Asianet Suvarna News Asianet Suvarna News

ಸಿಕ್ಕ ಅವಕಾಶಗಳನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್‌..!

ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಸಂಜು ಸ್ಯಾಮ್ಸನ್ ಪದೇ ಪದೇ ವಿಫಲ
ಸಿಕ್ಕ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿರುವ ಕೇರಳ ಕ್ರಿಕೆಟಿಗ
ಒನ್ ಡೇ ಕ್ರಿಕೆಟ್‌ನಲ್ಲಿ ಸಕ್ಸಸ್, ಟಿ20 ಕ್ರಿಕೆಟ್‌ನಲ್ಲಿ ಫೇಲ್

Team India Cricketer Sanju Samson fail to grab the opportunity kvn
Author
First Published Aug 11, 2023, 3:20 PM IST

ಬೆಂಗಳೂರು(ಆ.11) ಸದ್ಯ ಟೀಂ ಇಂಡಿಯಾದಲ್ಲಿರುವಷ್ಟು ಕಾಂಪಿಟೇಷನ್​ ಬೇರ್ಯಾವ ಟೀಮ್​ನಲ್ಲೂ ಇಲ್ಲ. ಒಂದೊಂದು ಸ್ಥಾನಕ್ಕಾಗಿ ಇಬ್ಬಿಬ್ಬರು ಆಟಗಾರರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಟೀಮಲ್ಲಿ ಸ್ಥಾನ ಸಿಗೋದೆ ಕಷ್ಟ. ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​​ ಸಿಗೋದು ಇನ್ನೂ ಕಷ್ಟ. ಆದ್ರೆ, ಸಂಜು ಸ್ಯಾಮ್ಸನ್​ ಮಾತ್ರ ಸಿಕ್ಕ ಅವಕಾಶಗಳನ್ನ ಕೈಯಾರೆ ಹಾಳು ಮಾಡಿಕೊಳ್ತಿದ್ದಾರೆ. 

ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಿಂದ ಸಂಜು ಡ್ರಾಪ್ ಮಾಡಿದಕ್ಕೆ ಟೀಕೆಗಳು ಕೇಳಿ ಬಂದಿದ್ವು. ಬಳಿಕ ಉಳಿದ ಎರಡು ಪಂದ್ಯದಲ್ಲೂ ಆಡಿಸಲಾಯ್ತು. ಅದರಲ್ಲಿ ಒಂದು ಅರ್ಧಶತಕವನ್ನೂ ಹೊಡೆದಿದ್ದರು. ಈ ಪರ್ಫಾಮೆನ್ಸ್​ನಿಂದಾಗಿ ಟಿ20 ಸರಣಿಯಲ್ಲಿ ಸಂಜುಗೆ ಅವಕಾಶ ನೀಡಿದ್ರೂ ಅಬ್ಬರಿಸ್ತಿಲ್ಲ. ಮೊದಲ ಪಂದ್ಯದಲ್ಲಿ ರನೌಟ್ ಆಗಿದ್ದ ಸಂಜು, 2ನೇ ಪಂದ್ಯದಲ್ಲಿ ಅಗತ್ಯವೇ ಇಲ್ಲದ ಶಾಟ್ ಬಾರಿಸಲು ಹೋಗಿ ಸ್ಟಂಪ್​ ಔಟ್ ಆದ್ರು. 3ನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶವೇ ಸಿಗಲಿಲ್ಲ. ಇದರಿಂದ ಸಂಜು ವಿರುದ್ಧ ಫ್ಯಾನ್ಸ್ ಮಾತ್ರವಲ್ಲ, ಮಾಜಿ ಕ್ರಿಕೆಟರ್ಸ್ ಸಹ ಗರಂ ಆಗಿದ್ದಾರೆ. ಈ ಎರಡು ಇನ್ನಿಂಗ್ಸ್​ಗಳಲ್ಲಿ ಅಷ್ಟೇ ಅಲ್ಲ. ಓವರ್​ ಆಲ್ ಟಿ20 ಕರಿಯರ್​​​ನಲ್ಲಿ ಸಂಜು ಈವರೆಗು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. 

ಯುವರಾಜ್ ಸಿಂಗ್ ಅವರಂತ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ..! ಟೀಂ ಇಂಡಿಯಾ ಸಮಸ್ಯೆ ಬಿಚ್ಚಿಟ್ಟ ರೋಹಿತ್ ಶರ್ಮಾ

ಟಿ20ಯಲ್ಲಿ ಸಂಜು ಫ್ಲಾಪ್ ಶೋ...! 

