ಮೊಹಮ್ಮದ್ ಅಜರ್‌ಗೆ ಜಾಕ್‌ಪಾಟ್; BCCI ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಆಯ್ಕೆ!
- ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಮರು ಆಯ್ಕೆಯಾದ ಅಜರ್‌ಗೆ ಜಾಕ್‌ಪಾಟ್
- ಬಿಸಿಸಿಐ ದೇಶಿ ಟೂರ್ನಿ ಸಮಿತಿಯ ಮೇಲ್ವಿಚಾರಕನಾಗಿ ಆಯ್ಕೆ
- ಭ್ರಷ್ಟಾಚಾರಾ ಆರೋಪದಡಿ ಅಮಾನತು ಗೊಂಡಿದ್ದ ಅಜರುದ್ದೀನ್
ಹೈದರಾಬಾದ್(ಜು.11): ಮಾಜಿ ಕ್ರಿಕೆಟಿಗ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರನ್ನು ಬಿಸಿಸಿಐ ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿದೆ. ಈ ಮೂಲಕ ಭ್ರಷ್ಟಾಚಾರ ಆರೋಪದಡಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ವಜಾಗೊಂಡು ಮತ್ತೆ ಮರುನೇಮಕ ಗೊಂಡಿದ್ದ ಅಜರ್‌ಗೆ ಇದೀಗ ಜಾಕ್‌ಪಾಟ್ ಸಿಕ್ಕಿದೆ.
ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಸಸ್ಪೆಂಡ್..!
7 ಮಂದಿ ಸದಸ್ಯರ ಬಿಸಿಸಿಐ ಕಾರ್ಯಕಾರಣಿ ಸಮಿತಿ ಸೇರಿಕೊಂಡಿರುವ ಮೊಹಮ್ಮದ್ ಅಜರುದ್ದೀನ್, 2021-22ರ ದೇಶಿ ಟೂರ್ನಿಯ ಮೇಲ್ವಿಚಾರಣೆ ಮಾಡಲಿದ್ದಾರೆ. ಅಜರ್ ಜೊತೆ ಜಯದೇವ್ ಷಾ, ರೋಹನ್ ಜೇಟ್ಲಿ, ಯುಧ್ವೀರ್ ಸಿಂಗ್, ದೇವಾಜಿತ್ ಸೈಕಿಯಾ, ಅವಿಶೇಕ್ ದಾಲ್ಮಿಯಾ ಮತ್ತು ಕರ್ನಾಟಕ ಕ್ರಿಕಟ್ ಸಂಸ್ಥೆಯ ಸಂತೋಷ್ ಮೆನನ್ ಇತರ ಸದಸ್ಯರಾಗಿದ್ದಾರೆ.
ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಅಜರುದ್ದೀನ್ ಮರು ನೇಮಕ..
ಕೊರೋನಾ ಕಾರಣ ಕಡಿತಗೊಳಿಸಿರುವ ದೇಶಿ ಕ್ರಿಕೆಟಿಗರ ಪರಿಹಾರ ಪ್ಯಾಕೇಜ್ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಈ ಸಮಿತಿ ಮೇಲ್ವಿಚಾರಣೆ ನಡೆಸಲಿದೆ. ಕಳೆದ ವರ್ಷ ದೇಶಿ ಟೂರ್ನಿ ಆಯೋಜನೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಕ್ರಿಕೆಟಿಗ ಒಪ್ಪಂದದ ಗಳಿಕೆ, ಪರಿಹಾರ ಪ್ಯಾಕೇಜ್ ಸೇರಿದಂತೆ ಕ್ರಿಕೆಟಿಗರ ಹಾಗೂ ದೇಶಿ ಟೂರ್ನಿ ಕುರಿತು ಮೇಲ್ವಿಚಾರಣೆ ಮಾಡಲಿದೆ