ನವದೆಹಲಿ(ಮಾ.14): ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 80 ದಾಟಿದೆ. ಈಗಾಗಲೇ ಎರಡು ಮಂದಿ ಕೊರೋನಾ ವೈರಸ್ ಎನ್ನುವ ಹೆಮ್ಮಾರಿ ಬಲಿ ಪಡೆದುಕೊಂಡಿದೆ. ಪ್ರಧಾನಿ ಸೇರಿದಂತೆ ಹಲವರು ಕೋವಿಡ್ 19  ವಿರುದ್ಧ ಎಚ್ಚರಿಕೆಯಿಂದ ಇರಲು ಅರಿವು ಮೂಡಿಸಿದ್ದಾರೆ.

ರೋಗ ಬರೋ ಮುನ್ನ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು

ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕರೆ ನೀಡಿದ್ದಾರೆ. ' ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಕೋವಿಡ್ 19 ಹರಡದಂತೆ ಹೋರಾಡೋಣ. ಆದಷ್ಟು ಸುರಕ್ಷಿತರಾಗಿರೋಣ, ಎಚ್ಚರಿಕೆಯಿಂದಿರೋಣ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಲೇಸು ಎನ್ನುವುದು ನೆನಪಿರಲಿ ಎಂದು ಟ್ವೀಟ್ ಮಾಡಿದ್ದಾರೆ.

ಕಿವೀಸ್ ಮಾರಕ ವೇಗಿಗೂ ಕೊರೋನಾ ವೈರಸ್ ಅಟ್ಯಾಕ್..?

ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ ಬೆನ್ನಲ್ಲೇ ಕೆ.ಎಲ್. ರಾಹುಲ್ ಸಹಾ ಟ್ವೀಟ್ ಮಾಡಿದ್ದು, ಇದು ಸವಾಲಿನ ಸಮಯ. ನಾವು ಮತ್ತಷ್ಟು ಗಟ್ಟಿಯಾಗೋಣ ಹಾಗೂ ಎಲ್ಲರ ಬಗ್ಗೆಯೂ ಕಾಳಜಿಯಿರಲಿ. ಆರೋಗ್ಯ ತಜ್ಞರು ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಕೊರೋನಾದಿಂದ ದೂರವಿರೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಬೆಚ್ಚಿ ಬಿದ್ದ ನ್ಯೂಜಿಲೆಂಡ್; ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ವಾಪಸ್!

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಕ್ರಿಕೆಟ್ ಕ್ಷೇತ್ರದ ಮೇಲೆ ಕರಾಳ ಹಸ್ತ ಚಾಚಿದೆ. ಭಾರತ-ದಕ್ಷಿಣ ಆಫ್ರಿನ ನಡುವಿನ ಏಕದಿನ ಸರಣಿ ಹಾಗೂ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯೂ ಮುಂದೂಡಲ್ಪಟ್ಟಿವೆ. ಇನ್ನು ಇದೇ ಮಾರ್ಚ್ 29ರಿಂದ ನಡೆಯಬೇಕಿದ್ದ 13ನೇ ಆವೃತ್ತಿಯ ಮಿಲಿಯನ್ ಡಾಲರ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡಾ ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.  

ಕೊರೋನಾ ಸೋಂಕಿತರಿಗೆ ಸಿಗುತ್ತೆ ಕ್ಯಾಶ್, ವೈರ್‌ನಿಂದ ಸೆಕ್ಸ್ ಇಂಡಸ್ಟ್ರಿ ಮಟಾಷ್; ಮಾ.14ರ ಟಾಪ್ 10 ಸುದ್ದಿ!