ಗೌತಮ್ ಗಂಭೀರ್ ಅವರ ಅಪ್ಪಟ ಶಿಷ್ಯ ವೆಸ್ಟ್ ವಿಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಒಂದೇ ಬಾಲ್ನಲ್ಲಿ ಬರೋಬ್ಬರಿ 12 ರನ್ ಬಿಟ್ಟುಕೊಟ್ಟಿದ್ದಾರೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
ಭಾರತ ಮತ್ತು ವೆಸ್ಟ್ ವಿಂಡೀಸ್ (India vs West Indies) ನಡುವಿನ 4ನೇ ಟಿ-20ಯಲ್ಲಿ ಟೀಂ ಇಂಡಿಯಾ ವೇಗಿ ಮಯಾಂಕ್ ಯಾದವ್ (Mayank Yadav) ತುಂಬಾನೇ ದುಬಾರಿ ಆದರು. ಮೈದಾನದಲ್ಲಿ ಮಾಡಿದ ಅವರ ಒಂದೊಂದು ಮೆಸ್ಟೇಕ್ಸ್ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ವಿಂಡೀಸ್ ಮೂರು ವಿಕೆಟ್ ಕಳೆದುಕೊಂಡು 247 ರನ್ಗಳಿಸಿತು. ಈ ಬೃಹತ್ ಮೊತ್ತ ದಾಖಲಾಗಲು ಕಾರಣ ಟೀಂ ಇಂಡಿಯಾ ಬೌಲರ್ಗಳು ಮಾಡಿದ ಮಿಸ್ಟೇಕ್ಸ್. ಅದರಲ್ಲೂ ಕೋಚ್ ಗೌತಮ್ ಗಂಭೀರ್ ಅವರ ಆಪ್ತ ಶಿಷ್ಯ ಮಯಾಂಕ್ ಯಾದವ್ ಹಾಗೂ ಅನುಭವಿ ಅರ್ಷದೀಪ್ ಸಿಗ್ ಅವರ ಬೇಜವಾಬ್ದಾರಿ ಬೌಲಿಂಗ್ ಆಗಿದೆ.
ಕಳಪೆ ಬೌಲಿಂಗ್
ಮೊದಲ ಓವರ್ನಲ್ಲಿ ಮಯಾಂಕ್ ಕೇವಲ ಮೂರು ರನ್ ನೀಡಿ ಗ್ರೇಟ್ ಎನಿಸಿಕೊಂಡಿದ್ದರು. ನಂತರ ತಮ್ಮ ಕೋಟಾದ 2ನೇ ಓವರ್ ಎಸೆಯಲು ಬಂದಾಗ.. ಸತತ ಐದು ವೈಡ್ ಬಾಲ್ ಎಸೆದರು. ನಂತರ ನೋಬಾಲ್ ಹಾಕಿದರು. ಸಿಕ್ಕ ಫ್ರಿ-ಹಿಟ್ನಲ್ಲಿ ಶೈ ಹೋಪ್ ಅವರು ಸಿಕ್ಸರ್ ಬಾರಿಸಿದರು. ಆ ಮೂಲಕ ಒಂದೇ ಬಾಲ್ನಲ್ಲಿ 12 ರನ್ಗಳನ್ನ (ಐದು ವೈಡ, ನೋ ಬಾಲ್, ಸಿಕ್ಸರ್) ನೀಡಿ ದುಬಾರಿ ಆದರು.
