ತಿರುವನಂತಪುರಂ(ಡಿ.08): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ, 2ನೇ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ತಿರುವನಂತಪುರಂನಲ್ಲಿ ಪಂದ್ಯ ಆಡುತ್ತಿರುವುದರಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬದಲಾವಣೆಯಾದರೂ ಅಚ್ಚರಿಯಿಲ್ಲ.

ಇದನ್ನೂ ಓದಿ: ವಿಲಿಯಮ್ಸ್ ನೋಟ್‌ಬುಕ್ ಸಂಭ್ರಮಕ್ಕೆ ತಿರುಗೇಟು; ಕೊಹ್ಲಿಗೆ ಭೇಷ್ ಎಂದ ಫ್ಯಾನ್ಸ್!

ತಿರುವನಂತಪುರಂ ಸಂಜು ಸಾಮ್ಸನ್ ತವರು ಮೈದಾನ. ಹೀಗಾಗಿ ರಿಷಬ್ ಪಂತ್ ಬದಲು ಸಂಜು ಸಾಮ್ಸನ್‌ಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಆದರೆ ನಾಯಕ ವಿರಾಟ್ ಕೊಹ್ಲಿ ವಿನ್ನಿಂಗ್ ಕಾಂಬೀನೇಷನ್ ಮುಂದುವರಿಸಲು ಮುಂದಾಗಿದ್ದಾರೆ. ಹೀಗಾದಲ್ಲಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ 2ನೇ ಪಂದ್ಯದಲ್ಲೂ ಮೈದಾನಕ್ಕಿಳಿಯಲಿದೆ.

ಇದನ್ನೂ ಓದಿ: ಗೆಲುವಿನ ಖುಷಿಯಲ್ಲಿರುವ ಕೊಹ್ಲಿ ಸೈನ್ಯದ ವಿರುದ್ದ ಯುವರಾಜ್ ಅಸಮಧಾನ!.

ಭಾರತ ಸಂಭವನೀಯ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್

ವೆಸ್ಟ್ ಇಂಡೀಸ್ ಸಂಭವನೀಯ ತಂಡ:
ಕೀರನ್ ಪೊಲಾರ್ಡ್(ನಾಯಕ), ಲಿಂಡ್ಲ್ ಸಿಮೋನ್ಸ್, ಇವಿನ್ ಲಿವಿಸ್, ಬ್ರೆಂಡನ್ ಕಿಂಗ್, ಶಿಮ್ರೋನ್ ಹೆಟ್ಮೆಯರ್,  ನಿಕೋಲಸನ್ ಪೂರನ್, ಜೇಸನ್ ಹೋಲ್ಡರ್, ಖರೆ ಪೀಯರೆ, ಕಿಮೊ ಪೌಲ್, ಹೈಡನ್ ವಾಲ್ಶ್, ಶೆಲ್ಡನ್ ಕಾಟ್ರೆಲ್