INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಬಾಂಗ್ಲಾದೇಶ ವಿರುದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಲಾಗಿಟ್ಟಿದೆ. ಮಯಾಂಕ್ ದ್ವಿಶತಕ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 
 

India vs bangladesh indore Mayank  agarwal hit 2nd double century in test cricket

ಇಂದೋರ್(ನ.15): ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಮೊದಲ ದಿನ ಬೌಲರ್‌ಗಳು ಪರಾಕ್ರಮ ಮೆರೆಯೋ ಮೂಲಕ ಬಾಂಗ್ಲಾ ತಂಡವನ್ನು ಕಟ್ಟಿಹಾಕಿದರೆ, ಎರಡನೇ ದಿನ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ದಿಟ್ಟ ಹೋರಾಟ ನೀಡುತ್ತಿರುವ ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಡಬಲ್ ಸೆಂಚುರಿ ದಾಖಲಿಸಿದರು.ಈ ಮೂಲಕ ಅತೀ ಕಡಿಮೆ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ 2ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದೆರು.

ಇದನ್ನೂ ಓದಿ: ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!.

2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸೆಂಚುರಿ ಸಿಡಿಸಿ ಮಿಂಚಿದ್ದ ಮಯಾಂಕ್,  ಇದೀಗ ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ. ಮಯಾಂಕ್ 303  ಎಸೆತದಲ್ಲಿ ಡಬಲ್ ಸೆಂಚುರಿ ಪೂರೈಸಿದರು. ವಿಶೇಷ ಅಂದರೆ ವಿರೇಂದ್ರ ಸೆಹ್ವಾಗ್ ರೀತಿಯಲ್ಲಿ ಸಿಕ್ಸರ್ ಸಿಡಿಸೋ ಮೂಲಕ ದ್ವಿಶತಕ ಪೂರೈಸಿದರು.

ಸೌತ್ ಆಫ್ರಿಕಾ ವಿರುದ್ದದ ವಿಶಾಖಪಟ್ಟಣಂ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಮೊದಲ ಡಬಲ್ ಸೆಂಚರಿ  ಸಿಡಿಸಿದ್ದರು.  ಇದೀಗ ಸತತ 2ನೇ ಸರಣಿಯಲ್ಲಿ ಮಯಾಂಕ್ ದ್ವಿಶತಕದ ಸಾಧನೆ ಮಾಡಿದ್ದಾರೆ.

ಅತೀ ಕಡಿಮೆ ಇನಿಂಗ್ಸ್‌ನಲ್ಲಿ ದ್ವಿಶತಕ ಸಾಧನೆ
5 (ಇನಿಂಗ್ಸ್) ವಿನೋದ್ ಕಾಂಬ್ಲಿ
12 (ಇನಿಂಗ್ಸ್) ಮಯಾಂಕ್ ಅಗರ್ವಾಲ್
13 (ಇನಿಂಗ್ಸ್)  ಡಾನ್ ಬ್ರಾಡ್ಮನ್
14 (ಇನಿಂಗ್ಸ್)  ವಿಲಿಯಂ ಎಲ್ ರೋವೆ
15 (ಇನಿಂಗ್ಸ್)  ಗ್ರೇಮ್ ಸ್ಮಿತ್
16 (ಇನಿಂಗ್ಸ್)  ವ್ಯಾಲಿ ಹ್ಯಾಮಂಡ್
18 (ಇನಿಂಗ್ಸ್)  ಚೇತೇಶ್ವರ್ ಪೂಜಾರ

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Latest Videos
Follow Us:
Download App:
  • android
  • ios