MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ

ಸೂರ್ಯಕುಮಾರ್ ವಾಪಸ್, ರಜತ್ ಪಾಟೀದಾರ್ ಉಪನಾಯಕ; ಪರ್ಯಾಯ ಟಿ20 ತಂಡ ಪ್ರಕಟಿಸಿದ ಚೋಪ್ರಾ

ನಾಯಕನಾಗಿ ಸೂರ್ಯಕುಮಾರ್ ಯಾದವ್ ಮರಳಿದರೆ, ಉಪನಾಯಕನಾಗಿ ಆರ್‌ಸಿಬಿಯ ಚಾಂಪಿಯನ್ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ. ಸತತ ಸೋಲಿನಿಂದ ಪ್ರಕಟಿಸಿರುವ ಪರ್ಯಾಯ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದವರು ಯಾರು?

2 Min read
Author : Chethan Kumar
Published : Jul 11 2026, 01:34 PM IST
Share this Photo Gallery
  • FB
  • TW
  • Linkdin
  • Whatsapp
16
ಪರ್ಯಾಯ ಟಿ20 ತಂಡ ಪ್ರಕಟ
Image Credit : stockPhoto

ಪರ್ಯಾಯ ಟಿ20 ತಂಡ ಪ್ರಕಟ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತೀವ್ರ ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾ ಪ್ಲೇಯಿಂಗ್ 11, ಟೀಂ ಇಂಡಿಯಾ ಆಯ್ಕೆ ಕುರಿತು ಹಲವು ಸವಾಲುಗಳು ಎದ್ದಿದೆ. 2026ರ ಟಿ20 ಚಾಂಪಿಯನ್ ತಂಡವೇ ಹೆಚ್ಚು ಸೂಕ್ತ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಅಕಾಶ್ ಚೋಪ್ರಾ ಇದೀಗ ಪರ್ಯಾಯ ಟೀಂ ಇಂಡಿಯಾ ಟಿ20 ತಂಡ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಆರ್‌ಸಿಬಿ ಚಾಂಪಿಯನ್ ನಾಯಕ ರಜತ್ ಪಾಟೀದಾರ್ ಸ್ಥಾನ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೂರ್ಯಕುಮಾರ್ ನಾಯಕನಾಗಿ ವಾಪಸ್
Image Credit : Getty

ಸೂರ್ಯಕುಮಾರ್ ನಾಯಕನಾಗಿ ವಾಪಸ್

ಅಕಾಶ್ ಚೋಪ್ರಾ ಪ್ರಕಟಿಸಿದ ತಂಡದಲ್ಲಿ ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ. 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಿಂದ ಕೈಬಿಡಲಾಗಿತ್ತು. ಆದರೆ ಆಕಾಶ್ ಚೋಪ್ಲಾ ಭಾರತ ಮತ್ತೆ ಪುಟಿದೇಳಲು ಸೂರ್ಯಕುಮಾರ್ ಅವಶ್ಯಕತೆ ಎತ್ತಿ ತೋರಿಸಿದ್ದಾರೆ. ಹೀಗಾಗಿ ಪರ್ಯಾ ಟಿ20 ತಂಡದಲ್ಲಿ ಮತ್ತೆ ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ.

Related Articles

Related image1
14, 13, 15 ವೈಭವ್‌ ಸೂರ್ಯವಂಶಿ ಮೊದಲ 3 ಪಂದ್ಯದ ಸ್ಕೋರ್‌ ಇದಾದ್ರೆ, ಕೊಹ್ಲಿ-ರೋಹಿತ್‌ ಶರ್ಮ ಮೊದಲ 3 ಪಂದ್ಯಗಳ ರನ್ ಎಷ್ಟು?
Related image2
ಇಂಗ್ಲೆಂಡ್‌ ಟೂರ್‌ನಲ್ಲಿ ದಯನೀಯ ವೈಫಲ್ಯ ಕಂಡ ವೈಭವ್‌ ಸೂರ್ಯವಂಶಿಯನ್ನು ನೇಪಾಳಕ್ಕೆ ಕಳಿಸಲು ಬಿಸಿಸಿಐ ಸಿದ್ದತೆ!
36
ರಜತ್ ಪಾಟೀದಾರ್ ಉಪನಾಯಕ
Image Credit : X/RCBTweets

ರಜತ್ ಪಾಟೀದಾರ್ ಉಪನಾಯಕ

ಸತತ 2ನೇ ಬಾರಿಗೆ ರಜತ್ ಪಾಟಿದಾರ್ ಆರ್‌ಸಿಬಿಗೆ ಟ್ರೋಫಿ ಗೆಲ್ಲಿಸಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ರಜತ್ ಪಾಟೀದರ್ ಟೀಂ ಇಂಡಿಯಾಗೆ ಆಯ್ಕೆಯಾಗಬೇಕು, ಅವಕಾಶ ನೀಡಬೇಕು ಅನ್ನೋ ಮಾತುಗಳು ಕೇಳಿಬಂದಿತ್ತು.ಇದೀಗ ಆಕಾಶ್ ಚೋಪ್ರಾ ಪ್ರಕಟಿಸಿದ ತಂಡದಲ್ಲಿ ರಜತ್ ಪಾಟೀದಾರ್‌ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ.

