗ್ಲೆಂಡ್ ಎದುರು ವೈಫಲ್ಯ ಅನುಭವಿಸಿದ್ದರು. ಇದೀಗ ಜಿಂಬಾಬ್ವೆ ಎದುರು ಆಡಿದ ಎರಡು ಪಂದ್ಯಗಳಿಂದ ಕೇವಲ 6 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ದುಬೆಯನ್ನು ಬದಿಗೆ ಸರಿಸಿ ಮತ್ತೋರ್ವ ವೇಗದ ಬೌಲಿಂಗ್ ಆಲ್ರೌಂಡರ್‌ಗೆ ಮುಂಬರುವ ದಿನಗಳಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ

46
3. ಸೂರ್ಯಾನ್ಶ್‌ ಶೆಡ್ಗೆ:
Image Credit : suryansh shedge instagram

3. ಸೂರ್ಯಾನ್ಶ್‌ ಶೆಡ್ಗೆ:

ಇತ್ತೀಚಿಗಿನ ದಿನಗಳಲ್ಲಿ ಸೂರ್ಯಾನ್ಶ್‌ ಶೆಡ್ಗೆಗೆ ಸತತವಾಗಿ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುತ್ತಾ ಬಂದಿದೆ. ಆದರೆ ಸೂರ್ಯಾನ್ಶ್‌ ಇದುವರೆಗೂ ಗಮನಾರ್ಹ ಪ್ರದರ್ಶನ ತೋರಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಜಿಂಬಾಬ್ವೆ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಶೆಡ್ಗೆಗೆ ಅವಕಾಶ ಸಿಕ್ಕಿತು. ಆದರೆ ಶೆಡ್ಗೆಗೆ ಬ್ಯಾಟ್ ಮಾಡಲು ಅವಕಾಶ ಸಿಗಲಿಲ್ಲ. ಇನ್ನು ಬೌಲಿಂಗ್‌ನಲ್ಲಿ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಫಿಟ್ ಆದ್ರೆ ಶೆಡ್ಗೆಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗೋದು ಡೌಟ್.

56
4. ರವಿ ಬಿಷ್ಣೋಯ್:
Image Credit : bcci

4. ರವಿ ಬಿಷ್ಣೋಯ್:

ಜಿಂಬಾಬ್ವೆ ಎದುರಿನ ಸರಣಿಗೆ ಈ ಮೊದಲು ರವಿ ಬಿಷ್ಣೋಯ್ ಆಯ್ಕೆಯಾಗಿರಲಿಲ್ಲ. ಆದರೆ ವರುಣ್ ಚಕ್ರವರ್ತಿ ಗಾಯಗೊಂಡಿದ್ದರಿಂದ ರವಿಗೆ ಅವಕಾಶ ಸಿಕ್ಕಿತ್ತು. ರವಿ ಬಿಷ್ಣೋಯ್ ಜಿಂಬಾಬ್ವೆ ಎದುರು ಮೂರು ಪಂದ್ಯಗಳನ್ನಾಡಿ ಕೇವಲ 3 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ರವಿ ಬಿಷ್ಣೋಯ್ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಕನಿಷ್ಠ 5-6 ವಿಕೆಟ್ ಅಗತ್ಯವಿತ್ತು. ಹೀಗಾಗಿ ರವಿ ಬಿಷ್ಣೋಯ್ ಕೂಡಾ ಭಾರತ ಟಿ20 ತಂಡದಿಂದ ಹೊರಬೀಳುವ ಆತಂಕದಲ್ಲಿದ್ದಾರೆ.

66
5. ಅಶೋಕ್ ಶರ್ಮಾ:
Image Credit : Social Media

5. ಅಶೋಕ್ ಶರ್ಮಾ:

ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಹಾಗೂ ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿ ಯುವ ವೇಗಿ ಅಶೋಕ್ ಶರ್ಮಾಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಐಪಿಎಲ್‌ನಲ್ಲಿ ಮಿಂಚಿದ್ದ ಅಶೋಕ್ ಶರ್ಮಾ, ಜಿಂಬಾಬ್ವೆ ಎದುರು ಆಡಿದ ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಸದ್ಯ ಮಯಾಂಕ್ ಯಾದವ್ ಹಾಗೂ ಯಶ್ ಠಾಕೂರ್ ಮಿಂಚಿದ್ದರಿಂದ ಅಶೋಕ್ ಶರ್ಮಾ ಭಾರತ ತಂಡದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಟೀಮ್ ಇಂಡಿಯಾ
ಬಿಸಿಸಿಐ

Latest Videos
Recommended Stories
Recommended image1
ಸರಣಿ ಗೆಲುವಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿಗೆ ಮಹತ್ವದ ಸಂದೇಶ ನೀಡಿದ ಕೋಚ್ ವಿವಿಎಸ್ ಲಕ್ಷ್ಮಣ್
Recommended image2
'ಸಂಜುಗೆ ಒಂದು ನ್ಯಾಯ, ಅಭಿಷೇಕ್‌ಗೆ ಮತ್ತೊಂದು?' ಟೀಮ್ ಇಂಡಿಯಾ ಆಯ್ಕೆ ವಿರುದ್ಧ ಹನುಮ ವಿಹಾರಿ ಆಕ್ರೋಶ
Recommended image3
Virushka: ಮುಂಬೈನಲ್ಲಿ ದುಬಾರಿ ಮನೆ ಖರೀದಿ ಮಾಡಿದ ಅನುಷ್ಕಾ – ವಿರಾಟ್ , ಬೆಲೆ ಎಷ್ಟು ಗೊತ್ತಾ?
Related Stories
Recommended image1
"ಅವನನ್ನ ಏನೂ ಇಲ್ಲದವನನ್ನಾಗಿ ಮಾಡಿಬಿಟ್ರು!": ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ನಾಯಕ ಶ್ರೀಕಾಂತ್ ಗರಂ!
Recommended image2
ಜಿಂಬಾಬ್ವೆ ಟಿ20 ಸರಣಿ ಗೆಲುವಿನ ಬೆನ್ನಲ್ಲೇ ಮತ್ತೆ ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ, ನಿಟ್ಟುಸಿರು ಬಿಟ್ಟ ಅಯ್ಯರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved