ಸರ್ಕಾರದ ನಿರ್ಧಾರಕ್ಕೆ ಬೆಚ್ಚಿ ಬಿದ್ದ ನ್ಯೂಜಿಲೆಂಡ್; ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ವಾಪಸ್!

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಪ್ರೇಕ್ಷಕರ ಪ್ರವೇಶ ನಿರಾಕರಿಸಿ ಆರಂಭವಾಗಿತ್ತು. ಮೊದಲ ಪಂದ್ಯದಲ್ಲಿ ಆಸೀಸ್ 71 ರನ್ ಗೆಲುವು ಸಾಧಿಸಿತ್ತು. ಇದೀಗ ಸರಣಿಯಿಂದ ನ್ಯೂಜಿಲೆಂಡ್ ಹಿಂದೆ ಸರಿದಿದ್ದು, ಟೂರ್ನಿ ರದ್ದಾಗಿದೆ. ನ್ಯೂಜಿಲೆಂಡ್ ಸರ್ಕಾರದ ನಿರ್ಧಾರಕ್ಕೆ ಕ್ರಿಕೆಟ್ ಟೂರ್ನಿ ರದ್ದಾಗಿದೆ. 
 

Australia vs New zealand series postponed due to coronavirus

ಸಿಡ್ನಿ(ಮಾ.14): ಕೊರೋನಾ ವೈರಸ್ ಆತಂಕದ ನಡುವೆಯೂ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸರಣಿ ಆರಂಭವಾಗಿತ್ತು. ಮೊದಲ ಪಂದ್ಯ  ಖಾಲಿ ಮೈದಾನದಲ್ಲಿ ಆಡಿಸಲಾಗಿತ್ತು. ಪ್ರೇಕ್ಷಕರಿಗೆ ನಿರ್ಬಂದ ವಿದಿಸಿ ಮೊದಲ ಪಂದ್ಯ ಯಶಸ್ವಿಯಾಗಿ ನಡೆಯಿತು. ಆದರೆ ನ್ಯೂಜಿಲೆಂಡ್ ಸರ್ಕಾರದ ಒಂದು ನಿರ್ಧಾರಕ್ಕೆ ಬೆಚ್ಚಿ ಬಿದ್ದ ತಂಡ ಸರಣಿ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಸ್ ಆಗಿದೆ.

ಇದನ್ನೂ ಓದಿ: ಕೊರೋನಾ ಪರಿಣಾಮ, ಪ್ರೇಕ್ಷಕರಿಲ್ಲದೆ ಚೆಂಡು ಹುಡುಕಲು ಫೀಲ್ಡರ್‌ಗಳ ಪರದಾಟ!.

ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಜಾಸಿಂಡ ಅರ್ಡ್ರನ್ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಸೂಚನೆ ನೀಡಿದ್ದರು. ಭಾನುವಾರ(ಮಾ.15ರ ಮಧ್ಯರಾತ್ರಿ ಬಳಿಕ ನ್ಯೂಜಿಲೆಂಡ್‌‌ಗೆ ಆಗಮಿಸುವವರನ್ನು 14 ದಿನ ಪ್ರತ್ಯೇಕವಾಗಿರಿಸಿ ತಪಾಸಣೆ ನಡೆಸಲಾಗುವುದು. ಕೊರೋನಾ ವೈರಸ್ ಹರಡದಂತೆ ಕಟ್ಟು ನಿಟ್ಟಿನ ಸೂಚನೆ ಪಾಲಿಸಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ನಿರ್ಬಂಧ; ಖಾಲಿ ಕ್ರೀಡಾಂಗಣದಲ್ಲಿ ISL ಫೈನಲ್!

ನ್ಯೂಜಿಲೆಂಡ್ ಪ್ರಧಾನಿ ಘೋಷಣೆ ಮಾಡುತ್ತಿದ್ದಂತೆ ಕ್ರಿಕೆಟ್ ಪ್ರವಾಸದಲ್ಲಿದ್ದ ನ್ಯೂಜಿಲೆಂಡ್ ದಿಢೀರ್ ವಾಪಸ್ಸಾಗಲು ನಿರ್ಧರಿಸಿತು. ಕ್ರಿಕೆಟ್ ಆಸ್ಟ್ರೇಲಿಯ ಕೂಡ ನ್ಯೂಜಿಲೆಂಡ್ ತವರಿಗೆ ವಾಪಸ್ಸಾಗಲು ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ. ಈ ಮೂಲಕ ಉಳಿದ 2 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯದ ಸರಣಿ ರದ್ದಾಗಿದೆ. 
 

Latest Videos
Follow Us:
Download App:
  • android
  • ios