ಇನ್ನು ಅದೇ ಓವರ್ನಲ್ಲಿ ಒಂದು ಬೌಂಡರಿ ಕೂಡ ನೀಡಿದರು. ಜೊತೆಗೆ ಇನ್ನೊಂದು ವೈಡ್ ಹಾಕಿ ಒಂದ ಓವರ್ನಲ್ಲಿ ಆರು ವೈಡ್ ಹಾಕಿ ಕೆಟ್ಟ ದಾಖಲೆ ಬರೆದು. ಆ ಮೂಲಕ ತಮ್ಮ ಎರಡನೇ ಓವರ್ನಲ್ಲಿ ಎದುರಾಳಿಗೆ ಬರೋಬ್ಬರಿ 20 ರನ್ಗಳನ್ನ ದಾನವಾಗಿ ನೀಡಿದರು. ಅವರ ಬೌಲಿಂಗ್ ಶೈಲಿ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ಗೌತಮ್ ಗಂಭೀರ್ ಅವರತ್ತ ಕೆಂಗಣ್ಣು ಬೀರಿದ್ದಾರೆ. ಮಯಾಂಕ್ ಯಾದವ್ ಮೇಲೆ ಗಂಭೀರ್ಗೆ ಹೆಚ್ಚು ಪ್ರೀತಿ. ಬೇರೆಯವರ ಅವಕಾಶವನ್ನು ಕಿತ್ತುಕೊಂಡು ಈತನಿಗೆ ಚಾನ್ಸ್ ನೀಡುತ್ತಾರೆ. ಇದೀಗ ಅದಕ್ಕೆ ಟೀಂ ಇಂಡಿಯಾ ಬೆಲೆ ತೆತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಯಾಂಕ್ ಯಾದವ್ ತಮ್ಮ ಕೋಟಾದ ನಾಲ್ಕು ಓವರ್ನಲ್ಲಿ 6 ವೈಟ್ ಬಾಲ್, ಒಂದು ನೋ ಬಾಲ್ ಸೇರಿ ಒಟ್ಟು 52ರನ್ಗಳನ್ನ ಬಿಟ್ಟು ಕೊಟ್ಟರು. ಅಷ್ಟೇ ಅಲ್ಲದೇ ಅರ್ಷದೀಪ್ ಸಿಂಗ್ ಕೂಡ ಕಾಂಪಿಟೇಷನ್ ಮೇಲೆ 6 ವೈಡ್ ಬಾಲ್ ಎಸೆದರು. ಇವರು 52 ರನ್ಗಳನ್ನ ಸುಲಭವಾಗಿ ನೀಡಿದರು. ಇದು ಟೀಂ ಇಂಡಿಯಾ ಗೆಲುವಿನ ಮೇಲೆ ದೊಡ್ಡ ಹೊಡೆತ ನೀಡಿತು. ಆ ಮೂಲಕ ವೆಸ್ಟ್ ವಿಂಡೀಸ್ ನಿಗದಿತ 20 ಓವರ್ನಲ್ಲಿ 247 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.
ಈ ಗುರಿ ಬೆನ್ನು ಹತ್ತಿದ್ದ ಭಾರತ ತಂಡ 19.3 ಓವರ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 223 ರನ್ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ವೆಸ್ಟ್ ವಿಂಡೀಸ್ 24 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದರೆ ಐದು ಟಿ20 ಪಂದ್ಯಗಳಲ್ಲಿ ತಲಾ ಎರಡೆರಡು ಪಂದ್ಯಗಳನ್ನ ಗೆದ್ದುಕೊಂಡಿದ್ದು, ಕೊನೆಯ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ.
ವಿಶೇಷ ಅಂದ್ರೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಹುಟ್ಟುಹಬ್ಬ ಇತ್ತು. ಗಂಭೀರ್ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಗೆದ್ದು ಸರಣಿ ಗೆಲುವಿನ ಉಡುಗೊರೆ ನೀಡಲಿದೆ ಎಂದು ಫ್ಯಾನ್ಸ್ ನಂಬಿದ್ದರು. ಆದರೆ ಕಳಪೆ ಬೌಲಿಂಗ್ನಿಂದಾಗಿ ಟೀಂ ಇಂಡಿಯಾ ಸೋಲಿಗೆ ಶರಣಾಗಿದೆ. ಇದರಿಂದ ಗಂಭೀರ್ ಮೇಲೂ ಫ್ಯಾನ್ಸ್ ಕೋಪಗೊಂಡಿದ್ದಾರೆ.


