ವಿಶ್ವ ಕ್ರಿಕೆಟಿಗರ ಪೈಕಿ ಭಾರತೀಯ ಕ್ರಿಕೆಟಿಗರು ಬಹುತೇಕರು ಶ್ರೀಮಂತರಾಗಿದ್ದಾರೆ. ಈ ಪೈಕಿ ಅತೀ ದುಬಾರಿ ಹಾಗೂ ಐಷಾರಾಮಿ ಮನೆ ಹೊಂದಿರುವ ಕ್ರಿಕೆಟಿಗ ಯಾರು? ಟಾಪ್ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ
ನವದೆಹಲಿ (ಅ.15) ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಹಲವರು ವಿವೆದೆಡೆ ಹೂಡಿಕೆ ಮಾಡಿದ್ದಾರೆ, ಉದ್ಯಮ ನಡೆಸುತ್ತಿದ್ದಾರೆ. ಹಲವು ಮೂಲಗಳಿಂದ ಆದಾಯ ಪಡೆಯುತ್ತಿದ್ದಾರೆ. ಟೀಂ ಇಂಡಿಯಾದ ಬಹುತೇಕ ಕ್ರಿಕೆಟಿಗರು ಐಷಾರಾಮಿ ಹಾಗೂ ದುಬಾರಿ ಮನೆ ಹೊಂದಿದ್ದಾರೆ. ವಿಶೇಷ ಅಂದರೆ ಹಲವು ಕ್ರಿಕೆಟಿಗರು ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಈ ಪೈಕಿ ಅತೀ ದುಬಾರಿ ಮನೆ ಹೊಂದಿದ ಕೀರ್ತಿ ಸಚಿನ್ ತೆಂಡೂಲ್ಕರ್ ಪಾಲಾಗಿದೆ.
ಸಚಿನ್ ತೆಂಡೂಲ್ಕರ್ ಮುಂಬೈ ಮನೆ ಮೌಲ್ಯ
ಸಚಿನ್ ತೆಂಡೂಲ್ಕರ್ ವಿದಾಯದ ಬಳಿಕ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸ್ಟಾರ್ಟ್ಅಪ್ ಸೇರಿದಂತೆ ಇತರ ಕೆಲ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಸಚಿನ್ ಟೀಂ ಇಂಡಿಯಾದಲ್ಲಿರುವಾಗಲೇ ಮುಂಬೈನಲ್ಲಿ ನಿವೇಷನ ಖರೀದಿಸಿ ಮನೆ ಕಟ್ಟಿಸಿದ್ದರು. ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ದುಬಾರಿ ಮನೆ ಇರುವ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ಮನೆ ಮೌಲ್ಯ ಸರಿಸುಮಾರು 100 ರಿಂದ 150 ಕೋಟಿ ರೂಪಾಯಿ ಎಂದು ಅಂದಾಜಿಲಾಗಿದೆ. ಸದ್ಯ ಮಾರುಕಟ್ಟೆ ಮೌಲ್ಯ ಅಧಿಕೃತವಾಗಿ ಬಹಿರಂಗವಾಗಿಲ್ಲ. 2007ರಲ್ಲಿ ಮುಂಬೈನ ಬಾಂದ್ರಾದಲ್ಲಿ ಸಚಿನ್ ತೆಂಡೂಲ್ಕರ್ ಈ ನಿವೇಷನ ಖರೀದಿಸಿದ್ದರು. 2011ರಲ್ಲಿ ಸಚಿನ್ ಕುಟುಂಬ ಇಲ್ಲಿ ನೆಲೆಸಲು ಆರಂಭಿಸಿತು.
ವಿರಾಟ್ ಕೊಹ್ಲಿ ಬಳಿ ಇದೆ ಹಲವು ಮನೆ
ವಿರಾಟ್ ಕೊಹ್ಲಿ ಒಂದೊಂದು ಮನೆಗಳು 80 ರಿಂದ 150 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ವಿಶೇಷ ಅಂದರೆ ವಿರಾಟ್ ಕೊಹ್ಲಿ ಬಳಿ ಹಲವು ಮನೆಗಳಿವೆ. ಗುರುಗಾಂವ್, ಮಂಬೈ, ಲಂಡನ್ನಲ್ಲಿ ಕೊಹ್ಲಿ ಮನೆಗಳಿವೆ. ಗುರುಗಾಂವ್ನಲ್ಲಿ ಡಿಎಲ್ಎಪ್ ಫೇಸ್ 1ರಲ್ಲಿ 80 ಕೋಟಿ ರೂಪಾಯಿಗೆ ಮನೆ ಖರೀದಿಸಿದ್ದಾರೆ. ಇನ್ನು ಮುಂಬೈ ವರ್ಲಿಯಲ್ಲಿ ಕೊಹ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಯ ಮೌಲ್ಯವೂ ಸರಿಸುಮಾರು 80 ರಿಂದ 120 ಕೋಟಿ ರೂಪಾಯಿ. ಇನ್ನು ಮುಂಬೈನ ಆಲಿಬಾಗ್ನಲ್ಲಿ ನಿವೇಷನ ಖರೀದಿಸಿದ್ದಾರೆ. ಇಲ್ಲೂ ಕೂಡ ಮನೆ ಕಟ್ಟಿಸುತ್ತಿದ್ದಾರೆ. ಇನ್ನು ಲಂಡನ್ನಲ್ಲಿ ವಿರಾಟ್ ಕೊಹ್ಲಿ ಸ್ವಂತ ಮನೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಮನೆಯ ಒಟ್ಟು ಮೌಲ್ಯ 250 ರಿಂದ 350 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಮುಂಬೈನ ಎರಡಕ್ಕಿಂತ ಹೆಚ್ಚು ಮನೆ ಖರೀದಿಸಿದ್ದಾರೆ. 2015ರಲ್ಲಿ ಮುಂಬೈನಲ್ಲಿ 30 ಕೋಟಿ ರೂಪಾಯಿಗೆ ಮನೆ ಖರೀದಿಸಿದ್ದರು. ರೋಹಿತ್ ಶರ್ಮಾ ಮನೆ ಮೌಲ್ಯ ಸದ್ಯ 100 ಕೋಟಿ ರೂಪಾಯಿ ಮೇಲಿದೆ ಎಂದು ಅಂದಾಜಿಸಲಾಗಿದೆ. ಇತ್ತ ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ. ಮುಂಬೈ ಮನೆ ಅಂದಾಜು ಮೌಲ್ಯ 50 ರಿಂದ 80 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಎಂಎಸ್ ಧೋನಿ ರಾಂಚಿಯಲ್ಲಿರುವ ಫಾರ್ಮ್ ಹೌಸ್ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ ನಿವೇಷನ ಹಾಗೂ ಮನೆ ಮೌಲ್ಯ 50 ಕೋಟಿ ರೂಪಾಯಿಗಿಂತ ಮೇಲಿದೆ ಎಂದು ಅಂದಾಜಿಸಲಾಗಿದೆ.