ಒನ್​ಡೇ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ, ಟಿ20 ಫಾರ್ಮೆಟ್​​ನಲ್ಲಿ ಮಾತ್ರ ಮಕಾಡೆ ಮಲಗಿದ್ದಾರೆ. ಟಿ20ಯಲ್ಲಿ ಈವರೆಗೂ 18 ಇನ್ನಿಂಗ್ಸ್​ಗಳಲ್ಲಿ ಸಂಜು ಸ್ಯಾಮ್ಸನ್‌ ಬ್ಯಾಟ್ ಬೀಸಿದ್ದು, ಕೇವಲ 18.82ರ ಸರಾಸರಿಯಲ್ಲಿ 320 ರನ್ ಕಲೆಹಾಕಿದ್ದಾರೆ. ಒಂದು ಅರ್ಧಶತಕವಿದೆ. ಅದು 2022ರಲ್ಲಿ ದುರ್ಬಲ ಐರ್ಲೆಂಡ್ ವಿರುದ್ಧ ಬಂದಿದ್ದು.

ಇದೇ ಬ್ಯಾಟಿಂಗ್​ ಸ್ಲಾಟ್ ಬೇಕು ಅಂದ್ರೆ ಆಗಲ್ಲ...! 

ಸಂಜು ಟಿ20ಯಲ್ಲಿ  ಮಿಂಚದೇ ಇರೋದಕ್ಕೆ ಅವ್ರ ಬ್ಯಾಟಿಂಗ್ ಕ್ರಮಾಂಕವೂ ಕಾರಣ ಎನ್ನಲಾಗ್ತಿದ. ಯಾಕಂದ್ರೆ, ಸಂಜುಗೆ ಟಿ20ಯಲ್ಲಿ ನಿರ್ದಿಷ್ಟ ಕ್ರಮಾಂಕವನ್ನ ನಿಗದಿಯಾಗಿಲ್ಲ. 18 ಇನ್ನಿಂಗ್ಸ್​ಗಳಲ್ಲಿ ಆರಂಭಿಕ ಸ್ಥಾನದಿಂದ ಹಿಡಿದು, 7ನೇ ಕ್ರಮಾಂಕದವರೆಗು ಆಡಿದ್ದಾರೆ.  ಐಪಿಎಲ್‌​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಂಜು 3ನೇ ಕ್ರಮಾಂಕದಲ್ಲಿ ಮಿಂಚಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಪರ ಮಾತ್ರ  ಸಂಜುಗೆ ಫಿಕ್ಸಡ್​​ ಸ್ಲಾಟ್​ ಇಲ್ಲ. 

ಟೀಂ ಇಂಡಿಯಾ ಅಲ್ಲವೇ ಅಲ್ಲ..! ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್‌..!

ಸಂಜುಗೆ ಯಾವುದೇ ಸ್ಲಾಟ್ ಫಿಕ್ಸ್ ಆಗಿಲ್ಲ ಅನ್ನೊದೇನೋ ನಿಜ. ಆದ್ರೆ, ಹೀಗಿರೋ ಪರಿಸ್ಥಿತಿಯಲ್ಲಿ ಇದೇ ಸ್ಲಾಟ್ ಬೇಕು ಅಂದ್ರೆ ಅಗಲ್ಲ. ಯಾವುದೇ ಸ್ಲಾಟ್​ ಸಿಕ್ಕರೂ ಅಬ್ಬರಿಸಲೇಬೇಕು. ಇಲ್ಲ ಅಂದ್ರೆ, ತಂಡದಿಂದ ಜಾಗ ಖಾಲಿ ಮಾಡದೇ ಬೇರೆ ದಾರಿ ಇರಲ್ಲ. ಅದೇನೆ ಇರಲಿ, ಮುಂದಿನ ಎರಡು ಟಿ20 ಪಂದ್ಯದಲ್ಲಾದ್ರೂ ಸಂಜು ಅಬ್ಬರಿಸಲಿ. ಆ ಮೂಲಕ ತಮ್ಮ ಸಾಮರ್ಥ್ಯ ಪ್ರೂವ್ ಮಾಡ್ಲಿ ಅನ್ನೋದೇ ನಮ್ಮ ಆಶಯ.

Follow Us:
Download App:
  • android
  • ios