ಸುಂದರಿ ನಿಹಾರಿಕಾಳ ಜತೆ ಶುಭ್‌ಮನ್ ಗಿಲ್‌ ರೊಮ್ಯಾಂಟಿಕ್ ಡೇಟ್..! ಸಾರಾ ಕಥೆ ಏನು?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಜ್ಜಾಗುತ್ತಿರುವ ಶುಭ್‌ಮನ್ ಗಿಲ್
ನಿಹಾರಿಕಾ ಎದುರು ಸ್ಪೈಡರ್‌ಮನ್ ಆಗಿ ಬದಲಾದ ಗಿಲ್
ಸಾರಾ ಕಥೆ ಏನು ಎಂದು ಕೇಳಿದ ನೆಟ್ಟಿಗರು

Team India Cricketer Shubman Gill Romantic Date With Social Media Influencer Niharika NM Video Goes Viral kvn

ಲಂಡನ್‌(ಜೂ.06): ಟೀಂ ಇಂಡಿಯಾ ಹಾಗೂ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್‌ ಶುಭ್‌ಮನ್ ಗಿಲ್ ಕಳೆದ ಕೆಲ ತಿಂಗಳಿನಿಂದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭ್‌ಗಿಲ್‌ 890 ರನ್‌ ಬಾರಿಸುವ ಮೂಲಕ ಆರೆಂಜ್ ಕ್ಯಾಪ್‌ ಗೆದ್ದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದರು.

ಶುಭ್‌ಮನ್ ಗಿಲ್‌ ಮೈದಾನದೊಳಗೆ ಮಾತ್ರವಲ್ಲ ಮೈದಾನದಾಚೆಗೂ ಹೆಚ್ಚು ಸುದ್ದಿಯಲ್ಲಿರುವ ಕ್ರಿಕೆಟ್ ಆಟಗಾರನಾಗಿದ್ದಾರೆ. ಅದರಲ್ಲೂ ಶುಭ್‌ಮನ್ ಗಿಲ್ ಅವರ ಲವ್ ಕುರಿತಾದ ಗಾಳಿಸುದ್ದಿಗಳಂತೂ ಚರ್ಚೆಯ ಹಾಟ್ ಟಾಪಿಕ್‌ ಎನಿಸಿಕೊಂಡಿವೆ. ಶುಭ್‌ಮನ್ ಗಿಲ್ ಅವರ ಹೆಸರು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜತೆಗೆ ಥಳುಕು ಹಾಕಿಕೊಂಡಿದೆ. ಇನ್ನು ಇದಷ್ಟೇ ಅಲ್ಲದೇ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜತೆಗೂ ಶುಭ್‌ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವಂತಹ ಮಾತುಗಳು ಕೇಳಿಬಂದಿದ್ದವು. ಆದರೆ ಇತ್ತೀಚೆಗಷ್ಟೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಾರಾ ಅಲಿ ಖಾನ್ ಹಾಗೂ ಶುಭ್‌ಮನ್ ಗಿಲ್ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದರು. 

ಇನ್ನು ಇವೆಲ್ಲದರ ನಡುವೆ ಭಾರ​ತದ ತಾರಾ ಕ್ರಿಕೆ​ಟಿಗ ಶುಭ್‌​ಮನ್‌ ಗಿಲ್‌ ಬಣ್ಣದ ಲೋಕಕ್ಕೆ ಕಾಲಿ​ಟ್ಟಿದ್ದು, ಅನಿ​ಮೇ​ಟೆಡ್‌ ಸಿನಿ​ಮಾ​ವೊಂದಕ್ಕೆ ಧ್ವನಿ ನೀಡಿ​ದ್ದಾರೆ. ಈ ಬಗ್ಗೆ ಸ್ವತಃ 23 ವರ್ಷದ ಗಿಲ್‌ ಸಾಮಾ​ಜಿಕ ತಾಣ​ಗ​ಳಲ್ಲಿ ಮಾಹಿ​ತಿ​ ನೀ​ಡಿ​ದ್ದು, ‘ಸ್ಪೈಡರ್‌ ಮ್ಯಾನ್‌: ಅಕ್ರಾಸ್‌ ದಿ ಸ್ಪೈಡರ್‌ ವರ್ಸ್‌​’ ಸಿನಿ​ಮಾಕ್ಕೆ ಧ್ವನಿ ನೀಡಿದ್ದೇನೆ ಎಂದಿ​ದ್ದರು. ಹಿಂದಿ, ಪಂಜಾಬಿ ಭಾಷೆ​ಗ​ಳಲ್ಲಿ ಸಿನಿಮಾ ರಿಲೀಸ್‌ ಆಗ​ಲಿದೆ. 

