Test Championship  

(Search results - 158)
 • Ind vs Eng England Pacer Mark Wood to miss third Test at Headingley kvn

  CricketAug 23, 2021, 5:01 PM IST

  Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

  ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯವು ಆಗಸ್ಟ್ 25ರಿಂದ ಆರಂಭವಾಗಲಿದ್ದು,ಈ ಹೈವೋಲ್ಟೇಜ್ ಪಂದ್ಯಕ್ಕೆ ಹೆಡಿಂಗ್ಲೆ ಆತಿಥ್ಯವನ್ನು ವಹಿಸಿದೆ. ಹೀಗಿರುವಾಗಲೇ ಆತಿಥೇಯ ತಂಡಕ್ಕೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.
   

 • Ind vs Eng England Set 209 Runs Target Team Need 157 runs away from 1st Test Victory kvn

  CricketAug 8, 2021, 7:54 AM IST

  Ind vs Eng ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾಗೆ 209 ರನ್‌ಗಳ ಗುರಿ

  2ನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ, 4ನೇ ದಿನದಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 157 ರನ್‌ ಗಳಿಸಬೇಕಿದೆ. ಭಾನುವಾರ ಅಂತಿಮ ದಿನವಾಗಿದ್ದು ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಉತ್ಸಾಹದಲ್ಲಿದೆ.
   

 • Virat Kohli Led Indian Cricket Team clash with England in the first Test of the 2nd WTC cycle kvn

  CricketAug 4, 2021, 1:21 PM IST

  Ind vs Eng Test: ಇಂದಿನಿಂದ ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್ ಆರಂಭ

  ಇಂಗ್ಲೆಂಡ್‌ ಸರಣಿ ಬಳಿಕ ಐಪಿಎಲ್‌ ನಡೆಯಲಿದ್ದು, ಆನಂತರ ಐಸಿಸಿ ಟಿ20 ವಿಶ್ವಕಪ್‌ ನಡೆಯಲಿದೆ. ಕೊಹ್ಲಿ ಪ್ರಶಸ್ತಿ ಗೆದ್ದು ತಮ್ಮ ನಾಯಕತ್ವ ಗುಣಗಳ ಬಗ್ಗೆ ಎದ್ದಿರುವ ಸಂಶಯಗಳಿಗೆ ಉತ್ತರಿಸಬೇಕಿದೆ.

 • England announce squad for first two Test against Team India kvn

  CricketJul 21, 2021, 7:08 PM IST

  ಭಾರತ ವಿರುದ್ದದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

  ಜೋಫ್ರಾ ಆರ್ಚರ್‌ ಭಾರತ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳುವಷ್ಟು ಸಂಪೂರ್ಣವಾಗಿ ಫಿಟ್‌ ಆಗಿಲ್ಲ. ಇನ್ನು ಮತ್ತೋರ್ವ ವೇಗಿ ಕ್ರಿಸ್ ವೋಕ್ಸ್‌ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲವಾದರೂ ಇನ್ನುಳಿದ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಕೂಡಿಕೊಳ್ಳುವ ಸುಳಿವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ನೀಡಿದೆ.

 • India vs England series to kick off the second edition of ICC World Test Championship kvn

  CricketJul 14, 2021, 3:04 PM IST

  ಇಂಡೋ-ಇಂಗ್ಲೆಂಡ್ ಸರಣಿಯಿಂದಲೇ 2ನೇ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ

  2021-2023ನೇ ಸಾಲಿನ ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಅಂಕಗಳ ಹಂಚಿಕೆಯ ವಿಚಾರವನ್ನು ಖಚಿತಪಡಿಸಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಪ್ರತಿ ಪಂದ್ಯಕ್ಕೂ 12 ಅಂಕಗಳನ್ನು ನಿಗದಿಪಡಿಸಲಾಗಿದೆ. ಟೆಸ್ಟ್ ಗೆಲುವು ದಾಖಲಿಸಿದ ತಂಡ 12 ಅಂಕ ಪಡೆಯಲಿದೆ, ಪಂದ್ಯ ಡ್ರಾ ಆದರೆ 4 ಅಂಕ, ಟೈ ಆದರೆ  ಉಭಯ ತಂಡಗಳು ತಲಾ 8 ಅಂಕಗಳನ್ನು ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.

 • ICC set to award same points for each match won during 2nd World Test Championship kvn

  CricketJul 2, 2021, 10:12 AM IST

  ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

   ಈ ಮೊದಲು ಪ್ರತಿ ಸರಣಿಗೆ 120 ಅಂಕಗಳನ್ನು ನಿಗದಪಡಿಸಲಾಗಿತ್ತು. ಸರಣಿಯಲ್ಲಿ 5 ಪಂದ್ಯವಿದ್ದರೂ 120 ಅಂಕ, 2 ಪಂದ್ಯವಿದ್ದರೂ 120 ಅಂಕಕ್ಕೆ ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ.

