ಸೋಮವಾರ ಪಪುವಾ ನ್ಯೂ ಗಿನಿ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಲಾಕಿ, 4 ಓವರಲ್ಲಿ 4 ಮೇಡನ್‌ ಎಸೆದು 3 ವಿಕೆಟ್‌ ಕಿತ್ತರು. ಟಿ20 ಪಂದ್ಯವೊಂದರಲ್ಲಿ 4 ಓವರ್‌ ಮೇಡನ್‌ ಹಾಕಿದ ವಿಶ್ವದ ಕೇವಲ 3ನೇ ಬೌಲರ್‌ ಲಾಕಿ. ಕೆನಡಾದ ಸಾದ್‌ ಝಫರ್‌, ವಿದರ್ಭದ ಅಕ್ಷಯ್‌ ಕರ್ನೇವಾರ್‌ ಸಹ ಈ ಸಾಧನೆ ಮಾಡಿದ್ದರು.

ತರೌಬ: ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಎನ್ನುವ ದಾಖಲೆಯನ್ನು ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಬರೆದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾವೊಬ್ಬ ಬೌಲರ್ ಮಾಡದ ದಾಖಲೆಯನ್ನು ನಿರ್ಮಿಸಿದ ಲಾಕಿ ಬಗ್ಗೆ ನಾಯಕ ಕೇನ್ ವಿಲಿಯಮ್ಸನ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಪಪುವಾ ನ್ಯೂ ಗಿನಿ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಲಾಕಿ, 4 ಓವರಲ್ಲಿ 4 ಮೇಡನ್‌ ಎಸೆದು 3 ವಿಕೆಟ್‌ ಕಿತ್ತರು. ಟಿ20 ಪಂದ್ಯವೊಂದರಲ್ಲಿ 4 ಓವರ್‌ ಮೇಡನ್‌ ಹಾಕಿದ ವಿಶ್ವದ ಕೇವಲ 3ನೇ ಬೌಲರ್‌ ಲಾಕಿ. ಕೆನಡಾದ ಸಾದ್‌ ಝಫರ್‌, ವಿದರ್ಭದ ಅಕ್ಷಯ್‌ ಕರ್ನೇವಾರ್‌ ಸಹ ಈ ಸಾಧನೆ ಮಾಡಿದ್ದರು. ಅವರಿಬ್ಬರೂ ತಲಾ 2 ವಿಕೆಟ್‌ ಕಿತ್ತಿದ್ದರು. ಕೆನಡಾದ ಸಾದ್‌ ಝಫರ್‌ 2021ರ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪನಾಮಾ ಎದುರು 4 ಓವರ್‌ನಲ್ಲಿ 4 ಮೇಡನ್ ಓವರ್ ಮಾಡಿ 2 ವಿಕೆಟ್ ಕಬಳಿಸಿದ್ದರು.

ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್‌..!

ಇನ್ನು ಲಾಕಿ ಫರ್ಗ್ಯೂಸನ್ ಬೌಲಿಂಗ್ ಪ್ರದರ್ಶನವನ್ನು ನಾಯಕ ಕೇನ್ ವಿಲಿಯಮ್ಸನ್‌ ಕೊಂಡಾಡಿದ್ದಾರೆ. " ಇದು ನಿಜಕ್ಕೂ ಅತ್ಯದ್ಬುತವಾದ ಬೌಲಿಂಗ್ ಆಗಿತ್ತು. ಈ ರೀತಿಯ ಬೌಲಿಂಗ್ ಪ್ರದರ್ಶನ ನಮಗೆ ಪದೇ ಪದೇ ನೋಡಲು ಸಿಗುವುದಿಲ್ಲ. ಆದರೆ ಲಾಕಿ ಸ್ಥಿರವಾಗಿ ಬೌಲಿಂಗ್ ಪ್ರದರ್ಶನ ತೋರಿದ್ದರಿಂದ ಯಶಸ್ಸು ಸಿಕ್ಕಿತು. ಅದರಲ್ಲೂ 4 ಓವರ್ ಮೇಡನ್ ಮಾಡಿದ್ದು ನಿಜಕ್ಕೂ ಅದ್ಭುತವಾಗಿತ್ತು" ಎಂದು ಹೇಳಿದ್ದಾರೆ.

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. ಇನ್ನು ಕೇನ್ ವಿಲಿಯಮ್ಸನ್ ಕೂಡಾ ಈ ಬಾರಿ ದಯನೀಯ ಬ್ಯಾಟಿಂಗ್ ವೈಪಲ್ಯ ಅನುಭವಿಸಿದ್ದಾರೆ. 4 ಪಂದ್ಯಗಳನ್ನಾಡಿದ ವಿಲಿಯಮ್ಸನ್ ಕೇವಲ 14ರ ಬ್ಯಾಟಿಂಗ್ ಸರಾಸರಿಯಲ್ಲಿ 28 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 

T20 World Cup 2024: ಟೀಂ ಇಂಡಿಯಾ ಆಟಗಾರರ ಜತೆ ಕಾಣಿಸಿಕೊಂಡ 'ನಿಗೂಢ ವ್ಯಕ್ತಿ'..! ವಿಡಿಯೋ ವೈರಲ್

ಟಿ20: ಪಪುವಾ ನ್ಯೂ ಗಿನಿ ವಿರುದ್ಧ ಕಿವೀಸ್‌ಗೆ ಗೆಲುವು

ತರೌಬ: ಟಿ20 ವಿಶ್ವಕಪ್ ಅಭಿಯಾನವನ್ನು ನ್ಯೂಜಿಲೆಂಡ್ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಸೋಮವಾರ ನಡೆದ ಪಪುವಾ ನ್ಯೂ ಗಿನಿ ವಿರುದ್ಧದ ಪಂದ್ಯದಲ್ಲಿ ಕಿವೀಸ್ 7 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಪುವಾ, 19.4 ಓವರಲ್ಲಿ 78 ರನ್‌ಗೆ ಆಲೌಟ್ ಆಯಿತು. ಫರ್ಗ್ಯೂಸನ್ 3, ಬೌಲ್ಟ್, ಸೌಥಿ ಹಾಗೂ ಸೋಧಿ ತಲಾ 2 ವಿಕೆಟ್ ಕಿತ್ತರು. ನ್ಯೂಜಿಲೆಂಡ್ 12.2 ಓವರಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಕಲೆಹಾಕಿ, ಜಯಿಸಿತು. ಕಾನ್‌ವೇ 35 ರನ್ ಗಳಿಸಿದರು.