ಇಂದೋರ್(ನ.16): ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ ಗೆಲುವಿನತ್ತ ದಾಪುಗಾಲಿಡುತ್ತಿದೆ. ಪಂದ್ಯದ  ಮೂರನೇ ದಿನ ವಿರಾಟ್ ಕೊಹ್ಲಿ ಸೈನ್ಯ ಸಂಭ್ರಮ ಆಚರಿಸಲು ಸಜ್ಜಾಗುತ್ತಿದೆ. 343 ರನ್ ಭಾರಿ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್‌ ಆರಂಭಿಸಿದ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡು  ಸೋಲಿನತ್ತ ಜಾರಿದೆ.

ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಮೊದಲ ಇನಿಂಗ್ಸ್‌ನಲ್ಲಿ ಭಾರತ 493 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ 3ನೇ ದಿನ 2ನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಟೀಂ ಇಂಡಿಯಾ ದಾಳಿಗೆ ತತ್ತರಿಸಿದೆ. ಮೊಹಮ್ಮದ್ ಶಮಿ ಮತ್ತೆ ವೇಗಕ್ಕೆ ಬಾಂಗ್ಲಾ ಪತರುಗುಟ್ಟಿದ್ದು, ವಿಕೆಟ್ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

ಇದನ್ನೂ ಓದಿ: ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಇಮ್ರುಲ್ ಕೈಸ್ 6, ಶದ್ಮನ್ ಇಸ್ಲಾಂ 6, ನಾಯಕ ಮೊಮಿನಲ್ ಹಕ್ 7 ಹಾಗೂ ಮೊಹಮ್ಮದ್ ಮಿಥುನ್ 18 ರನ್ ಸಿಡಿಸಿ ಔಟಾದರು. ಮುಶ್ಫಿಕರ್ ರಹೀಮ್ ಹಾಗೂ ಲಿಟ್ಟನ್ ದಾಸ್ ಹೋರಾಟ ನೀಡಿದರು. ಆದರೆ ಮೊಹಮ್ಮದುಲ್ಲಾ 15 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ದಿಟ್ಟ ಪ್ರದರ್ಶನ ನೀಡಿದ ಲಿಟ್ಟನ್ ದಾಸ್ 35 ರನ್ ಸಿಡಿಸಿ ಔಟಾದರು. ಮುಶ್ಫಿಕರ್ ಏಕಾಂಗಿ ಹೋರಾಟ ಮುಂದುವರಿಸಿದರು.