 • New Zealand Cricketer Tim Southee auctions signed his WTC Final jersey to help 8 year old in cancer fight kvn

  CricketJun 29, 2021, 4:17 PM IST

  8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥಿ

  32 ವರ್ಷದ ಸೌಥಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಈ ಜೀವಪರ ಕಾಳಜಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೌಥಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ. ಈ ಜೆರ್ಸಿಯ ಮೇಲೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನಾಡಿದ ಎಲ್ಲಾ ನ್ಯೂಜಿಲೆಂಡ್ ಆಟಗಾರರ ಹಸ್ತಾಕ್ಷರವಿದೆ.
   

 • Team India to play intra squad games in Durham ahead of England Tests kvn

  CricketJun 26, 2021, 12:54 PM IST

  ಇಂಗ್ಲೆಂಡ್‌ ಸರಣಿ ಮುನ್ನ ಭಾರತಕ್ಕೆ 2 ಅಭ್ಯಾಸ ಪಂದ್ಯ

  ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಫೈನಲ್‌ಗೂ ಮುನ್ನ ಭಾರತ ತನ್ನ ಆಟಗಾರರನ್ನೇ 2 ತಂಡಗಳನ್ನಾಗಿ ಮಾಡಿ ಅಭ್ಯಾಸ ಪಂದ್ಯವನ್ನಾಡಿತ್ತು.

 • Team India schedule for second edition of the World Test Championship announced kvn

  CricketJun 26, 2021, 11:32 AM IST

  2021-23ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ

  ಇದೀಗ ಎರಡನೇ ಆವೃತ್ತಿಯ ಅಂದರೆ 2021-23ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಒಟ್ಟು 6 ಸರಣಿಗಳನ್ನು ಆಡಲಿದೆ. ತವರಿನಲ್ಲಿ ಮೂರು ಟೆಸ್ಟ್‌ ಸರಣಿ ಹಾಗೂ ತವರಿನಾಚೆ 3 ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಆಡಲಿದೆ.

 • ICC congratulates New Zealand Cricket Team for clinching World Test Championship title kvn

  CricketJun 26, 2021, 8:38 AM IST

  ಟೆಸ್ಟ್‌ ವಿಶ್ವಕಪ್‌ ಗೆದ್ದ ಮೇಲೆ ಕಿವೀಸ್‌ ರಾತ್ರಿಯಿಡೀ ಪಾರ್ಟಿ!

  ವಿಮಾನದಲ್ಲಿ ಕಿವೀಸ್‌ ತಂಡ ಐಸಿಸಿ ಬಹುಮಾನವಾಗಿ ನೀಡಿದ ಮೇಸ್‌ (ಗದೆ) ಅನ್ನು ಪ್ರತ್ಯೇಕ ಆಸನದಲ್ಲಿ ಇಡಲಾಗಿತ್ತು. ಅಲ್ಲದೇ ಆ ಗದೆಗೆ ಮೈಕಲ್‌ ಮೇಸನ್‌ ಎಂದು ಹೆಸರು ಕೂಡ ಇಡಲಾಗಿದೆ.

 • WTC Final Team India Captain Virat Kohli hints at overhaul of Test side kvn

  CricketJun 25, 2021, 9:18 AM IST

  ಭಾರತ ಟೆಸ್ಟ್‌ ತಂಡದಲ್ಲಿ ಮೇಜರ್ ಸರ್ಜರಿ ಸೂಚನೆ ಕೊಟ್ಟ ಕ್ಯಾಪ್ಟನ್ ಕೊಹ್ಲಿ..!

  ‘ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಗತಿ ಬದಲಾಯಿಸುವುದು, ಸಾಮರ್ಥ್ಯ ಪ್ರದರ್ಶಿಸುವುದು ಆಟಗಾರನಿಗೆ ಬಹುಮುಖ್ಯವಾದುದು. ವರ್ಷಗಳ ಕಾಲ ಅಗ್ರ ತಂಡವಾಗಿದ್ದು, ಇದ್ದಕ್ಕಿದ್ದಂತೆ ಗುಣಮಟ್ಟದಲ್ಲಿ ಕುಸಿತ ಕಾಣುವುದು ಒಳ್ಳೆಯ ಲಕ್ಷಣವಲ್ಲ’ ಎಂದೂ ಕೊಹ್ಲಿ ಬೇಗುದಿ ಹೊರಹಾಕಿದ್ದಾರೆ.
   

