Asianet Suvarna News Asianet Suvarna News

ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!

ವಿರಾಟ್ ಕೊಹ್ಲಿ ಕ್ರಿಕೆಟ್‌ನ ಉತ್ತುಂಗ ಹಾಗೂ ಪಾತಾಳ ಎರಡೂ ಅನುಭವಿಸಿದ್ದಾರೆ. ಸತತ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರೆ. ಸತತ ಕಳಫೆ ಫಾರ್ಮ್ ಮೂಲಕ ಟೀಕೆಯೂ ಅನುಭವಿಸಿದ್ದಾರೆ. ಆದರೆ ಯಾವತ್ತೂ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಕಣ್ಣೀರಿಟ್ಟಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕೊಹ್ಲಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇತ್ತ ದಿಗ್ಗಜರು ಕೊಹ್ಲಿಗೆ ಸಲಾಂ ಹೇಳಿದ್ದಾರೆ.
 

T20 World cup 2022 Virat kohli emotional unable to control his tears after memorable innings against Pakistan ckm
Author
First Published Oct 23, 2022, 8:56 PM IST

ಮೆಲ್ಬೋರ್ನ್(ಅ.23): ಪಾಕಿಸ್ತಾನ ವಿರುದ್ದದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು. 53 ಎಸೆತದಲ್ಲಿ ಅಜೇಯ 82 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ದೀಪಾವಳಿ ಸಂಭ್ರಮ ಡಬಲ್ ಮಾಡಿದರು. ಅಂತಿಮ ಎಸೆತದಲ್ಲಿ ಭಾರತ ಗೆಲವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಎಂದಿನಂತೆ ಅಗ್ರೆಶನ್ ಸೆಲೆಬ್ರೆಷನ್ ಮಾಡಿದ್ದಾರೆ. ಆದರೆ ಈ ಸೆಲೆಬ್ರೇಷನ್ ಅಂತ್ಯದಲ್ಲಿ ಕೊಹ್ಲಿ ಕಣ್ಣೀರಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಣ್ಮೀರಿಟ್ಟಿದ್ದಾರೆ. ಅದೆಂತಾ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕೊಹ್ಲಿ ಈ ಬಾರಿ ನಿಯಂತ್ರಿಸಲು ಸಾಧ್ಯವಾಗದೆ ಆನಂದ ಬಾಷ್ಪ ಸುರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಸ್ಫೋಟಕ ಇನ್ನಿಂಗ್ಸ್ ಮೂಲಕ ಪಂದ್ಯ ಗೆಲ್ಲಿಸಿಕೊಡುತ್ತಿರುವುದು ಇದು ಮೊದಲಲ್ಲ. ಪಾಕಿಸ್ತಾನ ಸೇರಿದಂತೆ ಎಲ್ಲಾ ಬಲಿಷ್ಠ ತಂಡಗಳ ವಿರುದ್ಧ ಕೊಹ್ಲಿ ಹೋರಾಡಿ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಪಾಕಿಸ್ತಾನ ವಿರುದ್ಧ ಸ್ಫೋಟಕ ಇನಿಂಗ್ಸ್ ಮೂಲಕ ಟೀಂ ಇಂಡಿಯಾಗೆ ಗೆಲುವು ನೀಡಿರುವುದರಲ್ಲಿ ಹಲವು ವಿಶೇಷತೆಗಳಿವೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಟೂರ್ನಿಯಲ್ಲಿನ ಸೋಲು, ಸತತ ಕಳಪೆ ಫಾರ್ಮ್‌ನಿಂದ ಎದುರಿಸಿದ ಟೀಕೆಗಳಿಂದ ಕೊಹ್ಲಿ ಝರ್ಝರಿತರಾಗಿದ್ದರು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಲ್ಲಾ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ದಿಟ್ಟ ಹೋರಾಟ ನೀಡಿದರು. ಇಷ್ಟೇ ಅಲ್ಲ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. 

ಕೊಹ್ಲಿ ಆಟಕ್ಕೆ ಪಾಕಿಸ್ತಾನ ಕಂಗಾಲು, ದಿಗ್ಗಜರ ದಾಖಲೆ ಪುಡಿಯಾಯ್ತು ಹಲವು!

ಆರ್ ಅಶ್ವಿನ್ ಅಂತಿಮ ಎಸೆತದಲ್ಲಿ ಬೌಂಡರಿ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮ ಆರಂಭಗೊಂಡಿದೆ. ಆಕ್ರಮಣಕಾರಿ ಸಂಭ್ರಮ ಆಚರಿಸಿದ ಕೊಹ್ಲಿ ಬಳಿಕ ಆನಂದಬಾಷ್ಪ ಸುರಿಸಿದರು. ವಿರಾಟ್ ಕೊಹ್ಲಿಯನ್ನು ಟೀಂ ಇಂಡಿಯಾ ಆಟಗಾರರು ಸುತ್ತುವರೆದರು. ನಾಯಕ ರೋಹಿತ್ ಶರ್ಮಾ ಓಡಿ ಬಂದು ಕೊಹ್ಲಿ ಎತ್ತಿ ಸಂಭ್ರಮ ಆಚರಿಸಿದರು. ಅಲ್ಲೀವರೆಗೆ ನಿಯಂತ್ರಿಸಿಕೊಂಡಿದ್ದ ಕೊಹ್ಲಿ ಆನಂದ ಬಾಷ್ಪ ಸುರಿಸಿದರು. 

 

 

ಈ ಕುರಿತು ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಹಲವು ವರ್ಷಗಳಿಂದ ಹತ್ತಿರದಿಂದ ನೋಡಿದ್ದೇನೆ. ಗಮನಿಸಿದ್ದೇನೆ. ಆದರೆ ಇದುವರೆಗೂ ಆನಂದ ಬಾಷ್ಪ ಕಂಡಿರಲಿಲ್ಲ. ಇದು ಮರೆಯಲಾಗದ ಕ್ಷಣ ಎಂದು ಬೋಗ್ಲೆ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧ 160 ರನ್ ಚೇಸಿಂಗ್ ಟೀಂ ಇಂಡಿಯಾ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಕಾರಣ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಬಹುಬೇಗನೆ ಪೆವಿಲಿಯನ್ ಸೇರಿದರು. ಇನ್ನು ಅಕ್ಸರ್ ಪಟೇಲ್ ಕೂಡ ಅಬ್ಬರಿಸಲಿಲ್ಲ. ಆದರೆ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಹಾರ್ದಿಕ್ ಪಾಂಡ್ಯ ಜೊತೆಗೂಡಿ ಪಾಕಿಸ್ತಾನ ವಿರುದ್ದ ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದರು. 53 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 82 ರನ್ ಸಿಡಿಸಿದರು. 

ರೋಚಕ ಗೆಲುವು ಮಾತ್ರವಲ್ಲ,ದಾಖಲೆ ನಿರ್ಮಿಸಿದ ಪಾಕಿಸ್ತಾನ ಧೂಳೀಪಟ ಮಾಡಿದ ಭಾರತ! 

ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಕೈಚೆಲ್ಲಿದರು. ಆದರೆ ಕೊಹ್ಲಿ ಕೈಬಿಡಲಿಲ್ಲ.ಇತ್ತ ದಿನೇಶ್ ಕಾರ್ತಿಕ್ ವಿಕೆಟ್ ಪತನಗೊಂಡಾಗಲು ಆತಂಕ ಮನೆ ಮಾಡಿತ್ತು. ಆದರೆ ಕೊಹ್ಲಿ ಎಲ್ಲವನ್ನೂ ನಿಭಾಯಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

Follow Us:
Download App:
  • android
  • ios