Asianet Suvarna News Asianet Suvarna News

T20 World Cup 2024: ಟ್ರೋಫಿ ರೇಸ್‌ನಲ್ಲಿ 8 ತಂಡಗಳಷ್ಟೇ ಬಾಕಿ..!

ಸೂಪರ್‌-8 ಹಂತದಲ್ಲಿ ತಲಾ 4 ತಂಡಗಳ ಒಟ್ಟು 2 ಗುಂಪುಗಳು ಇರಲಿದ್ದು, ಪ್ರತಿ ತಂಡವು ಗುಂಪಿನಲ್ಲಿರುವ ಇನ್ನುಳಿದ 3 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ.

T20 World Cup 2024 Super 8 stage ready finally 8 teams ready to fight for trophy kvn
Author
First Published Jun 18, 2024, 1:51 PM IST

ಬೆಂಗಳೂರು: ಇದೇ ಮೊದಲ ಬಾರಿಗೆ 20 ತಂಡಗಳೊಂದಿಗೆ ಶುರುವಾಗಿದ್ದ ಐಸಿಸಿ ಟಿ20 ವಿಶ್ವಕಪ್‌ನಲ್ಲೀಗ ಕೇವಲ 8 ತಂಡಗಳು ಉಳಿದುಕೊಂಡಿವೆ. ಗುಂಪು ಹಂತದ ಸೆಣಸಾಟದಲ್ಲಿ ಕೆಲ ತಂಡಗಳು ಅಧಿಕಾರಯುತ ಪ್ರದರ್ಶನ ತೋರಿ, ಅಜೇಯವಾಗಿ ಸೂಪರ್‌-8 ಹಂತಕ್ಕೇರಿದರೆ, ಕೆಲ ತಂಡಗಳಿಗೆ ಉತ್ತಮ ಆಟದ ಜೊತೆ ಅದೃಷ್ಟವೂ ಕೈಹಿಡಿದಿದೆ. ಬುಧವಾರ (ಜೂ.19)ದಿಂದ ಸೂಪರ್‌-8 ಹಂತ ಆರಂಭಗೊಳ್ಳಲಿದ್ದು, ಈ ಹಂತದಲ್ಲಿ ಸೆಣಸಲಿರುವ ಎಲ್ಲಾ 8 ತಂಡಗಳು ಅಂತಿಮಗೊಂಡಿವೆ.

ಮಾದರಿ ಹೇಗೆ?: ಸೂಪರ್‌-8 ಹಂತದಲ್ಲಿ ತಲಾ 4 ತಂಡಗಳ ಒಟ್ಟು 2 ಗುಂಪುಗಳು ಇರಲಿದ್ದು, ಪ್ರತಿ ತಂಡವು ಗುಂಪಿನಲ್ಲಿರುವ ಇನ್ನುಳಿದ 3 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ. ಸೂಪರ್‌-8 ಹಂತದದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳಿಗೂ ಕೆರಿಬಿಯನ್‌ ದ್ವೀಪರಾಷ್ಟ್ರಗಳ ನಗರಗಳೇ ಆತಿಥ್ಯ ವಹಿಸಲಿವೆ.

T20 World Cup: ವೆಸ್ಟ್‌ ಇಂಡೀಸ್ ಅಬ್ಬರಕ್ಕೆ ಆಫ್ಘಾನಿಸ್ತಾನ ಅಪ್ಪಚ್ಚಿ..! ಪವರ್‌ ಪ್ಲೇನಲ್ಲಿ ರನ್ ಸುರಿಮಳೆ

ಸೂಪರ್‌-8 ಪ್ರವೇಶಿಸಿರುವ ತಂಡಗಳು

ಗುಂಪು ‘1’

ಭಾರತ (ಎ1), ಆಸ್ಟ್ರೇಲಿಯಾ (ಬಿ2), ಅಫ್ಘಾನಿಸ್ತಾನ (ಸಿ1), ಬಾಂಗ್ಲಾದೇಶ (ಡಿ2)

ಗುಂಪು ‘2’

ಅಮೆರಿಕ (ಎ2), ಇಂಗ್ಲೆಂಡ್‌ (ಬಿ1), ವೆಸ್ಟ್‌ಇಂಡೀಸ್‌ (ಸಿ2), ದಕ್ಷಿಣ ಆಫ್ರಿಕಾ (ಡಿ1)

ಗುಂಪಲ್ಲಿ ಆಸೀಸ್‌ ಅಗ್ರಸ್ಥಾನ ಪಡೆದರೂ ‘ಬಿ2’ ಸ್ಥಾನ ಏಕೆ?

ವಿಶ್ವಕಪ್‌ ಆರಂಭಕ್ಕೂ ಮೊದಲೇ ಅಗ್ರ-8 ತಂಡಗಳಿಗೆ ಶ್ರೇಯಾಂಕಗಳನ್ನು ನಿಗದಿಪಡಿಸಲಾಗಿತ್ತು. ತಂಡಗಳ ಪ್ರಯಾಣ ವ್ಯವಸ್ಥೆ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳಿಗೆ ಟಿಕೆಟ್‌ ಖರೀದಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶ್ರೇಯಾಂಕಗಳು ಪೂರ್ವ ನಿಗದಿಪಡಿಸಲಾಗಿತ್ತು. ಆ ಪ್ರಕಾರ, ಭಾರತ ‘ಎ1’, ಪಾಕಿಸ್ತಾನ ‘ಎ2’, ಇಂಗ್ಲೆಂಡ್‌ ‘ಬಿ1’, ಆಸ್ಟ್ರೇಲಿಯಾ ‘ಬಿ2’, ನ್ಯೂಜಿಲೆಂಡ್‌ ‘ಸಿ1’, ವೆಸ್ಟ್‌ಇಂಡೀಸ್‌ ‘ಸಿ2’, ದಕ್ಷಿಣ ಆಫ್ರಿಕಾ ‘ಡಿ1’, ಶ್ರೀಲಂಕಾ ‘ಡಿ2’ ಆಗಿದ್ದವು. 

