Asianet Suvarna News Asianet Suvarna News

T20 World Cup Final; ಆಸ್ಟ್ರೇಲಿಯಾಗೆ 173 ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್, ಯಾರಿಗೆ ಟ್ರೋಫಿ?

  • ಯಾರು ನೂತನ ಟಿ20 ವಿಶ್ವಕಪ್ ಚಾಂಪಿಯನ್?
  • ಆಸ್ಟ್ರೇಲಿಯಾಗೆ 173 ರನ್ ಟಾರ್ಗೆಟ್
  • ದುಬೈನಲ್ಲಿ ನಡೆಯುತ್ತಿರುವ ಪ್ರಶಸ್ತಿನ ಸುತ್ತಿನ ಪಂದ್ಯ
T20 World Cup Final New zealand set 173 run target to australia in Title clash dubai ckm
Author
Bengaluru, First Published Nov 14, 2021, 9:18 PM IST
  • Facebook
  • Twitter
  • Whatsapp

ದುಬೈ(ನ.14): ಪ್ರಶಸ್ತಿ ಯಾರಿಗೆ, T20 World Cup 202ರ ನೂತನ ಚಾಂಪಿಯನ್ ಯಾರು? ಈ ಕುತೂಹಲ ಇದೀಗ ಹೆಚ್ಚಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಸ್ಫೋಟಕ ಬ್ಯಾಟಿಂಗ್‌ನಿಂದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿದೆ. ಇದೀಗ ಆಸ್ಟ್ರೇಲಿಯಾ ಗೆಲುವಿಗೆ 173 ರನ್ ಸಿಡಿಸಬೇಕಿದೆ.

ನಾಯಕ ಕೇನ್ ವಿಲಿಯಮ್ಸನ್ ಸ್ಪೋಟಕ ಬ್ಯಾಟಿಂಗ್ ಕುಸಿದ ನ್ಯೂಜಿಲೆಂಡ್ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಅಲ್ಪ ಮೊತ್ತದ ಭೀತಿಯಲ್ಲಿದ್ದ ಕಿವೀಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ವಿಲಿಯಮ್ಸನ್ 48 ಎಸೆತದಲ್ಲಿ 85 ರನ್ ಸಿಡಿಸಿದರು. ನಾಯಕನ ಏಕಾಂಗಿ ಹೋರಾಟ ಇದೀಗ ಚಾಂಪಿಯನ್ ಕಿರೀಟ ಯಾರಿಗೆ ಅನ್ನೋ ಕುತೂಹಲ ಹೆಚ್ಚಿಸಿದೆ. ಕಾರಣ ದುಬೈ ಕ್ರೀಡಾಂಗಣದಲ್ಲಿ ರನ್ ಉತ್ತಮ ಮೊತ್ತವಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಇಬ್ಬನಿ ನೆರವಿದ್ದರೂ ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ.

T20 World Cup: ನ್ಯೂಜಿಲೆಂಡ್ ಎದುರಿನ ಫೈನಲ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಸಂಭಾವ್ಯ ತಂಡ ಪ್ರಕಟ

ಟಾಸ್ ಗೆದ್ದ ಆಸ್ಟ್ರೇಲಿಯಾ ಹಿಂದೂ ಮುಂದು ನೋಡದೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕಾರಣ ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟಾಸ್ ಗೆದ್ದ ಎಲ್ಲಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಗೆಲುವು ಸಾಧಿಸಿದೆ. ಇದೇ ಫಾರ್ಮುಲಾ ಇಂದು ವರ್ಕೌಟ್ ಆಗುತ್ತಾ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ 28 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಡರಿಲ್ ಮಿಚೆಲ್ ಕೇವಲ 11 ರನ್ ಸಿಡಿಸಿ ಔಟಾದರು. ಇತ್ತ ಮಾರ್ಟಿನ್ ಗಪ್ಟಿಲ್ 28 ರನ್ ಸಿಡಿಸಿ ನಿರ್ಗಮಿಸಿದರು. ಕುಸಿದ ತಂಡಕ್ಕೆ ಕೇನ್ ವಿಲಿಯಮ್ಸನ್ ಹೋರಾಟ ಬೂಸ್ಟ್ ನೀಡಿತು. ಆದರೆ ವಿಲಿಯಮ್ಸನ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. 

T20 World Cup Final: ಹೀಗಿತ್ತು ನೋಡಿ ನ್ಯೂಜಿಲೆಂಡ್ ತಂಡದ ಫೈನಲ್‌ವರೆಗಿನ ಪಯಣ

ಗ್ಲೆನ್ ಪಿಲಿಪ್ಸ್ 18 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ  ವಿಲಿಯಮ್ಸನ್ 48 ಎಸೆತದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ  85 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಜೇಮ್ಸ್ ನೀಶಮ್ ಹಾಗೂ ಟಿಮ್ ಸೈಫರ್ಟ್ ಹೋರಾಟ ನೆರವಾಯಿತು. ನೀಶಮ್ ಅಜೇಯ 13 ರನ್ ಸಿಡಿಸಿದರು. ಇತ್ತ ಸೈಫರ್ಟ್ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು.

ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್
85* ರನ್ ಮರ್ಲಾನ್ ಸಾಮ್ಯುಯೆಲ್ಸ್ vs ಇಂಗ್ಲೆಂಡ್, 2016
85 ಕೇನ್ ವಿಲಿಯಮ್ಸನ್ vs ಆಸ್ಟ್ರೇಲಿಯಾ, 2021
78 ಮರ್ಲಾನ್ ಸಾಮ್ಯುಯೆಲ್ಸ್ vs ಶ್ರೀಲಂಕಾ, 2012
77 ವಿರಾಟ್ ಕೊಹ್ಲಿ vs ಶ್ರೀಲಂಕಾ, 2014
75 ಗೌತಮ್ ಗಂಭೀರ್ vs ಪಾಕಿಸ್ತಾನ, 2007

ದುಬೈ ಕ್ರೀಡಾಂದಣಲ್ಲಿ ಯಶಸ್ವಿ ಚೇಸಿಂಗ್(T20)
180 ಆಫ್ಘಾನಿಸ್ತಾನ v ಯುಎಇ, 2016
177 ಆಸ್ಟ್ರೇಲಿಯಾ v ಪಾಕಿಸ್ತಾನ, 2021
155 ಆಸ್ಟ್ರೇಲಿಯಾ v ಶ್ರೀಲಂಕಾ, 2021
154 ಪಾಕಿಸ್ತಾನ v ನ್ಯೂಜಿಲಂಡ್, 2018
153 ಐರ್ಲೆಂಡ್ v ಆಫ್ಘಾನಿಸ್ತಾನ, 2012
152 ಪಾಕಿಸ್ತಾನ v ಭಾರತ, 2021

180ರನ್ ಟಾರ್ಗೆಟನ್ನು ದುಬೈ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. ಇದು ಆಸ್ಟ್ರೇಲಿಯಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ನ್ಯೂಜಿಲೆಂಡ್ ಬಲಿಷ್ಠ ಬೌಲಿಂಗ್ ದಾಳಿ ಹೊಂದಿದೆ. ಹೀಗಾಗಿ ಚೇಸಿಂಗ್ ಅಂದುಕೊಂಡಷ್ಟು ಸುಲಭವಲ್ಲ.
 

Follow Us:
Download App:
  • android
  • ios