WTC Final: ಜಡೇಜಾ/ಅಶ್ವಿನ್‌ ಇಬ್ಬರಲ್ಲಿ ಯಾರಿಗೆ ಸ್ಥಾನ? ಸನ್ನಿ ಆಯ್ಕೆ ಮಾಡಿದ ಭಾರತ ತಂಡ ಹೇಗಿದೆ?

ಇದೀಗ ಭಾರತೀಯ ಅವತರಣಿಕೆಯ ‘ಸ್ಪೈಡರ್‌ ಮ್ಯಾನ್‌: ಅಕ್ರಾಸ್‌ ದಿ ಸ್ಪೈಡರ್‌ ವರ್ಸ್‌​’ ಸಿನಿಮಾ ಪ್ರೊಮೋಷನ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ನಿಹಾರಿಕಾ ಎನ್‌ಎಂ ಜತೆ ಶುಭ್‌ಮನ್‌ ಗಿಲ್ ರೊಮ್ಯಾಂಟಿಕ್ ಡೇಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ನಿಹಾರಿಕಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. 

ಶುಭ್‌ಮನ್ ಗಿಲ್ ಹಾಗೂ ನಿಹಾರಿಕಾ ಅವರ ಜತೆಗಿನ ಮಾತುಕತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, 39 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಿಹಾರಿಕಾಗಾಗಿ ಶುಭ್‌ಮನ್ ಗಿಲ್ ಸ್ವತಃ ಸ್ಪೈಡರ್‌ ಮನ್‌ ಆಗಿ ಬದಲಾಗಿದ್ದಾರೆ. 

ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್‌ ಸದ್ಯ ಲಂಡನ್‌ನಲ್ಲಿದ್ದು, ಇದೇ ಜೂನ್ 07ರಿಂದ ದಿ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮೂರು ಸ್ಪೋಟಕ ಶತಕ ಸಿಡಿಸುವ ಮೂಲಕ ಅತ್ಯದ್ಭುತ ಲಯದಲ್ಲಿರುವ ಶುಭ್‌ಮನ್ ಗಿಲ್, ಇದೀಗ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲೂ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ. 

WTC Final: ಟೆಸ್ಟ್‌ ಫೈನಲ್‌ಗೆ ಬ್ಯಾಟರ್‌ ಸ್ನೇಹಿ ಪಿಚ್‌?

ಇತ್ತೀಚೆಗಷ್ಟೇ ಐಸಿಸಿ ಜತೆಗೆ ಮಾತನಾಡಿರುವ ಶುಭ್‌ಮನ್ ಗಿಲ್, "ಐಪಿಎಲ್‌ನಲ್ಲಿ ಮೂಡಿಬಂದ ಪ್ರದರ್ಶನದಿಂದಾಗಿ ನನಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಆದರೆ ಇದು ಬೇರೆಯದ್ದೇ ರೀತಿಯ ಲೆಕ್ಕಾಚಾರ ಹಾಗೂ ಸಂಪೂರ್ಣ ವಿಭಿನ್ನವಾದ ಆಟವಾಗಿದೆ ಎಂದು ಗಿಲ್‌ ಹೇಳಿದ್ದಾರೆ.

ಶುಭ್‌ಮನ್‌ ಗಿಲ್ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ನ್ಯೂಜಿಲೆಂಡ್ ವಿರುದ್ದ ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಶುಭ್‌ಮನ್ ಗಿಲ್ ಕ್ರಮವಾಗಿ 28 ಹಾಗೂ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಚೊಚ್ಚಲ ಟೆಸ್ಟ್ ವಿಶ್ವಕಪ್‌ನಲ್ಲಿ ಭಾರತ ಎದುರು ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು 8 ವಿಕೆಟ್ ಜಯ ಸಾಧಿಸಿತ್ತು. ಇದೀಗ ಗಿಲ್ ಈ ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದು, ಆಸ್ಟ್ರೇಲಿಯಾ ಎದುರು ದೊಡ್ಡ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.

Latest Videos
Follow Us:
Download App:
  • android
  • ios