46
ಆರ್‌ಸಿಬಿ ತಂಡದ ಮೂವರಿಗೆ ಸ್ಥಾನ
Image Credit : RCB

ಆರ್‌ಸಿಬಿ ತಂಡದ ಮೂವರಿಗೆ ಸ್ಥಾನ

ವಿಶೇಷ ಅಂದರೆ ಅಕಾಶ್ ಚೋಪ್ರಾ ಪ್ರಕಟಿಸಿದ ಟೀಂ ಇಂಡಿಯಾ ಟಿ20 ತಂಡದಲ್ಲಿ ಚಾಂಪಿಯನ್ ಆರ್‌ಸಿಬಿ ತಂಡದ ಮೂವರು ಸ್ಥಾನ ಪಡೆದಿದ್ದಾರೆ. ನಾಯಕ ರಜತ್ ಪಾಟೀದಾರ್‌ಗೆ ಉಪನಾಯಕನ ಸ್ಥಾನ ನೀಡಲಾಗಿದ್ದರೆ, ಆಲ್‌ರೌಂಡರ್ ಕೋಟಾದಲ್ಲಿ ಕ್ರುನಾಲ್ ಪಾಂಡ್ಯಗೆ ಅವಕಾಶ ನೀಡಲಾಗಿದೆ. ಇನ್ನು ಪ್ರಮುಖ ವೇಗಿಯಾಗಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ.

56
ಆಕಾಶ್ ಚೋಪ್ರಾ ಪ್ರಕಟಿಸಿದ ಪರ್ಯಾಯ ಟಿ20 ತಂಡ
Image Credit : X/BCCI

ಆಕಾಶ್ ಚೋಪ್ರಾ ಪ್ರಕಟಿಸಿದ ಪರ್ಯಾಯ ಟಿ20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಜತ್ ಪಾಟೀದಾರ್ (ಉಪ ನಾಯಕ), ಧ್ರುವ್ ಜುರೆಲ್, ನಮರ್ ಧಿರ್, ಕ್ರುನಾಲ್ ಪಾಂಡ್ಯ, ಅಂಕುಲ್ ರಾಯ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಾಲ್

66
ಬದಲಾವಣೆ ಸೂಚಿಸಿದ ಅಕಾಶ್ ಚೋಪ್ರಾ
Image Credit : social media

ಬದಲಾವಣೆ ಸೂಚಿಸಿದ ಅಕಾಶ್ ಚೋಪ್ರಾ

ಅಕಾಶ್ ಚೋಪ್ರಾ ಸದ್ಯ ಟೀಂ ಇಂಡಿಯಾ ಟಿ20 ತಂಡದಲ್ಲಿ ಆಗಬೇಕಿರುವ ಬದಲಾವಣೆ ಸೂಚಿಸಿ ತಂಡ ಪ್ರಕಟಿಸಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ದ ಭಾರತ ಕೊನೆಯ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಪ್ಲೇಯಿಂಗ್ 11 ಬದಲಾವಣೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಸಂಜು ಸ್ಯಾಮ್ಸನ್ ಮರಳಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸೂರ್ಯಕುಮಾರ್ ಯಾದವ್
ರಜತ್ ಪಾಟಿದಾರ್
ಟೀಮ್ ಇಂಡಿಯಾ
ಕ್ರಿಕೆಟ್

Latest Videos
Recommended Stories
Recommended image1
ಸಂಜು ಸ್ಯಾಮ್ಸನ್ ಇನ್, ತಿಲಕ್ ವರ್ಮಾ ಔಟ್! ಇಂಗ್ಲೆಂಡ್ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಗಂಭೀರ್ ಮೇಲೆ ಎಲ್ಲರ ಕಣ್ಣು
Recommended image2
ಸೂರ್ಯಕುಮಾರ್, ಸ್ಯಾಮ್ಸನ್ ಕೈಬಿಟ್ಟವರಿಗೆ ಗಂಭೀರ್ ತೆಗೆಯಲು ಆಗಲಿಲ್ಲವೇ, Ex ಆಯ್ಕೆ ಸಮಿತಿ ಮುಖ್ಯಸ್ಥ ಗರಂ
Recommended image3
ಇಂದು ಅಬ್ಬರಿಸಲು ರೆಡಿಯಾದ ವೈಭವ್ ಸೂರ್ಯವಂಶಿ; ಇವತ್ತಿನ ಮ್ಯಾಚ್ ರಾತ್ರಿ 10 ಗಂಟೆಗಲ್ಲ, ಈ ಸಮಯಕ್ಕೆ ಪಂದ್ಯ ಆರಂಭವಾಗುತ್ತೆ!
Related Stories
Recommended image1
14, 13, 15 ವೈಭವ್‌ ಸೂರ್ಯವಂಶಿ ಮೊದಲ 3 ಪಂದ್ಯದ ಸ್ಕೋರ್‌ ಇದಾದ್ರೆ, ಕೊಹ್ಲಿ-ರೋಹಿತ್‌ ಶರ್ಮ ಮೊದಲ 3 ಪಂದ್ಯಗಳ ರನ್ ಎಷ್ಟು?
Recommended image2
ಇಂಗ್ಲೆಂಡ್‌ ಟೂರ್‌ನಲ್ಲಿ ದಯನೀಯ ವೈಫಲ್ಯ ಕಂಡ ವೈಭವ್‌ ಸೂರ್ಯವಂಶಿಯನ್ನು ನೇಪಾಳಕ್ಕೆ ಕಳಿಸಲು ಬಿಸಿಸಿಐ ಸಿದ್ದತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved