ದುಬೈ[ನ.14]: ಹಾರ್ದಿಕ್‌ ಪಾಂಡ್ಯ ಸದ್ಯ ಭಾರ​ತದ ಶ್ರೇಷ್ಠ ಆಲ್ರೌಂಡರ್‌ ಎಂದು ಕರೆ​ಸಿ​ಕೊ​ಳ್ಳುವ ಕ್ರಿಕೆ​ಟಿಗ. ಆದರೆ ನೂತ​ನ​ವಾಗಿ ಪ್ರಕಟಗೊಂಡಿ​ರುವ ಐಸಿಸಿ ಟಿ20 ಆಲ್ರೌಂಡರ್‌ಗಳ ರ‍್ಯಾಂಕಿಂಗ್ ಪಟ್ಟಿ​ಯ​ಲ್ಲಿ ಪಾಂಡ್ಯ​ಗಿಂತ ಉನ್ನತ ಸ್ಥಾನ​ವನ್ನು ನಾಯಕ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಪಡೆ​ದು​ಕೊಂಡಿ​ದ್ದಾರೆ. 

ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!

ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಎಲ್ಲ​ರಿ​ಗಿಂತ ಮುಂದಿ​ರುವ ಆಟ​ಗಾರ ಎಂದರೆ ಅದು ಕೊಹ್ಲಿ. ಅವರು 22ನೇ ಸ್ಥಾನ​ದ​ಲ್ಲಿ​ದ್ದಾರೆ. ಕೃನಾಲ್‌ ಪಾಂಡ್ಯ 2ನೇ ಶ್ರೇಷ್ಠ ಆಲ್ರೌಂಡರ್‌. ಅವರು 41ನೇ ಸ್ಥಾನ ಪಡೆ​ದಿ​ದ್ದಾರೆ. ರೋಹಿತ್‌ ಶರ್ಮಾ 48ನೇ ಸ್ಥಾನ​ದ​ಲ್ಲಿ​ದ್ದರೆ, ಹಾರ್ದಿಕ್‌ ವಿಶ್ವ ರ‍್ಯಾಂಕಿಂಗ್ ಪಟ್ಟಿ​ಯಲ್ಲಿ 58ನೇ ಸ್ಥಾನ ಪಡೆ​ದಿ​ದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟರ್ ಆಸೋಸಿಯೇಶನ್‌ಗೆ ವ್ಯಾಟ್ಸನ್ ಅಧ್ಯಕ್ಷ!

ಬ್ಯಾಟಿಂಗ್‌ನಲ್ಲಿ ರೋಹಿತ್‌ ಹಾಗೂ ಕೊಹ್ಲಿ ಅಸಾ​ಧಾ​ರಣ ಪ್ರದ​ರ್ಶನ ತೋರು​ತ್ತಿ​ದ್ದರೂ, ಬೌಲಿಂಗ್‌ನಲ್ಲಿ ಇಬ್ಬರ ಸಾಧನೆ ಹೇಳಿ​ಕೊ​ಳ್ಳು​ವಂತ​ದ್ದಲ್ಲ. ಕೊಹ್ಲಿ ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ ಕೊನೆ ಬಾರಿಗೆ ಬೌಲ್‌ ಮಾಡಿದ್ದು 2016ರ ವಿಶ್ವ​ಕಪ್‌ನಲ್ಲಿ. ವಿಂಡೀಸ್‌ ವಿರುದ್ಧ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಅವರು 1.4 ಓವರ್‌ ಎಸೆ​ದಿ​ದ್ದರು. ರೋಹಿತ್‌ ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ ಕೊನೆ ಬಾರಿಗೆ ಬೌಲ್‌ ಮಾಡಿದ್ದು 2012ರ ಟಿ20 ವಿಶ್ವ​ಕಪ್‌ನಲ್ಲಿ. ಹೀಗಿ​ರು​ವಾಗ ಇಬ್ಬ​ರಿಗೂ ಆಲ್ರೌಂಡರ್‌ಗಳ ಪಟ್ಟಿ​ಯಲ್ಲಿ ಉನ್ನತ ಸ್ಥಾನ ಸಿಕ್ಕಿ​ರು​ವುದು ಅಚ್ಚ​ರಿಗೆ ಕಾರ​ಣ​ವಾ​ಗಿದೆ.

ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರು​ದ್ಧದ ಟಿ20 ಸರಣಿ ವೇಳೆ ಗಾಯ​ಗೊಂಡ ಪಾಂಡ್ಯ ಚೇತ​ರಿ​ಸಿ​ಕೊ​ಳ್ಳು​ತ್ತಿ​ದ್ದು ಶೀಘ್ರದಲ್ಲಿ ತಂಡಕ್ಕೆ ಮರ​ಳುವ ನಿರೀಕ್ಷೆಯಲ್ಲಿ​ದ್ದಾರೆ. ಪಾಂಡ್ಯ ತಂಡಕ್ಕೆ ವಾಪ​ಸಾದ ಬಳಿಕ ರ‍್ಯಾಂಕಿಂಗ್ ಪಟ್ಟಿ​ಯಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ. ಐಸಿಸಿ ಟಿ20 ಆಲ್ರೌಂಡರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಫ್ಘಾನಿಸ್ತಾನದ ಮೊಹಮ್ಮದ್ ನಬೀ 339 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್’ವೆಲ್ 333 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.