ಸಿಡ್ನಿ(ನ.12): ಆಸ್ಟ್ರೇಲಿಯಾ ಕ್ರಿಕೆಟಿಗರ ಆಸೋಸಿಯೇಶನ್‌ಗೆ ಮಾಜಿ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 28 ವರ್ಷದ ಶೇನ್ ವ್ಯಾಟ್ಸನ್ ಅಧ್ಯಕ್ಷರಾಗಿದ್ದರೆ , ಹಾಲಿ ಕ್ರಿಕೆಟಿಗರಾದ  ಪ್ಯಾಟ್ ಕಮಿನ್ಸ್, ಕ್ರಿಸ್ಟೆನ್ ಬಿಮ್ಸ್, ಮಾಜಿ ಆಟಗಾರ್ತಿ ಲಿಸಾ ಸ್ಟಾಲೇಕರ್ ಆಸೋಸಿಯೇಶನ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ರೋಲ್ ಮಾಡೆಲ್ ಅಪ್ಪ ಅಲ್ಲ, ಕೊಹ್ಲಿ ಆಗಲು ಬಯಸಿದ ವಾರ್ನರ್ ಪುತ್ರಿ!

ಆ್ಯರೋನ್ ಫಿಂಚ್,  ಅಲ್ಯೆಸ್ಸಾ ಹೀಲೆ, ಮೊಯಿಸಿಸ್ ಹೆನ್ರಿಕೆಸ್, ನೈಲ್ ಮ್ಯಾಕ್ಸ್2ವೆಲ್, ಜನೆಟ್ ಟೊರ್ನಿ ಹಾೂ ಗ್ರೆಗ್ ಡೈಯರ್  ಆಸೀಸ್ ಕ್ರಿಕೆಟಿಗರ ಆಸೋಸಿಯೇಶನ್‌ನಲ್ಲಿರುವ ಇತರ ಸದಸ್ಯರು.

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಆಟಗಾರರ ಕ್ಷೇಮಾಭಿವೃದ್ದಿ, ಮಹಿಳಾ ಕ್ರಿಕೆಟಿಗರಗೆ ಹೆಚ್ಚಿನ ಸವಲತ್ತು ಸೇರಿದಂತೆ ಅನೇಕ ಜವಾಬ್ದಾರಿಗಳು ನನ್ನ ಮೇಲಿದೆ. ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ.  ವಿದಾಯದ ಬಳಿಕವೂ ಮತ್ತೆ ಕ್ರಿಕೆಟ್ಗಗೆ ಸೇವೆ ಸಲ್ಲಿಸುತ್ತಿರುವುವು ಸಂತಸ ತಂದಿದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಶೇನ್ ವಾಟ್ಸನ್ ಪ್ರತಿಕ್ರಿಯಿಸಿದ್ದಾರೆ.