 • Team India Captain Virat Kohli calls for best of 3 finals to decide future World Test Championships kvn

  CricketJun 25, 2021, 8:36 AM IST

  ಟೆಸ್ಟ್‌ ವಿಶ್ವ ವಿಜೇತರ ನಿರ್ಧಾರಕ್ಕೆ ಒಂದೇ ಪಂದ್ಯ ಸಾಲದು: ವಿರಾಟ್ ಕೊಹ್ಲಿ

  ‘ನಮ್ಮ ತಂಡ ಇಷ್ಟು ವರ್ಷಗಳ ಮಾಡಿದ ಸಾಧನೆಯನ್ನು ಖಂಡಿತವಾಗಿಯೂ ಕೇವಲ ಒಂದು ಪಂದ್ಯದಿಂದ ಅಳೆಯಲು, ನಿರ್ಧರಿಸಲಾಗದು. ನಾನಿದನ್ನು ನಮ್ಮ ತಂಡ ಫೈನಲ್‌ ಸೋತಿದೆ ಎಂಬ ಕಾರಣಕ್ಕಾಗಿ ಹೇಳುತ್ತಿಲ್ಲ. ಎರಡು ಅಗ್ರ ತಂಡಗಳ ಸಾಮರ್ಥ್ಯವನ್ನು ಒಂದೇ ಪಂದ್ಯದ ಫಲಿತಾಂಶದ ಆಧಾರದಲ್ಲಿ ನಿರ್ಣಯಿಸುವುದು ಸರಿಯಲ್ಲ ಎಂಬುದು ನನ್ನ ಅಭಿಮತ’ ಎಂದು ಕೊಹ್ಲಿ ಸಮರ್ಥಿಸಿಕೊಂಡರು.

 • Team India Spinner Ravichandran Ashwin ends inaugural WTC cycle as leading wicket taker kvn

  CricketJun 24, 2021, 6:15 PM IST

  ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿಚಂದ್ರನ್‌ ಅಶ್ವಿನ್‌

  ಸೌಥಾಂಪ್ಟನ್‌: ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ 2019-2021ನೇ ಸಾಲಿನ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ವೇಳೆ 4 ವಿಕೆಟ್ ಕಬಳಿಸುವುದರೊಂದಿಗೆ ಅಶ್ವಿನ್ ಅತಿಹೆಚ್ಚು ಬಲಿಪಡೆದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ.
  34 ವರ್ಷದ ತಮಿಳುನಾಡು ಮೂಲದ ಸ್ಪಿನ್ನರ್ ಅಶ್ವಿನ್‌ ಚೊಚ್ಚಲ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ 14 ಪಂದ್ಯಗಳನ್ನಾಡಿ 71 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ ಅವರನ್ನು ಹಿಂದಿಕ್ಕಿ ಟೆಸ್ಟ್‌ ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ದಾಖಲೆ ನಿರ್ಮಿಸಿದ್ದಾರೆ.
  ಭಾರತ ವಿರುದ್ದ ನ್ಯೂಜಿಲೆಂಡ್ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್‌ ಮುಕ್ತಾಯವಾಗಿದೆ. ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳ ವಿವರ ಇಲ್ಲಿದೆ ನೋಡಿ.

 • 5 reasons why Team India lost the WTC final against New Zealand in Southampton kvn

  CricketJun 24, 2021, 5:13 PM IST

  ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಸೋಲಿಗೆ ಕಾರಣವಾಯ್ತು ಈ 5 ಅಂಶಗಳು..!

  ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ಐಸಿಸಿ ನಾಕೌಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಕೊನೆಗೂ ಕೇನ್‌ ವಿಲಿಯಮ್ಸನ್‌ ನೇತೃತ್ವದ ಕಿವೀಸ್‌ ಪಾಲಾಗಿದೆ. 
  ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎದುರು ಸರಣಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಫೈನಲ್‌ನಲ್ಲಿ ಮುಗ್ಗರಿಸಿದ್ದು ಹೇಗೆ? ಟೀಂ ಇಂಡಿಯಾ ಸೋಲಿಗೆ ಕಾರಣವಾದ ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • 5 reasons why New Zealand won the WTC final against India in Southampton kvn

  CricketJun 24, 2021, 3:16 PM IST

  ನ್ಯೂಜಿಲೆಂಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲುವಿಗೆ ಕಾರಣವಾಯ್ತು ಈ 5 ಅಂಶಗಳು..!

  ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ವಿರುದ್ದ ನ್ಯೂಜಿಲೆಂಡ್ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೆಸ್ಟ್‌ ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಳೆದ 6 ವರ್ಷಗಳಲ್ಲಿ ಎರಡು ಬಾರಿ ನ್ಯೂಜಿಲೆಂಡ್ ತಂಡವು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆದರೆ ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಈ ಎಲ್ಲಾ ಅಡೆತಡೆಗಳನ್ನು ಮೀರಿ ನ್ಯೂಜಿಲೆಂಡ್ ಟೆಸ್ಟ್‌ ವಿಶ್ವಕಪ್ ಎತ್ತಿ ಹಿಡಿದಿದೆ.

  ಎರಡು ದಿನಗಳ ಕಾಲ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದರೂ ಬಲಿಷ್ಠ ಭಾರತ ತಂಡದೆದುರು ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಗೆದ್ದಿದ್ದು ಹೇಗೆ?, ಕಿವೀಸ್‌ ಗೆಲುವಿಗೆ ಕಾರಣವಾದ 5 ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