ಇಂಗ್ಲೆಂಡ್ ಕೌಂಟಿ: ಸರ್ರೆ ಪರ ಕಣಕ್ಕಿಳಿದು ದಾಖಲೆ ಬರೆದ ರವಿಚಂದ್ರನ್ ಅಶ್ವಿನ್
* ಕೌಂಟಿ ಕ್ರಿಕೆಟ್‌ನಲ್ಲೂ ಕಮಾಲ್ ಮಾಡಿದ ರವಿಚಂದ್ರನ್ ಅಶ್ವಿನ್
* ಕೌಂಟಿ ಇತಿಹಾಸದಲ್ಲೇ ಮೊದಲ ಓವರ್ ಸ್ಪಿನ್ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ
* ಸರ್ರೆ ತಂಡದ ಪರ ಕಣಕ್ಕಿಳಿದಿರುವ ಅಶ್ವಿನ್
ಲಂಡನ್(ಜು.12): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ನಡೆಸಲು ಭಾರತದ ಅಗ್ರ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕೌಂಟಿ ತಂಡ ಸರ್ರೆ ಪರ ಒಂದು ಪಂದ್ಯವನ್ನಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲೇ ಅಶ್ವಿನ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಭಾನುವಾರದಿಂದ ಆರಂಭಗೊಂಡ ಕೌಂಟಿ ಚಾಂಪಿಯನ್‌ಶಿಪ್‌ನ ಸೋಮರ್‌ಸೆಟ್ ವಿರುದ್ಧದ 4 ದಿನಗಳ ಪಂದ್ಯದಲ್ಲಿ ಅಶ್ವಿನ್ ಕಣಕ್ಕಿಳಿದಿದ್ದಾರೆ. 11 ವರ್ಷಗಳ ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಮೊದಲ ಓವರ್ ಮಾಡಿದ ಸ್ಪಿನ್ನರ್ ಎನ್ನುವ ಕೀರ್ತಿಗೆ ಅಶ್ವಿನ್ ಭಾಜನರಾಗಿದ್ದಾರೆ. ಸರ್ರೆ ಪರ ಬೌಲಿಂಗ್ ಆರಂಭಿಸಿದ ಅಶ್ವಿನ್, ಮೊದಲ ದಿನದಾಟದಲ್ಲಿ 28 ಓವರ್ ಬೌಲ್ ಮಾಡಿ, 5 ಮೇಡನ್‌ನೊಂದಿಗೆ 70 ರನ್ ನೀಡಿ 1 ವಿಕೆಟ್ ಕಿತ್ತರು.
ಮೊಹಮ್ಮದ್ ಅಜರ್‌ಗೆ ಜಾಕ್‌ಪಾಟ್; BCCI ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಆಯ್ಕೆ!
ರವಿಚಂದ್ರನ್ ಅಶ್ವಿನ್ ಈ ಮೊದಲು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಹಾಗೂ ವರ್ಸೆಸ್ಟರ್ ತಂಡದ ಪರ ಕಣಕ್ಕಿಳಿದು ಸೈ ಎನಿಸಿಕೊಂಡಿದ್ದರು. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್‌ನಲ್ಲೇ ಬೀಡುಬಿಟ್ಟಿದ್ದು, ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ರವಿಚಂದ್ರನ್ ಅಶ್ವಿನ್ ಮುಂಬರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದಿದ್ದಾರೆ.