ಮುಂಬೈ[ಅ.07]: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಭಾನು​ವಾರ ಇಲ್ಲಿ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಹಾಗೂ ತಮ್ಮ ಬಾಲಿ​ವುಡ್‌ ಗೆಳೆ​ಯ​ರೊಂದಿ​ಗೆ ಫುಟ್ಬಾಲ್‌ ಆಡಿ ಗಮ​ನ​ಸೆ​ಳೆ​ದ​ರು. 

ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!

ವಿಶ್ರಾಂತಿಯನ್ನು ಬಿಂದಾಸ್ ಆಗಿ ಎಂಜಾಯ್ ಮಾಡ್ತಿದ್ದಾರೆ ಧೋನಿ..!

ನಟ ಅರ್ಜುನ್‌ ಕಪೂರ್‌ ಸಹಿತ ಬಾಲಿ​ವುಡ್‌ ಕಲಾ​ವಿ​ದರ ಜೊತೆ ಧೋನಿ ಫುಟ್ಬಾಲ್‌ ಆಡಿ​ದ್ದು, ವಿಡಿಯೋ ವೈರಲ್‌ ಆಗಿದೆ. 15 ದಿನ​ಗ​ಳ ಭಾರ​ತೀಯ ಸೇನಾ ತರ​ಬೇ​ತಿಗಾಗಿ ಕಾಶ್ಮೀ​ರಕ್ಕೆ ತೆರ​ಳಿದ್ದ ಧೋನಿ ವೆಸ್ಟ್‌ ಇಂಡೀಸ್‌ ಪ್ರವಾ​ಸಕ್ಕೆ ಭಾರತ ತಂಡ​ದಿಂದ ತಾವಾ​ಗಿಯೇ ಹೊರ​ಗು​ಳಿ​ದಿ​ದ್ದರು. ದಕ್ಷಿಣ ಆಫ್ರಿಕಾ ಸರ​ಣಿಗೂ ಧೋನಿ ಮರ​ಳ​ಲಿ​ಲ್ಲ. ನವೆಂಬ​ರ್‌​ನಲ್ಲಿ ನಡೆ​ಯ​ಲಿ​ರುವ ಬಾಂಗ್ಲಾ​ದೇಶ ವಿರು​ದ್ಧ​ದ ಟಿ20 ಸರ​ಣಿಗೂ ಹೊರ​ಗು​ಳಿ​ದ ಧೋನಿ ರಜೆ ವಿಸ್ತ​ರಿ​ಸಿ​ದ​ರು. ಡಿಸೆಂಬ​ರ್‌​ನಲ್ಲಿ ಧೋನಿ ತಂಡಕ್ಕೆ ಮರ​ಳುವ ನಿರೀ​ಕ್ಷೆ​ಯಿ​ದೆ.

ಬಾಲಿವುಡ್ ಈ ಹೀರೋ ಜತೆ ಧೋನಿ ನಟನೆ..?

ಧೋನಿ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ನಿಂದ ದೂರವೇ ಉಳಿದಿದ್ದಾರೆ. ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಧೋನಿ ವಿದಾಯ ಹೇಳುತ್ತಾರೆ ಎನ್ನುವ ಮಾತುಗಳು ಹರಿದಾಡಿದ್ದವು. ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಧೋನಿ ಅನುಪಸ್ಥಿತಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಧೋನಿ ಮುಂಬರುವ 2020ರ ಟಿ20 ವಿಶ್ವಕಪ್’ವರೆಗೂ ಧೋನಿ ಟೀಂ ಇಂಡಿಯಾದಲ್ಲೇ ಮುಂದುವರೆಯುವ ಸಾಧ್ಯತೆಯಿದೆ.