ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!
ಸಂಸದ ಗೌತಮ್ ಗಂಭೀರ್ ಪ್ರತಿ ಬಾರಿ ಟ್ವೀಟ್ ಮೂಲಕ ಇತರರನ್ನು ಟೀಕಿಸುತ್ತಿದ್ದರು. ಇದೀಗ ಸ್ವತಃ ಗೌತಮ್ ಗಂಭೀರ್ ಅಭಿಮಾನಿಗಳ ಕಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದೋರ್(ನ.15): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, ದೆಹಲಿ ಮಾಲಿನ್ಯ ಹಾಗೂ ಆಮ್ ಆದ್ಮಿ ಕೈಗೊಂಡ ನಿರ್ಣಗಳ ಕುರಿತು ಸರಣಿ ಟ್ವೀಟ್ ಮಾಡಿ ಕುಟುಕಿದ್ದರು. ಇದೀಗ ಇದೇ ದೆಹಲಿ ಮಾಲಿನ್ಯ ನಿಯಂತ್ರಣ ಕುರಿತ ಮೀಟಿಂಗ್ ತೆರಳದೇ, ಇಂದೋರ್ ಟೆಸ್ಟ್ ಪಂದ್ಯದ 2ನೇ ವೀಕ್ಷಕ ವಿವರಣೆಗೆ ಹಾಜರಾಗೋ ಮೂಲಕ ಅಭಿಮಾನಿಗಳ ಕೆಂಗಣ್ಣಿಗ ಗುರಿಯಾಗಿದ್ದಾರೆ.
ಇದನ್ನೂ ಓದಿ: ಇಂದೋರ್ ಟೆಸ್ಟ್: ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಶತಕ
ಸಂಸತ್ತಿನ ನಗರಾಭಿವೃದ್ದಿ ಸಮಿತಿ ಮಾಲಿನ್ಯ ನಿಯಂತ್ರಣದ ಕುರಿತು ಮಹತ್ವದ ಮೀಟಿಂಗ್ ಕರೆದಿತ್ತು. ಪೂರ್ವ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಗೌತಮ್ ಗಂಭೀರ್ ಕೂಡ ಈ ಸಭೆಗೆ ಹಾಜರಾಗಬೇಕಿತ್ತು. ಆದರೆ ಗಂಭೀರ್ ಮೀಟಿಂಗ್ ಹಾಜರಾಗದೇ, ಇಂದೋರ್‌ನಲ್ಲಿ ನಡೆಯುಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗೆ ತೆರಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!
ಗಂಭೀರ್ ನಡೆಗೆ ವಿರೋಧ ವ್ಯಕ್ತವಾಗಿದೆ. ಕ್ರಿಕೆಟ್ ಬಗ್ಗೆ ಇರುವ ಕಾಳದಿ ಮೆಚ್ಚುಗೆ ಇದೆ. ಆದರೆ ಸಂಸದನಾಗಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಹಾಜರಾಗದೆ ಕಮೆಂಟರಿಯತ್ತ ತೆರಳಿದ್ದು ಎಷ್ಟು ಸರಿ, ಕಮೆಂಟರಿ ಮುಖ್ಯವಾಗಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದೇಕೆ? ದೆಹಲಿ ಜನ, ನಿಮ್ಮನ್ನು ಕಮೆಂಟರಿಗೆ ಮಾಡಲು ಆಯ್ಕೆ ಮಾಡಿಲ್ಲ ಎಂದು ಟ್ವಿಟರ್ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದ್ದಾರೆ.