Asianet Suvarna News Asianet Suvarna News

Team India Squad:ನ್ಯೂಜಿಲೆಂಡ್ ವಿರುದ್ಧ T20ಗೆ ಬಲಿಷ್ಠ ತಂಡ ಪ್ರಕಟ, ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್!

  • ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ
  • ಕೊಹ್ಲಿ ನಿರ್ಗಮನದಿಂದ ರೋಹಿತ್‌ಗೆ ನಾಯಕತ್ವ ನೀಡಿದ ಬಿಸಿಸಿಐ
  • ನ್ಯೂಜಿಲೆಂಡ್ ಟಿ20 ಸರಣಿಗೆ ಕೊಹ್ಲಿ ಸೇರಿ ಹಲವರಿಗೆ ರೆಸ್ಟ್
Team India Squad announced for new Zealand limited over series Rohit Sharma lead the team virat kohli rested ckm
Author
Bengaluru, First Published Nov 9, 2021, 8:10 PM IST
  • Facebook
  • Twitter
  • Whatsapp

ಮುಂಬೈ(ನ.09):  ನ್ಯೂಜಿಲೆಂಡ್(New zealand) ವಿರುದ್ಧದ ಟಿ20 ಸರಣಿಗೆ(T20 Tourney) ಟೀಂ ಇಂಡಿಯಾ ಪ್ರಕಟಗೊಂಡಿದೆ(Team India Squad). ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ(Rohit Sharma) ಮುನ್ನಡೆಸಲಿದ್ದಾರೆ. ಇನ್ನು ಟಿ20 ಮಾದಿರಿ ನಾಯಕತ್ವಕ್ಕೆ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. 

ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿ ಆರಂಭಗೊಳ್ಳಲಿದೆ. ಆರಂಭದಲ್ಲಿ 3 ಟಿ20 ಪಂದ್ಯದ ಸರಣಿ, ಬಳಿಕ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ಬಿಸಿಸಿಐ(BCCI) ಆಯ್ಕೆ ಸಮಿತಿ ಅಳೆದು ತೂಗಿ ಟೀಂ ಇಂಡಿಯಾ ತಂಡ ಆಯ್ಕೆ ಮಾಡಿದೆ. ನಿರೀಕ್ಷೆಯಂತೆ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿದೆ.

ಟೀಂ ಇಂಡಿಯಾ ಟಿ20 ತಂಡ:
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್(ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಆರ್ ಅಶ್ವಿನ್, ಆಕ್ಸರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

Ravi Shastri:ಟ್ರೇಸರ್ ಬುಲೆಟ್ ಕೋಚ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾದ 5 ಐತಿಹಾಸಿಕ ಮೈಲಿಗಲ್ಲು!

ಟಿ20 ವಿಶ್ವಕಪ್ ಟೂರ್ನಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಶ್ರೇಯಸ್ ಅಯ್ಯರ್ ತಂಡ ಸೇರಿಕೊಂಡಿದ್ದಾರೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ.  ಸ್ಪಿನ್ ಕೋಟಾದಲ್ಲಿ ಯಜುವೇಂದ್ರ ಚಹಾಲ್ ಸ್ಥಾನ ಪಡೆದಿದ್ದಾರೆ.   

ವೇಗಗಿಳಾಗಿ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ದೀಪಕ್ ಚಹಾರ್, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಂಡ ಸೇರಿಕೊಂಡಿದ್ದಾರೆ.   ಕೊಹ್ಲಿ ಜೊತೆಗೆ ಹಿರಿಯ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಲಿದೆ. ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ  ಗರಿಷ್ಠ ವಿಕೆಟ್ ಕಬಳಿಸಿ ಮಿಂಚಿದ ಹರ್ಷಲ್ ಪಟೇಲ್ ಟಿ20 ವಿಶ್ವಕಪ್ ಟೂರ್ನಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಪಟೇಲ್ ಆಯ್ಕೆಯಾಗಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ಟಿ20 ಸರಣಿ
ಮೊದಲ ಟಿ20 ಪಂದ್ಯ,  ನವೆಂಬರ್ 17, 2021, ಜೈಪುರ
ಎರಡನೇ ಟಿ20 ಪಂದ್ಯ, ನವೆಂಬರ್ 19, 2021, ರಾಂಚಿ
ಮೂರನೇ ಟಿ20 ಪಂದ್ಯ, ನವೆಂಬರ್ 21, 2021, ಕೋಲ್ಕತಾ

ಮೂರು ಟಿ20 ಸರಣಿ ಬಳಿಕ ಟೀಂ ಇಂಡಿಯಾ ಎರಡು ಟೆಸ್ಟ್ ಪಂದ್ಯದ ಸರಣಿ ಆಡಲಿದೆ.ನವೆಂಬರ್ 25 ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಕಾನ್ಪುರ ಹಾಗೂ ಮುಂಬೈನಲ್ಲ ಪಂದ್ಯ ಆಯೋಜಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿ ಜೊತೆಯಲ್ಲೇ ಸೌತ್ ಆಫ್ರಿಕಾ ಎ ವಿರುದ್ಧದ ಸರಣಿಗೆ ಭಾರತ ಎ ತಂಡ ಪ್ರಕಟಿಸಲಾಗಿದೆ. ಪ್ರಿಯಾಂಕ್ ಪಾಂಚಾಲ್ ಭಾರತ ಎ ತಂಡದ ನಾಯಕನಾಗಿದ್ದಾರೆ.  ಭಾರತ ಎ ತಂಡದಲ್ಲಿ ಕನ್ನಡಿಗರಾದ ದೇವದತ್ ಪಡಿಕ್ಕಲ್ ಹಾಗೂ ಕೆ ಗೌತಮ್  ಸ್ಥಾನ ಪಡೆದಿದ್ದಾರೆ. 

ಸೌತ್ ಆಫ್ರಿಕಾ ಪ್ರವಾಸಕ್ಕೆ ವಿರುದ್ಧದ ಭಾರತ ಎ ತಂಡ:
ಪ್ರಿಯಾಂಕ್ ಪಾಂಚಾಲ್(ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್, ಕೆ ಗೌತಮ್,  ರಾಹುಲ್ ಚಹಾರ್, ಸೌರಬ್ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಾಲಿಕ್, ಇಶಾನ್ ಪೊರೆಲ್, ಅರ್ಜಾನ್ ನಾಗವಾಸವಲ್ಲ.

 

Follow Us:
Download App:
  • android
  • ios