4 ಓವರ್‌, 4 ಮೇಡನ್‌, 3 ವಿಕೆಟ್‌: ಲಾಕಿ ಫರ್ಗ್ಯೂಸನ್‌ ಬೆಂಕಿ ಬೌಲಿಂಗ್ ಗುಣಗಾನ ಮಾಡಿದ ವಿಲಿಯಮ್ಸನ್‌..!

ಒಂದು ವೇಳೆ ಗುಂಪಿನಲ್ಲಿ ನಿಗದಿತ ಸ್ಥಾನವನ್ನು ಬೇರೆ ತಂಡಗಳು ಪಡೆದರೆ, ಆ ಶ್ರೇಯಾಂಕ ಆ ತಂಡಕ್ಕೆ ನೀಡಲಾಗುತ್ತದೆ. ಉದಾಹರಣೆಗೆ ‘ಸಿ’ ಗುಂಪಿನಲ್ಲಿದ್ದ ನ್ಯೂಜಿಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ, ಆ ಸ್ಥಾನ ಆಫ್ಘನ್‌ ಪಾಲಾಗಿದೆ. ಅದೇ ರೀತಿ ಪಾಕಿಸ್ತಾನ ಹೊರಬಿದ್ದ ಕಾರಣ, ಆ ಸ್ಥಾನ ಅಮೆರಿಕಕ್ಕೆ ಸಿಕ್ಕಿದೆ. ಇನ್ನು ‘ಬಿ’ ಗುಂಪಿನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆದರೂ, ತಂಡಕ್ಕೆ ‘ಬಿ2’ ಶ್ರೇಯಾಂಕ ನೀಡಿದ್ದಾಗಿದ್ದ ಕಾರಣ, ಆಸೀಸ್‌ ಸೂಪರ್‌-8 ಹಂತವನ್ನು ‘ಬಿ2’ ಆಗಿಯೇ ಪ್ರವೇಶ ಮಾಡಲಿದೆ.

ಸೂಪರ್‌-8 ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ ಸಮಯ (*ಭಾರತೀಯ ಕಾಲಮಾನ)

ಜೂ.19 ದ.ಆಫ್ರಿಕಾ vs ಅಮೆರಿಕ ನಾರ್ಥ್‌ ಸೌಂಡ್‌ ರಾ.8ಕ್ಕೆ

ಜೂ.20 ವಿಂಡೀಸ್‌ vs ಇಂಗ್ಲೆಂಡ್‌ ಗ್ರಾಸ್‌ ಐಲೆಟ್‌ ಬೆ.6ಕ್ಕೆ

ಜೂ.20 ಭಾರತ vs ಆಫ್ಘನ್‌ ಬ್ರಿಡ್ಜ್‌ಟೌನ್‌ ರಾ.8ಕ್ಕೆ

ಜೂ.21 ಆಸ್ಟ್ರೇಲಿಯಾ vs ಬಾಂಗ್ಲಾ ನಾರ್ಥ್‌ಸೌಂಡ್‌ ಬೆ.6ಕ್ಕೆ

ಜೂ.21 ಇಂಗ್ಲೆಂಡ್‌ vs ದ.ಆಫ್ರಿಕಾ ಗ್ರಾಸ್‌ ಐಲೆಟ್‌ ರಾ.8ಕ್ಕೆ

ಜೂ.22 ವಿಂಡೀಸ್‌ vs ಅಮೆರಿಕ ಬ್ರಿಡ್ಜ್‌ಟೌನ್‌ ಬೆ.6ಕ್ಕೆ

ಜೂ.22 ಭಾರತ vs ಬಾಂಗ್ಲಾ ನಾರ್ಥ್‌ಸೌಂಡ್‌ ರಾ.8ಕ್ಕೆ

ಜೂ.23 ಆಫ್ಘನ್‌ vs ಆಸ್ಟ್ರೇಲಿಯಾ ಕಿಂಗ್‌ಸ್ಟನ್‌ ಬೆ.6ಕ್ಕೆ

ಜೂ.23 ಇಂಗ್ಲೆಂಡ್‌ vs ಅಮೆರಿಕ ಬ್ರಿಡ್ಜ್‌ಟೌನ್‌ ರಾ.8ಕ್ಕೆ

ಜೂ.24 ವಿಂಡೀಸ್‌ vs ದ.ಆಫ್ರಿಕಾ ನಾರ್ಥ್‌ಸೌಂಡ್‌ ಬೆ.6ಕ್ಕೆ

ಜೂ.24 ಭಾರತ vs ಆಸ್ಟ್ರೇಲಿಯಾ ಗ್ರಾಸ್‌ ಐಲೆಟ್‌ ರಾ.8ಕ್ಕೆ

ಜೂ.25 ಆಫ್ಘನ್‌ vs ಬಾಂಗ್ಲಾ ಕಿಂಗ್‌ಸ್ಟನ್‌ ಬೆ.6ಕ್ಕೆ


 

Latest Videos
Follow Us:
Download App:
  • android
  • ios