Asianet Suvarna News Asianet Suvarna News

Ravi Shastri:ಟ್ರೇಸರ್ ಬುಲೆಟ್ ಕೋಚ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾದ 5 ಐತಿಹಾಸಿಕ ಮೈಲಿಗಲ್ಲು!

  • ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವದಿ ಮುಕ್ತಾಯ
  • ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು
  • ಬಾರ್ಡರ್ ಗವಾಸ್ಕರ್ ಟ್ರೋಫಿ, ಲಂಕಾ ವೈಟ್‌ವಾಶ್ ಸೇರಿ ದಾಖಲೆ ಗೆಲುವು
Team India top 5 major significant achievements under coach Ravi Shastri ckm
Author
Bengaluru, First Published Nov 9, 2021, 7:53 PM IST
  • Facebook
  • Twitter
  • Whatsapp

ಮುಂಬೈ(ನ.09): ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ(Ravi Shastri) ಅವಧಿ ಮುಕ್ತಾಯಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂಂದ ಟೀಂ ಇಂಡಿಯಾ(Team India) ಕೋಚ್ ಆಗಿ ಕಾರ್ಯನಿರ್ವಹಿಸಿರುವ ರವಿ ಶಾಸ್ತ್ರಿ ಹಲವು ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಿಂದಲೇ ನಿರ್ಗಮಿಸಿದ ಕಾರಣ ಹಿಡಿದು ಶಾಸ್ತ್ರಿ ಮಾರ್ಗದರ್ಶನವನ್ನೇ(Coach) ಹಲವರು ಪ್ರಶ್ನಿಸಿದ್ದಾರೆ. ಆದರೆ ಇದೇ ಶಾಸ್ತ್ರಿ ಅಡಿಯಲ್ಲಿ ಟೀಂ ಇಂಡಿಯಾ ದಾಖಲೆಯ ಗೆಲುವು ಕಂಡಿದೆ. ರವಿ ಶಾಸ್ತ್ರಿ ಮಾರ್ಗದರ್ಶನದ ಅಡಿಯಲ್ಲಿ ಟೀಂ ಇಂಡಿಯಾ ದಾಖಲಿಸಿದೆ 5 ಮಹತ್ವದ ಮೈಲಿಗಲ್ಲು ವಿವರ ಇಲ್ಲಿವೆ.

ಟ್ರೇಸರ್ ಬುಲೆಟ್ ಕಮೆಂಟರಿಯಿಂದಲೇ(tracer bullet commentary) ಪ್ರಖ್ಯಾತಗೊಂಡಿರುವ ರವಿ ಶಾಸ್ತ್ರಿ, ತನ್ನ ಕೋಟಿಂಗ್ ಕೌಶಲ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ತಂಡವನ್ನು ಒಗ್ಗೂಡಿಸಿ ಮುನ್ನಡೆಸಬಲ್ಲ ತಾಕತ್ತು ರವಿ ಶಾಸ್ತ್ರಿಗಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ(20218-19)
2018-19ರಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಪಂದ್ಯಗಳ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ(Australia Tour) ಕೈಗೊಂಡಿತ್ತು. ಆಡಿಲೇಡ್ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ, ಪರ್ತ್ ಟೆಸ್ಟ್‌ನಲ್ಲಿ ಸೋಲು ಕಂಡಿತ್ತು ಆದರೆ ಮೆಲ್ಬೊರ್ನ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿತು.  ಈ ಮೂಲಕ ಆಸೀಸ್ ಪ್ರವಾಸದಲ್ಲಿ ಚೊಚ್ಚಲ ಸರಣಿ ಗೆದ್ದುಕೊಂಡಿತು. ಇನ್ನು 2020-21ರಲ್ಲೂ ಇದೇ ಗೆಲುವು ಟೀಂ ಇಂಡಿಯಾ ಮುಂದುವರಿಸಿದೆ.

Team India top 5 major significant achievements under coach Ravi Shastri ckm

Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

ವೆಸ್ಟ್ ಇಂಡೀಸ್ ವಿರುದ್ಧ ವೈಟ್‌ವಾಶ್ ಗೆಲುವು
2019ರಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ(West Indies Tour) ಕೈಗೊಂಡಿತು. ಟೀಂ ಇಂಡಿಯಾ ದಿಟ್ಟ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ತಲೆ ಬಾಗಿತು. ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ವೈಟ್ ವಾಶ್ ಗೆಲುವು ಸಾಧಿಸಿತು.

ಶ್ರೀಲಂಕಾ ವಿರುದ್ಧ ವೈಟ್‌ವಾಶ್:
ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ(Srilanka Tour) ಕೈಗೊಂಡಿತು. 2017ರಲ್ಲಿ ಲಂಕಾ ಪ್ರವಾಸದಲ್ಲಿ 3 ಟೆಸ್ಟ್ , 5 ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಸರಣಿ ಆಡಿತ್ತು. 3-0 ಅಂತರದಲ್ಲಿ ಟೆಸ್ಟ್, 5-0 ಅಂತರದಲ್ಲಿ ಏಕದಿನ ಹಾಗೂ ಏಕೈಕ ಟಿ20 ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತು.

30 ತಿಂಗಳು ವಿಶ್ವ ಕ್ರಿಕೆಟ್ ಆಳಿದ ಟೀಂ ಇಂಡಿಯಾ
ರವಿ ಶಾಸ್ತ್ರಿ ಮಾರ್ಗದರ್ಶನ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. 30 ತಿಂಗಳು ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿತು. ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. 

MS ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನ ಶ್ರೇಷ್ಠ ನಾಯಕ: ರವಿಶಾಸ್ತ್ರಿ

2019 ವಿಶ್ವಕಪ್, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಯಾವುದೇ ಅಡೆ ತಡೆ ಇಲ್ಲದೆ ಸೆಮಿಪೈನಲ್ ಪ್ರವೇಶಿಸಿತ್ತು. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಮುಗ್ಗರಿಸಿತು. ಇನ್ನು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗಿಸಿತ್ತು. ಆದರೆ ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಕೊಂಡೊಯ್ಯದ ಕೀರ್ತಿ ಶಾಸ್ತ್ರಿಗಿದೆ.

ಶಾಸ್ತ್ರಿ ಮಾರ್ಗದರ್ಶನ ಅಡಿಯಲ್ಲಿ ಟೀಂ ಇಂಡಿಯಾ ದ್ವಿಪಕ್ಷೀಯ ಸರಣಿಯಲ್ಲಿಐತಿಹಾಸಿಕ ಸಾಧನೆ ಮಾಡಿದೆ. ಆದರೆ ಐಸಿಸಿ ಟೂರ್ನಿ ಪ್ರಶಸ್ತಿ ಗೆದ್ದಿಲ್ಲ. ಟಿ20 ವಿಶ್ವಕಪ್ 2021 ಟೂರ್ನಿ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಉತ್ತಮ ಹೋರಾಟ ನೀಡಿ ನಾಕೌಟ್ ಹಂತ ಪ್ರವೇಶಿಸಿದೆ.
 

Follow Us:
Download App:
  • android
  • ios